Top

ಭಾರತಕ್ಕೆ ನವೆಂಬರ್​ನಲ್ಲಿ 4 ರಫೇಲ್​ ಜೆಟ್​​ ಯುದ್ಧವಿಮಾನ ಸೇರ್ಪಡೆ ಸಾಧ್ಯತೆ

ಇನ್ನು ಒಂದು ತಿಂಗಳಲ್ಲಿ ಭಾರತಕ್ಕೆ ನಾಲ್ಕು ರಫೇಲ್ ಜೆಟ್​ ಯುದ್ಧವಿಮಾನಗಳು ಬಂದಿಳಿಯುವ ಸಾಧ್ಯತೆಯಿದೆ

ಭಾರತಕ್ಕೆ ನವೆಂಬರ್​ನಲ್ಲಿ 4 ರಫೇಲ್​ ಜೆಟ್​​ ಯುದ್ಧವಿಮಾನ ಸೇರ್ಪಡೆ ಸಾಧ್ಯತೆ
X

ನವದೆಹಲಿ: ಭಾರತೀಯ ವಾಯುಪಡೆಯು (ಐಎಎಫ್‌) ಎರಡನೇ ಹಂತದಲ್ಲಿ 4 ರಫೇಲ್ ಜೆಟ್​ ಯುದ್ಧ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳುವ ತಯಾರಿಯಲ್ಲಿದ್ದು, ಈಗಾಗಲೇ ಫ್ರಾನ್ಸ್‌ಗೆ ತಂಡವನ್ನು ಕಳುಹಿಸಿದೆ.

ಫ್ರಾನ್ಸ್‌ನ ಸೇಂಟ್-ಡಿಜಿಯರ್ ವಾಯುನೆಲೆಯಲ್ಲಿ ತರಬೇತಿ ಪಡೆಯುತ್ತಿರುವ ಪೈಲಟ್‌ಗಳ ಕಾರ್ಯಕ್ಷಮತೆ ಹಾಗೂ ರಫೇಲ್ ಜೆಟ್​ನ ಯುದ್ಧವಿಮಾನಗಳ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಭಾರತೀಯ ಅಧಿಕಾರಿಗಳು ಫ್ರಾನ್ಸ್‌ಗೆ ತೆರಳಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಭಾರತಕ್ಕೆ ನಾಲ್ಕು ರಫೇಲ್ ಯುದ್ಧವಿಮಾನಗಳು ಬಂದಿಳಿಯುವ ಸಾಧ್ಯತೆಯಿದೆ.

ಸದ್ಯ ಫ್ರಾನ್ಸ್​​ ಇಲ್ಲಿಯವರೆಗೆ ಹತ್ತು ರಫೇಲ್ ಜೆಟ್​ ಯುದ್ಧವಿಮಾನಗಳನ್ನು ಭಾರತಕ್ಕೆ ಕಳುಹಿಸಲಾಗಿದೆ. ಇವುಗಳಲ್ಲಿ ಐದು ರಫೇಲ್ ಜೆಟ್​ ಯುದ್ಧವಿಮಾನಗಳನ್ನು ಫ್ರಾನ್ಸ್‌ನಲ್ಲಿಯೇ ಉಳಿಸಲಾಗಿದ್ದು, ಅಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದಾರೆ.

ಭಾರತವು ಫ್ರಾನ್ಸ್ ದೇಶದಿಂದ 59 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಇದರಲ್ಲಿ ಮೊದಲ ಹಂತದಲ್ಲಿ ಐದು ರಫೇಲ್ ಜೆಟ್​ ಯುದ್ಧವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿವೆ.

Next Story

RELATED STORIES