Top

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್‌ ಹೊಸ ಪ್ರಕರಣಗಳು ಪತ್ತೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್‌ ಹೊಸ ಪ್ರಕರಣಗಳು ಪತ್ತೆ
X

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 1,17,34,058 ಕ್ಕೆ ಏರಿಕೆಯಾಗಿದೆ. ಆ ಪೈಕಿ 1,60,441 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 1,12,05,160 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,68,457 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರ 2,31,942, ಕೇರಳ 24,192, ಪಂಜಾಬ್‌ 19,403, ಕರ್ನಾಟಕ 15,614, ಚಂಡೀಗಡ 10,491, ತಮಿಳುನಾಡಿನಲ್ಲಿ 9,145 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

Next Story

RELATED STORIES