Top

COVID 19 India Updates: ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಸೋಂಕು ಪತ್ತೆ

ದೇಶದಲ್ಲಿ ಈವರೆಗೆ ಒಟ್ಟು 1,15,55,284 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,59,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

COVID 19 India Updates: ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಸೋಂಕು ಪತ್ತೆ
X

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೋವಿಡ್​ 19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,188 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಸದ್ಯ ದೇಶದಲ್ಲಿ ಈವರೆಗೆ ಒಟ್ಟು 1,15,55,284 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,59,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇರುವರೆಗೂ 1,11,07,332 ಸೋಂಕಿತರು ಚೇತರಿಕೆಯಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 2,88,394 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯತನಕ 4,20,63,392 ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ದೇಶದಲ್ಲೇ ಸೋಂಕು ಪ್ರಕರಣಗಳ ಪೈಕಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ 24,22,021 ಜನರಿಗೆ ಸೋಂಕು ತಗುಲಿದ್ದು, 1,78,848 ಸಕ್ರಿಯ ಪ್ರಕರಣಗಳಿವೆ. ಈವರೆಗೆ 21,89,965 ಜನರು ಸೋಂಕಿನಿಂದ ಗುಣಮುಖರಾಗಿದ್ದು, 53,208 ಜನರು ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೇರಳದಲ್ಲಿ ಒಟ್ಟಾರೆ 11,00,275 ಜನರಿಗೆ ಸೋಂಕು ತಗುಲಿದೆ. 25,465 ಸಕ್ರಿಯ ಪ್ರಕರಣಗಳೊಂದಿಗೆ 10,70,343 ಜನರು ಗುಣಮುಖರಾಗಿದ್ದು, 4,467 ಜನರು ಸಾವಿಗೀಡಾಗಿದ್ದಾರೆ.

Next Story

RELATED STORIES