ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧಿಕರ ವಿಚಾರಣೆ ನಡೆಸಿದ ಸಿಬಿಐ

X
Admin 215 March 2021 2:03 PM GMT
ಕೋಲ್ಕತ್ತ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಕೇಸ್ಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧಿಕರನ್ನು ಇಂದು ಸಿಬಿಐ ವಿಚಾರಣೆ ನಡೆಸಿದ್ದಾರೆ.
ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಅತ್ತಿಗೆ ಮೇನಕಾ ಗಂಭೀರ್ ಅವರ ಪತಿ ಅಂಕುಶ್ ಅರೋರಾ ಮತ್ತು ಅಂಕುಶ್ ಅವರ ತಂದೆ ಪವನ್ ಅರೋರಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದೆ.
ಈ ಸಂಬಂಧ ಶುಕ್ರವಾರ ಇಬ್ಬರಿಗೂ ಅಧಿಕಾರಿಗಳು ನೋಟಿಸ್ ನೀಡದ್ದರು. ಅಭಿಷೇಕ್ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಕೂಡ ಆಗಿದ್ದಾರೆ.
ಫೆಬ್ರುವರಿ 23ರಂದು ಬ್ಯಾನರ್ಜಿ ಅವರ ನಿವಾಸದ ಮೇಲೆ ಸಿಬಿಐ ತಂಡ ದಾಳಿ ನಡೆಸಿತ್ತು.
Next Story