Top

ಪ್ರಭಾಸ್​ ಪಾಲಾಗಿದ್ದು ಉಗ್ರಂ ಅಥವಾ ಉಗ್ರಂ ವೀರಂ..? ಏನಿದು ಸಲಾರ್ ಸೀಕ್ರೆಟ್..?

ಸಲಾರ್​ನಲ್ಲಿ ಉಗ್ರರೂಪ ತಾಳಲಿದ್ದಾರಾ ಪ್ರಭಾಸ್​..?

ಪ್ರಭಾಸ್​ ಪಾಲಾಗಿದ್ದು ಉಗ್ರಂ ಅಥವಾ ಉಗ್ರಂ ವೀರಂ..? ಏನಿದು ಸಲಾರ್ ಸೀಕ್ರೆಟ್..?
X

ಕೆಜಿಎಫ್​ ಸಾರಥೀ ಪ್ರಶಾಂತ್​ ನೀಲ್​, ಟಾಲಿವುಡ್​​ ಸ್ಟಾರ್ ಪ್ರಭಾಸ್​ಗೆ ಆ್ಯಕ್ಷನ್​ ಕಟ್ ಹೇಳೋ ಸುದ್ದಿ ಅನೌನ್ಸ್​ ಆದಾಗಿನಿಂದ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇದೆ..ಆದ್ರೆ ಇದೀಗ ಸಲಾರ್ ಸಿನಿಮಾದ ಕಥೆಯ ಬಗ್ಗೆ ಚರ್ಚೆ ಶುರುವಾಗಿದೆ..ಇದು ಉಗ್ರಂ ಸಿನಿಮಾ ರಿಮೇಕ್​ ಅಂತ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಉಗ್ರಂ ವೀರಂ ಕಥೆಯೇ ಸಲಾರ್​ ಆಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.

ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಕೇವಲ ಅನೌನ್ಸ್ ಆದಾಗಿನಿಂದಲೇ ಮೌಂಟ್ ಎವರೆಸ್ಟ್ ಎತ್ತರಕ್ಕೂ ಮೀರಿದ ನಿರೀಕ್ಷೆ ಈ ಚಿತ್ರದ ಮೇಲಿದೆ. ಅದಕ್ಕೆ ಕಾರಣ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್.


ಒಂದು ಕಡೆ ಬಾಹುಬಲಿ ಮೂಲಕ ತೆಲುಗು ಚಿತ್ರರಂಗದ ಮಾರುಕಟ್ಟೆಯನ್ನ ಜಾಗತಿಕ ‌ಮಟ್ಟಕ್ಕೆ ಏರಿಸಿದ ನಟ, ಇನ್ನೊಂದು ಕಡೆ ಕರ್ನಾಟಕಕಷ್ಟೇ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ನ್ಯಾಷನಲ್‌ ಲೆವಲ್ ಗೆ ಕೊಂಡೊಯ್ದ ನಿರ್ದೇಶಕ. ಇವರಿಬ್ಬರು ಈಗ ಒಟ್ಟಾಗಿದ್ದಾರೆ ಅಂದ್ರೆ ಭೂಮಿ ಆಕಾಶ ಒಂದಾದಂತಾಗಿದೆ. ಕೆಜಿಎಫ್ ಸೃಷ್ಟಿಕರ್ತನ ಬತ್ತಳಿಕೆಯಲ್ಲಿರುವ ಸಲಾರ್ ಅಸ್ತ್ರ ಈಗ ಭಾರಿ ಸದ್ದು ಮಾಡುತ್ತಿದೆ. ಇದೇ ಸಲಾರ್ ಚಿತ್ರದ ಬಗ್ಗೆ ಗುಸುಗುಸು ಗಾಸಿಫ್​ವೊಂದು ಶುರುವಾಗಿದೆ.

ಸಲಾರ್ ಸಿನಿಮಾ ಸ್ಯಾಂಡಲ್​ವುಡ್​ನ ಉಗ್ರಂ ವೀರಂ, ಅಥವಾ ಉಗ್ರಂ ಅನ್ನೋ ಚರ್ಚೆ ಶುರುವಾಗಿದೆ. ರೋರಿಂಗ್​​ ಸ್ಟಾರ್​​ ಶ್ರೀಮುರಳಿಗಾಗಿ ಬರೆದಿದ್ದ ಕಥೆ ಟಾಲಿವುಡ್​​ ಬಾಹುಬಲಿ ಡಾರ್ಲಿಂಗ್​​ ಪ್ರಭಾಸ್​ ಪಾಲಾಗಿದೆ ಅನ್ನು ಬಗ್ಗೆ ಗುಸು ಗುಸು ಶುರುವಾಗಿದೆ. ಉಗ್ರಂ ಸಿನಿಮಾದ ನಂತರ ಉಗ್ರಂ ವೀರಂ ಬರಲಿದೆ ಅಂತ ಮಾತುಗಳು ಕೇಳಿಬಂದಿದ್ದವು. ಉಗ್ರಂ ವೀರಂ, ಉಗ್ರಂ ಸಿನಿಮಾದ ಮುಂದುವರೆದ ಭಾಗ ಎಂದು ಹೇಳಲಾಗಿತ್ತು. ಆದರೆ, ಈಗ ಉಗ್ರಂ ವೀರಂ ಕಥೆ ಸಲಾರ್​ ಸಿನಿಮಾವಾಗಿದೆ. ಅಂದು ಪ್ರಶಾಂತ್​, ತನ್ನ ಭಾವ ಶ್ರೀಮುರಳಿಗಾಗಿ ಬರೆದುಕೊಂಡ ಲೈನ್​​ ಅನ್ನೇ ಸಲಾರ್​ ಸಿನಿಮಾವನ್ನಾಗಿಸಿದ್ದಾರೆ ಅನ್ನೋದು ಸದ್ಯ ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿರೋ ಸುದ್ದಿ.


ಉಗ್ರಂ ರೋರಿಂಗ್ ಸ್ಟಾರ್ ಶ್ರೀಮುರುಳಿ ಬದುಕು ಬದಲಾಯಿಸಿದ ಸಿನಿಮಾ. ಇದೇ ಸಿನಿಮಾ ರಿಮೇಕ್ ಆಗುತ್ತಾ ಅನ್ನೋ ಬಗ್ಗೆ ಪ್ರಶ್ನೆ ಎದ್ದಿದೆ. ಸಲಾರ್ ಕಥೆ ಉಗ್ರಂ ವೀರಂದಲ್ಲ ಬದಲಾಗಿ ಉಗ್ರಂ ಸಿನಿಮಾವೇ ರಿಮೇಕ್ ಆಗ್ತಿದೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಹೀಗಾಗಿ ಕನ್ನಡದ ಮುಗೋರ್, ಬಿಹಾರ್ ಅಥವಾ ಇನ್ಯಾವುದೋ ಬ್ಯಾಕ್ ಡ್ರಾಪ್​ನಲ್ಲಿ ಮರುಸೃಷ್ಟಿಯಾಗಲಿದೆ. ಇಲ್ಲಿಯ ಅಗಸ್ತ್ಯ ಅಲ್ಲಿ ಸಲಾರ್ ಆಗಿ ಅಬ್ಬರಿಸಲಿದ್ದಾನೆ ಅನ್ನೋದು ಗಾಂಧಿ ನಗರದ ಗಲ್ಲಿಗಳಲ್ಲಿ ಹರಡಿರೋ ಗಾಸಿಪ್. ಇದು ಎಷ್ಟರ‌ಮಟ್ಟಿಗೆ ನಿಜ ಅಂತ ತಿಳಿಯೋಕೆ ಒಂದಷ್ಟು ದಿನಗಳಾದರೂ ಕಾಯಲೇಬೇಕು.

ಪ್ರಶಾಂತ್​​ ನೀಲ್​​ ಭಾರತೀಯ ಚಿತ್ರರಂಗ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ. ಕನ್ನಡದಲ್ಲಿ 2 ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನೀಲ್​, ಈಗ ಟಾಲಿವುಡ್​​ನ ಬಾಹುಬಲಿಗೆ ಆ್ಯಕ್ಷನ್​​ ಕಟ್​ ಹೇಳೋಕೆ ರೆಡಿಯಾಗ್ತಿದ್ದಾರೆ. ಸಲಾರ್​​ ಯಾವ ಸಿನಿಮಾದ ಕಥೆ ಅನ್ನೋದು ಗೊತ್ತಾಗಬೇಕು ಅಂದ್ರೆ ಇನ್ನು ಹಲವು ವರ್ಷಗಳ ಕಾಲ ಕಾಯಲೇಬೇಕು.

Next Story

RELATED STORIES