Top

ಕೆಜಿಎಫ್​ 2 ಕ್ಲೈಮಾಕ್ಸ್:​​ ಸಂಜಯ್​ದತ್ ಜೊತೆ ರಾಕಿಂಗ್​ ಸ್ಟಾರ್ ಶರ್ಟ್​ ಲೆಸ್​ ಫೈಟ್.!?

ಕೆಜಿಎಫ್​ ಚಾಪ್ಟರ್​ 2ನ ಕ್ಲೈಮಾಕ್ಸ್​ ಫೈಟ್​ನಲ್ಲಿ ರಾಕಿಭಾಯ್​ ಶರ್ಟ್​ಲೆಸ್​ ಆಗಿ ಕಾಣಿಸಿಕೊಳ್ತಾರೆ ಅನ್ನೋದೇ ಸದ್ಯದ ಹಾಟ್ ನ್ಯೂಸ್.

ಕೆಜಿಎಫ್​ 2 ಕ್ಲೈಮಾಕ್ಸ್:​​ ಸಂಜಯ್​ದತ್ ಜೊತೆ ರಾಕಿಂಗ್​ ಸ್ಟಾರ್ ಶರ್ಟ್​ ಲೆಸ್​ ಫೈಟ್.!?
X

ಇಂಡಿಯನ್ ಸಿನಿ ಇಂಡಸ್ಟ್ರಿಯ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಕೆಜಿಎಫ್ 2 ಅಡ್ಡಾದಿಂದ ಒಂದೊಂದೇ ಹೊಸ ಹೊಸ ಸುದ್ದಿ ಹೊರಬರ್ತಾನೇ ಇದೆ. ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಾಗ್ತಾನೇ ಇದೆ. ಸದ್ಯ ಕೆಜಿಎಫ್​ ಕ್ಲೈಮಾಕ್ಸ್​ ನಲ್ಲಿ ನಡೆಯೋ ಅಧೀರ ಮತ್ತು ರಾಕಿಭಾಯ್​ ಕಾಳಗದ ಬಗ್ಗೆ ಲೇಟೇಸ್ಟ್ ನ್ಯೂಸ್​ವೊಂದು ಸಿಕ್ಕಿದೆ.

ಕೆಜಿಎಫ್​ 2. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಲಾಕ್​ಡೌನ್​ ನಂತರ ಕೆಜಿಎಫ್ 2 ಶೂಟಿಂಗ್​ ಭರದಿಂದ ಸಾಗುತ್ತಿದ್ದು, ಒಂದೊಂದೇ ಇಂಟ್ರೆಸ್ಟಿಂಗ್​ ಸುದ್ದಿಗಳು ಕೆಜಿಎಫ್ ಅಡ್ಡಾದಿಂದ ಹೊರ ಬರ್ತಿದೆ. ರಿಸೆಂಟಾಗಿ ಕೆಜಿಎಫ್ ಚಿತ್ರತಂಡಕ್ಕೆ ಹೊಸ ಕ್ಯಾರೆಕ್ಟರ್ ಪ್ರಕಾಶ್​ ರೈ ಎಂಟ್ರಿ ಕೊಟ್ಟಿದ್ದು, ಕೂಡ ದೊಡ್ಡ ಸುದ್ದಿಯಾಗಿತ್ತು. ಅದರೆ ಈಗ ಕೆಜಿಎಫ್​ ಕ್ಲೈಮಾಕ್ಸ್​ ಶೂಟ್​ ಬಗ್ಗೆ ಇಂಟ್ರೆಸ್ಟಿಂಗ್​ ಅಪ್​ಡೇಟ್ ಒಂದು ಸಿಕ್ಕಿದೆ.

ಕೆಜಿಎಫ್​ 2 ಕ್ಲೈಮಾಕ್ಸ್​ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಕ್ಲೈಮಾಕ್ಸ್​ ಶೂಟ್​ ಹಾಗಿರುತ್ತಂತೆ, ಹೀಗಿರುತ್ತಂತೆ ಅಂತ ಸಿನಿಪ್ರಿಯರು ಮಾತನಾಡಿಕೊಳ್ತಾನೇ ಇದ್ದಾರೆ. ಕ್ಲೈಮಾಕ್ಸ್​ ಫೈಟ್​ನಲ್ಲಿ ಅಧೀರ ಮತ್ತು ರಾಕಿಭಾಯ್​ ಮುಖಾಮುಖಿಯಾಗಿದನ್ನ ತೆರೆಮೇಲೆ ನೋಡಬೇಕು ಅಂತ ಕಾತುರದಿಂದ ಕಾಯುತ್ತಿದ್ದಾರೆ. ಈ ಕ್ಲೈಮಾಕ್ಸ್​ ಫೈಟ್​ನಲ್ಲಿ ರಾಕಿಭಾಯ್​ ಶರ್ಟ್​ಲೆಸ್​ ಆಗಿ ಕಾಣಿಸಿಕೊಳ್ತಾರೆ ಅನ್ನೋದೇ ಸದ್ಯದ ಹಾಟ್ ನ್ಯೂಸ್.

ಕೆಜಿಎಫ್​ 2ನಲ್ಲಿ ಕ್ಲೈಮ್ಯಾಕ್ಸ್​ ಫೈಟ್ ಬಗ್ಗೆ ಹೆಚ್ಚಿನ ಎಕ್ಸ್​​ಪೆಕ್ಟೇಶನ್​ ಇದೆ. ಹಾಗಾಗಿ ಚಿತ್ರತಂಡ ಒಂದು ಪಟ್ಟು ಹೆಚ್ಚಾಗೇ ಕ್ಲೈಮಾಕ್ಸ್​ ಫೈಟ್​ಗೆ ಎಫರ್ಟ್ ಹಾಕುತ್ತಿದ್ದಾರಂತೆ. ಯಶ್​ ಈ ಸೀಕ್ವೆನ್ಸ್​ನಲ್ಲಿ ಶರ್ಟ್​ ಲೆಸ್​ಫೈಟ್ ಮಾಡಲಿದ್ದಾರೆ. ಹಾಗಾಗಿ ಜಿಮ್​ನಲ್ಲಿ ಹೆಚ್ಚಿನ ಕಸರತ್ತನ್ನು ಮಾಡಿದ್ದಾರಂತೆ. ಈಗಾಗಲೇ ಫೀಟ್ ಅಂಡ್ ಫೈನ್​ ಆಗಿರೋ ರಾಕಿಭಾಯ್​, ಕ್ಲೈಮಾಕ್ಸ್​ನಲ್ಲಿ ಇನ್ನು ಹಲ್ಕ್ ಬಾಡಿಯೊಂದಿಗೆ ಸ್ಕ್ರೀನ್​ನಲ್ಲಿ ಮಿಂಚಲಿದ್ದಾರೆ.

ಸದ್ಯ ಕೆಜಿಎಫ್​ 2 ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡುತ್ತಿದ್ದು,ಅಕ್ಟೋಬರ್​ ತಿಂಗಳ ಕೊನೆಯಲ್ಲಿ ಕೆಜಿಎಫ್​ 2 ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಜನವರಿ ವೇಳೆಗೆ ಸಿನಿಮಾ ರಿಲೀಸ್​ ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ.

Next Story

RELATED STORIES