Top

ಡಾ.ರಾಜ್​ ಎವರ್​ಗ್ರೀನ್​ ಸಾಂಗ್​ ಹಾಡಿದ ಬಾಲಿವುಡ್ ಸ್ಟಾರ್

ಎಂದೆಂದೂ ನಿನ್ನನು ಮರೆತು ಅಂತ ಗುನುಗಿದ ಗೋವಿಂದ

ಡಾ.ರಾಜ್​ ಎವರ್​ಗ್ರೀನ್​ ಸಾಂಗ್​ ಹಾಡಿದ ಬಾಲಿವುಡ್ ಸ್ಟಾರ್
X

ವರನಟ ಡಾ.ರಾಜ್​ ಸಿನಿಮಾಗಳು, ಹಾಡುಗಳು ಅಂದ್ರೆ ಎಂದೆಂದೂ ಎವರ್​ಗ್ರೀನ್ ಅದರಲ್ಲೂ ಎಂದೆಂದೂ ನಿನ್ನನು ಮರೆತು ಸಾಂಗ್​ ಯಾರಿಗೆ ತಾನೇ ಗೊತ್ತಿಲ್ಲ. ಇದೀಗ ಈ ಹಾಡು ಬಾಲಿವುಡ್​ ಸ್ಟಾರ್ ನಟನ ಬಾಯಲ್ಲಿ ಗುನುಗಿದೆ. ಅಷ್ಟಕ್ಕೂ ಈ ಹಾಡನ್ನ ಅವರ ಬಾಯಲ್ಲಿ ಹಾಡಿಸಿದ್ದು ನಮ್ಮ ಸ್ಯಾಂಡಲ್​ವುಡ್​ ಚಿಟ್ಟೆ ಹರ್ಷಿಕಾ ಪೊಣಚ್ಚ.

ಡಾ.ರಾಜ್​​ಕುಮಾರ್ ಹಾಡುಗಳು ಅಂದ್ರೆ ಹಾಗೇ ಎಂಥವರನ್ನು ಮೋಡಿ ಮಾಡಿ ಬಿಡುತ್ತೆ. ಅದರಲ್ಲು ಎಂದೆಂದೂ ನಿನ್ನನು ಮರೆತು ಹಾಡಂತೂ ಕನ್ನಡ ಚಿತ್ರರಂಗದ ಎವರ್ ಗ್ರೀನ್​ ಸಾಂಗ್. ಎರಡು ಕನಸು ಚಿತ್ರದ ಈ ಹಾಡಿನಲ್ಲಿ ಡಾ.ರಾಜ್​ ಮತ್ತು ಹಿರಿಯ ನಟಿ ಮಂಜುಳಾ ಅವರು ಹಾಡಿ ಕುಣಿದಿದ್ದಾರೆ. ಇದೀಗ ಈ ಹಾಡು ಬಾಲಿವುಡ್​​ ಸ್ಟಾರ್ ನಟ ಗೋವಿಂದ ಅವರ ಬಾಯಲ್ಲಿ ಕೇಳಿ ಬಂದಿದೆ.

ಸ್ಯಾಂಡಲ್​ವುಡ್​ ಚಿಟ್ಟೆ ಹರ್ಷಿಕಾ ಪೊಣಚ್ಚ ಮುಂಬೈ ಹೋಲಿ ಇವೆಂಟ್​ ಒಂದರಲ್ಲಿ, ನಟ ಗೋವಿಂದ ಅವ್ರನ್ನ ಭೇಟಿ ಮಾಡಿದ್ದಾರೆ. ಇದೇ ವೇಳೆ ಅವರಿಂದ ಕನ್ನಡದ ಹಾಡೊಂದನ್ನ ಹಾಡಿಸಿದ್ದಾರೆ. ಅದರಲ್ಲೂ ನಟ ಗೋವಿಂದ ಅಣ್ಣಾವ್ರ ಹಾಡನ್ನ ಹಾಡಿರೋದು ಕನ್ನಡ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ. ಅಂದ್ಹಾಗೇ ಈ ವಿಡಿಯೋವನ್ನ ಹರ್ಷಿಕಾ ಪೊಣಚ್ಚ ಸೊಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅಂದ್ಹಾಗೇ ನಟ ಗೋವಿಂದ ಅವರ ಬಾಯಲ್ಲಿ, ಎಂದೆಂದೂ ನಿನ್ನನು ಮರೆತು ಸಾಂಗ್​ ಕೇಳಿರೋದು ಇದೇ ಮೊದಲೇನಲ್ಲ. ಗೋವಿಂದ ಅವರಿಗೆ ಈ ಹಾಡು ಬಹಳ ಇಷ್ಟವಾಗಿರೋದರಿಂದ, ಈ ಹಿಂದೆ ಹಿಂದಿ ರಿಯಾಲಿಟಿ ಶೋನಲ್ಲಿಯೂ ಇದೇ ಹಾಡನ್ನ ಹಾಡಿದರು.

Next Story

RELATED STORIES