Top

ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿದೆ - ಮಾಜಿ ಸಿಎಂ ಹೆಚ್ಡಿಕೆ

ಎರಡು-ಮೂರು ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕ್ಯಾತೆ ಹೀಗಾಗಿ ನಾನು ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು.

ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿದೆ - ಮಾಜಿ ಸಿಎಂ ಹೆಚ್ಡಿಕೆ
X

ರಾಮನಗರ: ಕೊರೊನಾ ಇದ್ದರೂ ಪದವಿ ಕಾಲೇಜು ಓಪನ್ ಹಿನ್ನೆಲೆ ಸರ್ಕಾರ ಈ ವಿಚಾರವಾಗಿ ಉಡಾಫೆ ಹೊಡೆಯೋದು ಬೇಡ, ಲಘುವಾಗಿ ಪರಿಗಣಿಸಬಾರದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ್ಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ 2 ತಿಂಗಳು ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ. ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಜನರ ಜೀವನದ ಜೊತೆ ಚೆಲ್ಲಾಟ ಆಡಬಾರದು ಎಂದು ಅವರು ಶಾಲೆ-ಕಾಲೇಜುಗಳನ್ನು ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಮರಾಠಾ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಡಿಸೆಂಬರ್ 5ಕ್ಕೆ ರಾಜ್ಯ ಬಂದ್​​ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಲವಾರು ಮರಾಠರು ಉಪಕಸಬು ಮಾಡಿಕೊಂಡು ಮಾರಾಠಿ ಭಾಷೆ ಮಾತನಾಡಿಕೊಂಡಿದ್ದಾರೆ. ಎರಡು-ಮೂರು ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕ್ಯಾತೆ ಹೀಗಾಗಿ ನಾನು ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು, ಆ ಭಾಗದಲ್ಲಿ ಅಧಿವೇಶನ ನಡೆಸಬೇಕೆಂದು ತೀರ್ಮಾನ ಮಾಡಿದ್ದೆ. ಚನ್ನಪಟ್ಟಣದಲ್ಲೂ ಮರಾಠಿಗರು ಇದ್ದಾರೆ. ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿದೆ ಎಂದರು.

ಮುಂದಿನ ಚುನಾವಣೆಗೆ ರಾಮನಗರದಿಂದ ಪುತ್ರ ನಿಖಿಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನು ಎರಡೂವರೆ ವರ್ಷ ಇದೆ. ಅಷ್ಟರಲ್ಲಿ ಏನೇನ್ ಆಗುತ್ತೋ ಯಾರಿಗೆ ಗೊತ್ತು. ನಾನು ನಿಖಿಲ್​ಗೆ ಯಾವುದೇ ಒತ್ತಡ ಹಾಕಲ್ಲ. ಪಕ್ಷದ ಕಾರ್ಯಕರ್ತರು, ರಾಮನಗರ ಜನರ ಭಾವನೆ ಗ್ರಹಿಸುತ್ತೇನೆ. ಈಗ ಜಿಲ್ಲೆಯಲ್ಲಿ ಮೂರು ಜನ ಜೆಡಿಎಸ್ ಶಾಸಕರಿದ್ದಾರೆ. ನನಗೆ ಮತ್ತೆ ಮೂರು ಶಾಸಕರು ಗೆಲ್ಲಬೇಕು. ಆ ದೃಷ್ಟಿಯಲ್ಲಿ ನಾನು ತೀರ್ಮಾನ ಮಾಡುತ್ತೇನೆ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

Next Story

RELATED STORIES