Top

ಅವನು ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ, ಅವನೇನು ರಾಜೀನಾಮೆ ಕೊಟ್ಟಿದ್ನಾ(?)

ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲಾ ಜಾತಿ ಜನಾಂಗ ಇರಬೇಕು. ಆದರೆ, ಇಲ್ಲೆನಾಗಿದೆ(?)

ಅವನು ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ, ಅವನೇನು ರಾಜೀನಾಮೆ ಕೊಟ್ಟಿದ್ನಾ(?)
X

ಬೆಂಗಳೂರು: ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ, ಆ ಸಿದ್ದರಾಮಯ್ಯ ಕರೆದುಕೊಂಡು ಬಂದ್ವಿ ಅವರು ಹೇಳಲಿಲ್ಲ. ಯಡಿಯೂರಪ್ಪಗೆ ತ್ಯಾಗ ಮಾಡಿದ್ವಿ ಅವರು ಹೇಳಲಿಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್ ವಿಶ್ವನಾಥ್​ ಸಚಿವ ಸಂಪುಟದಲ್ಲಿ ತಮ್ಮ ಹೆಸರು ಇಲ್ಲದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ. ಅವರು ನೆನಪು ಮಾಡಿಕೊಳ್ಳಬೇಕು ಯಾರಿಂದ ಸರ್ಕಾರ ಬಂತು ಅಂತ. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದ ಅದನ್ನ ನೆನಪು ಮಾಡಿಕೊಳ್ಳಿ ಎಂದಿದ್ದಾರೆ.

ಯಡಿಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡೋಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ(?) 33ರಲ್ಲೂ 13 ವೀರಶೈವ, 11 ಜನ ಒಕ್ಕಲಿಗ, 4 ಜನ ಕುರುಬರಿಗೆ ಮಂತ್ರಿ ಕೊಟ್ಟಿದ್ದೀರಾ(?) ಇದೇನಾ ನಿಮ್ಮ ಸಾಮಾಜಿಕ ನ್ಯಾಯ ಎಂದು ಪ್ರಶ್ನೆ ಮಾಡಿದರು.

ನಾಗೇಶ್​ ಅವರನ್ನು ಯಾಕೇ ತೆಗಿಬೇಕು. ಮುನಿರತ್ನ ಬದಲು ಯೋಗೇಶ್ವರ್ ಯಾಕೇ ಕೊಡ್ತೀರಾ ಹೇಳಿ. ಕೋರ್ಟ್​ಗೂ ನನಗೆ ಮಂತ್ರಿ ಸ್ಥಾನ ಕೊಡೋದಕ್ಕೂ ಸಂಬಂಧ ಇಲ್ಲ. ಆ ಸೈನಿಕನ ಮೇಲೆ 420 ಕೇಸ್ ಇದೆ. ಅವನಿಗೆ ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರಾ(?) ಯಾಕೇ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ. ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ ಅವನು. ಅವನೇನು ರಾಜೀನಾಮೆ ಕೊಟ್ನಿದ್ನಾ(?) ಅಥವಾ ನೀವೇನು ಸೈನಿಕನ ಕೈಗೊಂಬೆ ಆಗಿದ್ದೀರಾ(?) ನಿಮ್ಮ ಮಾಜಿ ಪಿಎ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡ್ರಾ ಹೇಳಿ ಎಂದು ಸಿಎಂ ಬಿಎಸ್​ವೈ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಯಡಿಯೂರಪ್ಪನವರೇ ನಿಮ್ಮಿಂದ ಏನಾದ್ರು ನಿರೀಕ್ಷೆ ಮಾಡಿದ್ನಾ ನಾನು. ಸ್ನೇಹದಲ್ಲಿ ಇದ್ದುದ್ದಕ್ಕೆ ನಿಮಗೆ ಸಹಾಯ ಮಾಡಿದ್ವಿ. ಆದರೆ, ನೀವೆನು ಮಾಡಿದ್ರಿ ಹೇಳಿ. ನೀವು ಏನು ಮಾತು ಕೊಟ್ಟಿದ್ರಿ ಅಂತ ಹೇಳಿ. ಬನ್ನಿ ಬೇಕಿದ್ರೆ ಯಡಿಯೂರಿಗೆ ಹೋಗೋಣ ಏನಾಯ್ತು ಅಂತ ಅಲ್ಲೆ ಮಾತನಾಡೋಣ. ನಾವು ಯಡಿಯೂರಪ್ಪರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನ ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲಾ ಜಾತಿ ಜನಾಂಗ ಇರಬೇಕು. ಆದರೆ, ಇಲ್ಲೆನಾಗಿದೆ(?) ನಾಡಿನಲ್ಲಿ ನಾಲಿಗೆಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ. ಆದರೆ, ಅದೇಲ್ಲ ಏನಾಯ್ತು ಎಂದು ಹೆಚ್​ ವಿಶ್ವನಾಥ್ ಅವರು ಮಾತನಾಡಿದ್ದಾರೆ.

ಅದುವಲ್ಲದೇ, ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರಅ ಕಾರಣ. ಅದೇ ರೀತಿ ಯಡಿಯೂರಪ್ಪ ಪ್ರತಿಷ್ಠೆ ಡೆಮಾಲೀಷ್ ಆಗೋಕು ವಿಜಯೇಂದ್ರರೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್ ಎಂದಿದ್ದಾರೆ.

Next Story

RELATED STORIES