ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ
ಇಲ್ಲಿ ಸ್ಪೋಟಕ ಸಂಗ್ರಹಣೆ ಗೋಡಾನು ಇರೋದೆ ನನಗೆ ಗೊತ್ತಿಲ್ಲ

ಹಾಸನ: ಇಂತಹ ಘಟನೆ ನನ್ನ ಕ್ಷೇತ್ರದಲ್ಲಿ ನಡೆಯ ಬಾರದಿತ್ತು. ಇಲ್ಲಿ ಸ್ಪೋಟಕ ಸಂಗ್ರಹಣೆ ಗೋಡಾನು ಇರೋದೆ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸೋಮವಾರ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪರಿಶೀಲನೆಗೆ ಬಂದಿದ್ದ ವೇಳೆ ಮಾತನಾಡಿದ ಅವರು, ಈಗ ಸ್ಥಳಾಂತರ ಮಾಡಬೇಕಾ(?) ಬೇಡವಾ(?) ನಾನು ಹೇಳಲ್ಲ. ನನ್ನನ್ನ ಕೇಳಿ ಇಲಾಖೆಯವರು ಗೋಡಾನು ಮಾಡಲು ಬಿಟ್ಟಿದ್ದಾರಾ(?) ಸ್ಥಳಾಂತರ ಮಾಡಬೇಕಾ, ಬೇಡವಾ ಇಲಾಖೆ ಮಾಡಲಿ ಎಂದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕೆಲವೆಡೆ 30 ಅಡಿ ವರೆಗೂ ಸ್ಪೋಟಕ ಸಿಡಿಸಲು ರಿಗ್ ಕೊರೆಯುತ್ತಾರೆ ಈ ಬಗ್ಗೆ ಡಿಸಿಗೂ ದೂರು ನೀಡಿದ್ದೇನೆ. ಇಷ್ಟು ಆಳಕ್ಕೆ ಇಟ್ಟು ಸ್ಪೋಟ ಮಾಡಿದ್ರೆ ಹೇಗೆ ಅಂತ ಈ ಹಿಂದೆ ಪ್ರೆಶ್ನೆ ಮಾಡಿದ್ದೇನೆ. ಜಿಲ್ಲೆಯ ಎಲ್ಲಾ ಕ್ವಾರಿಗಳನ್ನ ಡ್ರೋನ್ ಸರ್ವೆ ಮಾಡಿ ಅಂತ ಈ ಹಿಂದೆ ಪತ್ರ ಬರೆದಿದ್ದೇನೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಿ. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಲಿ ಎಂದು ಹೆಚ್.ಡಿ ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.