Top

ಈ ನಿಗಮಕ್ಕೆ ಬಾಲವು ಇಲ್ಲಾ ತಲೆಯು ಇಲ್ಲ - ವಿಧಾನ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ನಮ್ಮ ಪ್ರಮುಖ ಹೋರಾಟ ಶೇ.16 ರಿಂದ 18ರ ರವರೆಗೆ ಮೀಸಲಾತಿ ಸಿಗಬೇಕು, ಓಬಿಸಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು.

ಈ ನಿಗಮಕ್ಕೆ ಬಾಲವು ಇಲ್ಲಾ ತಲೆಯು ಇಲ್ಲ - ವಿಧಾನ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ
X

ಹುಬ್ಬಳ್ಳಿ/ಧಾರವಾಡ : ನಮಗೆ ನಿಗಮ ಬೇಡ ಮೀಸಲಾತಿ ಬೇಕು. ವೀರಶೈವ ಲಿಂಗಾಯತ ನಿಗಮ ಮಾಡುವದರಿಂದ ಏನೂ ಉಪಯೋಗವಿಲ್ಲ ಎಂದು ವಿಧಾನ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ಸಣ್ಣ ಸಣ್ಣ ಸಮುದಾಯದಗಳಿಗೆ ಇದು ಉಪಯೋಗವಾಗುತ್ತದೆ. ಈಗ ವೀರಶೈ ಲಿಂಗಾಯತ ‌ನಿಗಮ ಮಾಡಿ, ಅದಕ್ಕೆ ‌ನೈಯಾ ಪೈಸೆ ಹಣವನ್ನ ನಿಗದಿ ಮಾಡಿಲ್ಲ. ಕರ್ನಾಟಕದಲ್ಲಿ 1 ಕೋಟಿ 18 ಲಕ್ಷ ಲಿಂಗಾಯತರಿದ್ದಾರೆ‌. ಈ ನಿಗಮಗಳಿಗೆ ಅಧ್ಯಕ್ಷರನ್ನ ಮಾಡಿ, ಗೂಟದ ಕಾರು ನೀಡ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ನನ್ನ ಪತ್ರದಿಂದ ಈಗ ನಿಗಮ ಮಾಡಿದ್ದಾರೆ, ಇದರಿಂದ ನಮ್ಮ ಬೇಡಿಕೆಗಳು ಪೂರೈಕೆ ಆಗಿಲ್ಲ ಎಂದರು.

ಇನ್ನು ಓಬಿಸಿನಲ್ಲಿ ಲಿಂಗಾಯತವನ್ನ ಸೇರಿಸಬೇಕೆಂದು ನಮ್ಮ‌ ಮನವಿ ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ಇದೆ. ಸರ್ಕಾರ ಈಗ ಲಿಂಗಾಯತ ನಿಗಮ ಮಾಡಿ ಜೇನು ಗುಡಿಗೆ ಕೈಹಾಕಿದೆ. ಸರ್ಕಾರ ತಜ್ಞರ ಸಮಿತಿ ಮಾಡಿ ಸಾಧಕ ಬಾದಕಗಳನ್ನ ನೋಡಿ ಒಂದು ನಿರ್ಧಾರಕ್ಕೆ ಬರಬೇಕು. ಈ ನಿಗಮಕ್ಕೆ ಬಾಲವು ಇಲ್ಲಾ ತಲೆಯು ಇಲ್ಲ ಎಂದಿದ್ದಾರೆ.

ಸದ್ಯ ಒಂದು ಸಾವಿರ ಕೋಟಿ ರೂಪಾಯಿ ಹಣ ನಿಗಮದಲ್ಲಿಟ್ಟರೇ ಶೇ.25ರಷ್ಟು ಜನರಿಗೆ ಅನಕೂಲವಾಗುತ್ತದೆ. ನಮಗೆ ಶೇ.16ರಷ್ಟು ಮೀಸಲಾತಿ ಸಿಕ್ಕರೇ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ನಮ್ಮ ಪ್ರಮುಖ ಹೋರಾಟ ಶೇ.16 ರಿಂದ 18ರ ರವರೆಗೆ ಮೀಸಲಾತಿ ಸಿಗಬೇಕು, ಓಬಿಸಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು. ಅಲ್ಲಿಯವರೆಗೂ ನಾವು ನಿಗಮವನ್ನ ಸ್ವಾಗತ ಮಾಡುವುದಿಲ್ಲ, ವಿರೋಧವನ್ನು ಸಹ ಮಾಡುವುದಿಲ್ಲ ಎಂದು ಹೇಳಿದರು.

ಅಲ್ಲದೇ, ಮರಾಠ ನಿಗಮವನ್ನ ನಾವು ಸ್ವಾಗತ ಮಾಡುತ್ತೇವೆ. ಈ ನಿಗಮ ಕರ್ನಾಟಕಲ್ಲಿ ಹುಟ್ಟಿ ಬೆಳೆದವರಿಗೆ ಲಾಭ ಆಗಬೇಕು. ಅದನ್ನು ಬಿಟ್ಟು ಎಮ್‌ಇಎಸ್​ನಂತವರಿಗೆ ಇದು ಉಪಯೋಗ ಆಗಬಾರದು ಇದಕ್ಕೆ ಸರ್ಕಾರ ಒಂದು ಒಳ್ಳೆಯ ರೂಲ್ಸ್ ಮಾಡಲಿ ಎಂದು ವಿಧಾನ‌ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ತಿಳಿಸಿದ್ದಾರೆ.

Next Story

RELATED STORIES