Top

ಡ್ರಗ್ಸ್ ಬಗ್ಗೆ ತರುಣ್ ಜೊತೆ ಯಾವುದೇ ಸಂಬಂಧ ಇಲ್ಲ - ಆ್ಯಂಕರ್​ ಅನುಶ್ರೀ

ತರುಣ್​ ರಾಜ್​ ನನಗೆ 12 ವರ್ಷಗಳ ಹಿಂದಿನ ಪರಿಚಯ ಅವರು ನನಗೆ ಆರು ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ.

ಡ್ರಗ್ಸ್ ಬಗ್ಗೆ ತರುಣ್ ಜೊತೆ ಯಾವುದೇ ಸಂಬಂಧ ಇಲ್ಲ - ಆ್ಯಂಕರ್​ ಅನುಶ್ರೀ
X

ಮಂಗಳೂರು: ತರುಣ್​ ರಾಜ್​ ನನಗೆ 12 ವರ್ಷಗಳ ಹಿಂದಿನ ಪರಿಚಯ ಅವರು ನನಗೆ ಆರು ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ ಎಂದು ಆ್ಯಂಕರ್​ ಅನುಶ್ರೀ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಡ್ರಗ್ಸ್​ ಪ್ರಕರಣ ಸಂಬಂಧ ವಿಚಾರಣೆ ಮುಗಿಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧ ಇಲ್ಲ. ಪೊಲೀಸರು ಇವತ್ತು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ ಎಂದರು.

ಇನ್ನು ಇವತ್ತು ಮುಂದಿನ ವಿಚಾರಣೆ ಬಗ್ಗೆ ಪೋಲಿಸರು ಏನೂ ಹೇಳಿಲ್ಲ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ನಿರೂಪಕಿ ಅನುಶ್ರೀ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆ್ಯಂಕರ್​ ಅನುಶ್ರೀ ವಿಚಾರಣೆ ಬಳಿಕ ಮಂಗಳೂರು ನಗರ ಪೊಲೀಸ್​ ಕಮೀಷನರ್​ ವಿಕಾಶ್​ ಕುಮಾರ್ ಅವರು ಮಾತನಾಡಿ, ಕಿಶೋರ್ ಮತ್ತು ತರುಣ್ ನೀಡಿದ ಹೇಳಿಕೆಯಂತೆ ಅನುಶ್ರೀಗೆ ನೋಟಿಸ್ ನೀಡಲಾಗಿತ್ತು. ಇವತ್ತು ಅನುಶ್ರೀಯಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ. ಹೇಳಿಕೆಯನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆ. ಮತ್ತಷ್ಟು ಮಾಹಿತಿ ಬೇಕಾದಲ್ಲಿ ಮತ್ತೆ ನೋಟಿಸ್ ನೀಡುತ್ತೇವೆ ಎಂದು ತಿಳಿಸಿದರು.

ಇನ್ನು ಕಿಶೋರ್, ತರುಣ್ ರಾಜ್ ವಿಚಾರಣೆ ನಡೆಯುತ್ತಿದೆ. ಎಲ್ಲಾ ಮಾಹಿತಿಯನ್ನು ಪಡೆದು ತನಿಖೆ ತೀವ್ರಗೊಳಿಸುತ್ತೇವೆ ಎಂದು ಕಮೀಷನರ್ ವಿಕಾಸ್ ಕುಮಾರ್ ಅವರು ಹೇಳಿದ್ದಾರೆ.


Next Story

RELATED STORIES