Top

ಯುವತಿ ಪೋಷಕರಿಂದ ಕಿಡ್ನಾಪ್ ಕೇಸ್: ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್

ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್

ಯುವತಿ ಪೋಷಕರಿಂದ ಕಿಡ್ನಾಪ್ ಕೇಸ್: ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್
X

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಜ್ಞಾತ ಸ್ಥಳದಿಂದ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಬೆನ್ನಲ್ಲೇ. ಈಗ ಯುವತಿ ಪೋಷಕರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ಕೊಟ್ಟಿದ್ದಾರೆ. ಸದ್ಯ ಯುವತಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನ ಬೆಳಗಾವಿ ಪೊಲೀಸ್ ಕಮೀಷನರ್ ರಚಿಸಿದ್ದಾರೆ. ಈ ತಂಡ ಯುವತಿ ಪೋಷಕರ ದೂರಿನ್ವಯ ಪ್ರಾಥಮಿಕ ತನಿಖೆ ಆರಂಭಿಸಿ ಎಸ್​ಐಟಿಗೆ ಕೇಸ್ ವರ್ಗಾಯಿಸುವ ಸಾಧ್ಯತೆಯಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈವರೆಗೆ ಯಾರೂ ಊಹಿಸಲಾಗದ ಟ್ವಿಸ್ಟ್ ಪಡೆದುಕೊಂಡಿದೆ. ಯುವತಿ ಹೇಳಿಕೆಯ ವಿಡಿಯೋ ಬಿಡುಗಡೆ ಆಗುತ್ತಿದ್ದಂತೆ ಅವರ ಪೋಷಕರು ಪ್ರತ್ಯೇಕವಾಗಿದ್ದಾರೆ.

ಕಳದೆ 3 ವರ್ಷಗಳಿಂದ ಸಿಡಿ ಯುವತಿ ತಂದೆ ತಾಯಿ ಕುಟುಂಬ ಸದಸ್ಯರು ಬೆಳಗಾವಿಯಲ್ಲೇ ವಾಸವಿ ಇರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಂದೆ ತಾಯಿಯಿಂದ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ನಿನ್ನೆ ಸಂಜೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಬೆಂಗಳೂರಿನ ಗಂಗಾನಗರದ ಪಿಜಿ ಹಾಸ್ಟೇಲ್ ಬಳಿ ನಮ್ಮ ಮಗಳನ್ನು ಅಪಹರಿಸಲಾಗಿದೆ. ಗೌಪ್ಯ ಸ್ಥಳದಲ್ಲಿ ಅಕ್ರಮ ಬಂಧನದಲ್ಲಿಟ್ಟು ಹೆದರಿಸಿ ನಕಲಿ ಸಿಡಿ ಮಾಡಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟು, ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತು ದೂರಿನಲ್ಲಿ ಹೇಳಿದ್ದಾರೆ. ಜೊತೆಗೆ ದಯವಿಟ್ಟು ಮಗಳನ್ನು ಹುಡುಕಿ ಕೊಡಿ, ಆರೋಪಿಗಳಿಗೆ ಶಿಕ್ಷೆ ಕೊಡಿಸಿ ಅಂತಾ ಮನವಿ ಮಾಡಿದ್ದಾರೆ. ದೂರು ಕೊಟ್ಟ ಬಳಿಕ ಅಜ್ಞಾತ ಸ್ಥಳದಿಂದ ಯುವತಿ ಪೋಷಕರು ವಿಡಿಯೋ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.

ಇನ್ನು ಕಿಡ್ನಾಪ್ ಕೇಸ್ ದಾಖಾಲುತ್ತಿದ್ದಂತೆ ಬೆಳಗಾವಿ ಪೊಲೀಸ್ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪೊಲೀಸ್ ಕಮೀಷನರ್ ತ್ಯಾಗರಾಜನ್ ಬೆಳಗಾವಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಮತ್ತು ಎಪಿಎಂಸಿ ಪಿಐ ಜಾವೇದ್ ಮುಶಾಪುರಿ ನೇತೃತ್ವದ ವಿಶೇಷ ತಂಡ ರಚಿಸಿದ್ದಾರೆ.

ಪ್ರಕರಣದ ಪ್ರಾಥಮಿಕ ತನಿಖೆಯನ್ನ ಪೊಲೀಸರು ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಪ್ರಕರಣವನ್ನ SITಗೆ ವರ್ಗಾವಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ದೂರು ಕೊಟ್ಟ ಬಳಿಕ ಯುವತಿ ಪೋಷಕರು ಸಹ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಯಾರ ಸಂಪರ್ಕಕ್ಕೂ ಯುವತಿ ಪೋಷಕರು ಲಭ್ಯವಾಗುತ್ತಿಲ್ಲ.

Next Story

RELATED STORIES