Top

ಸ್ನೇಹಿತರ ಜೊತೆ ಕುಣಿಲಿಲ್ಲ ಎಂದು ಪತ್ನಿ ಟಾರ್ಚರ್​!

ಕುಡಿತದ ಚಟಕ್ಕೆ ಬಿದ್ದವನಿಂದ ಪ್ರತಿದಿನ ಹಲ್ಲೆ ...!

ಸ್ನೇಹಿತರ ಜೊತೆ ಕುಣಿಲಿಲ್ಲ ಎಂದು ಪತ್ನಿ ಟಾರ್ಚರ್​!
X

ಬೆಂಗಳೂರು: ಅಪರಿಚಿತ ವ್ಯಕ್ತಿಯನ್ನ ನಂಬಿ ಹಿರಿಯರ ಸಮ್ಮುಖದಲ್ಲಿ ಮದ್ವೆಯಾಗೋ ಹೆಣ್ಣು ಮಕ್ಕಳು ನೋಡಲೇಬೇಕಾದ ಸ್ಟೋರಿ ಇದು. ಎಂಥೆಂಥಹ ವಿಚಿತ್ರ ಕ್ಯಾರೆಕ್ಟರ್ ಗಳಿರ್ತಾರೆ ಅನ್ನೊದಕ್ಕೆ ಈ ಪ್ರಕರಣವೇ ಸಾಕ್ಷಿ. ಗಂಡನ ಕಾಟಕ್ಕೆ ಆ ಹೆಣ್ಣುಮಗಳು ಜೀವವನ್ನೇ ಬಿಟ್ಟಿದ್ದಾಳೆ.

ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಆಕೆ. ಕೊನೆತ ಬಾರಿ ಎಂಬಂತೆ ಕುತ್ತಿಗೆಗೆ ಹಗ್ಗ ಹಾಕಿಕೊಂಡವಳು ಕೊನೆಗೂ ಜೀವ ಬಿಟ್ಟಿದ್ದಾಳೆ. ವರ್ತೂರಿನಲ್ಲಿ ನಡೆದ ಈ ಘಟನೆಗೆ ಕಾರಣವಾಗಿದ್ದು ಆಕೆಯ ಪಾಪಿ ಪತಿ. ಪದ್ಮಾವತಿ ಎಂಬ ವಿವಾಹಿತೆ ಮನೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಈ ಸಂಬಂಧ ಪತಿ ಭಾಸ್ಕರ್ ನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಸಾಫ್ಟ್ವೇರ್ ಉದ್ಯೋಗಿಯಾಗಿರುವ ಭಾಸ್ಕರ್​ಗೆ 15 ವರ್ಷಗಳ ಹಿಂದೆ ಪದ್ಮಾವತಿ ಜೊತೆ ಮದ್ವೆಯಾಗಿತ್ತು ದಂಪತಿಗಳಿಗೆ 11 ವರ್ಷದ ಮಗನೂ ಇದ್ದಾನೆ. ಒಂದೆರಡು ವರ್ಷ ಪತ್ನಿ ಜೊತೆ ಸರಿಯಾಗಿಯೇ ಇದ್ದವನು ಮಗುವಾದ ಬಳಿಕ ತನ್ನ ಅಸಲಿ ಕ್ಯಾರೆಕ್ಟರ್ ಹೊರ ಹಾಕಲು ಪ್ರಾರಂಭಿಸಿದ್ದ. ಅಲ್ಲಿಂದಲೂ ಪ್ರತಿ ದಿನ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ. ದಂಪತಿ ಎಂದರೆ ಅವರಿಗೇ ಆದಂತಹ ಲಿಮಿಟ್ಸ್ ಇರುತ್ತೆ. ಕೆಲವರು ಯಾವುದೇ ಸಮಾರಂಭಕ್ಕೆ ಮನೆಯ ಹೆಣ್ಣುಮಕ್ಕಳನ್ನ ಕರೆದೊಯ್ಯಲೂ ಹಿಂದೆ ಮುಂದೆ ನೋಡ್ತಾರೆ. ಆದರೆ, ಈ ಟೆಕ್ಕಿ ಭಾಸ್ಕರ ಮನೆಯನ್ನೇ ಬಾರ್ ಮಾಡಿಕೊಂಡು ತನ್ನ ಪಟಾಲಂನ್ನ ಕರೆ ತಂದು ಕುಡಿದು ಬಿದ್ದಿರುತಿದ್ದನಂತೆ. ಅಷ್ಟಲ್ಲದೆ ನಶೇ ಏರಿರುವ ಗಂಡಸರ ಮುಂದೆ ಪತ್ನಿಗೆ ಕುಣಿಯಲು ಫೋರ್ಸ್ ಮಾಡುತ್ತಿದ್ದನಂತೆ. ಇದೇ ವಿಚಾರವಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳ ನಡೆದಿದ್ದು ಪದ್ಮಾವತಿ ನಾಲ್ಕು ಬಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಮೊನ್ನೆಯೂ ಮನೆಯಲ್ಲಿ ಭರ್ಜರಿ ಪಾರ್ಟಿ ನಡೆದಿದೆ. ಪತ್ನಿಯ ಮುಂದೆಯೇ ಪರ ಹೆಂಗಸಿನ ಜೊತೆ ಕುಣಿದಿದಲ್ಲದೆ ಪತ್ನಿಗೂ ಡ್ಯಾನ್ಸ್ ಮಾಡಲು ಫೋರ್ಸ್ ಮಾಡಿದ್ದಾನೆ. ಕುಡುಕರ ನಡಯವೆ ಮುಜುಗರಕ್ಕೊಳಗಾದ ಮಹಿಳೆ ರೂಂಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎದೆ ಮಟ್ಟಕ್ಕೆ ಬೆಳೆದ ಮಗನಿರುವಾಗ ಈ ಟೆಕ್ಕಿ ಚಟಕ್ಕೆ ಬಿದ್ದು ತನ್ನದೂ ಸೇರಿ ಮೂವರ ಬದುಕನ್ನ ಹಾಳು ಮಾಡಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ವರ್ತೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Next Story

RELATED STORIES