Top

ನಾವು ಪೊಲೀಸರಿಗೆ ಹೆಚ್ಚು ಕೇಸ್ ಹಾಕುವಂತೆ ಟಾರ್ಗೆಟ್ ನೀಡಿಲ್ಲ - ಕಮಲ್​ ಪಂತ್​

ಜನರು ಹೆಚ್ಚು ಸೇರುವ ಕಡೆ ಈ ರೀತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಉದ್ದೇಶ ಕೇವಲ ದಂಡ ಹಾಕುವುದಿಲ್ಲ.

ನಾವು ಪೊಲೀಸರಿಗೆ ಹೆಚ್ಚು ಕೇಸ್ ಹಾಕುವಂತೆ ಟಾರ್ಗೆಟ್ ನೀಡಿಲ್ಲ - ಕಮಲ್​ ಪಂತ್​
X

ಬೆಂಗಳೂರು: ಮಾಸ್ಕ್ ಬಗ್ಗೆ ಜನರಿಗೆ ಕೆಲವು ಕಡೆ ಜಾಗೃತಿ ಇರಲಿಲ್ಲ, ಈಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಅವರು ಶನಿವಾರ ಹೇಳಿದರು.

ಶಿವಾಜಿನಗರದ ರೆಸಲ್ ಮಾರ್ಕೆಟ್​ ಬಳಿ ಕೋವಿಡ್​ 19 ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನೂ ಮುಂದೆ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಒಂದು ಗಂಟೆ ಮಾಸ್ಕ್ ಬಗ್ಗೆ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದಿದ್ದಾರೆ.

ಇನ್ನು ಸರಿಯಾದ ರೀತಿಯಲ್ಲಿ ಜನ ‌ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಜನರು ಹೆಚ್ಚು ಸೇರುವ ಕಡೆ ಈ ರೀತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಉದ್ದೇಶ ಕೇವಲ ದಂಡ ಹಾಕುವುದಿಲ್ಲ ಎಂದು ಹೇಳಿದರು.

ಸದ್ಯ ಜನರು ಜಾಗೃತರಾಗಿ ಮಾಸ್ಕ್ ಧರಿಸಬೇಕು. ಪ್ರಾಣದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಾವು ಪೊಲೀಸರಿಗೆ ಯಾರಿಗೂ ಹೆಚ್ಚು ಕೇಸ್ ಹಾಕುವಂತೆ ಟಾರ್ಗೆಟ್ ನೀಡಿಲ್ಲ, ಕೊರೊನಾ ಮುಕ್ತ ಮಾಡುವುದು ನಮ್ಮ ಉದ್ದೇಶ ಎಂದು ಕಮಲ್​ ಪಂತ್ ಅವರು ಮಾತನಾಡಿದ್ದಾರೆ.

Next Story

RELATED STORIES