Top

ಕಳೆದ ಒಂಭತ್ತು ತಿಂಗಳಿಂದ ತಲೆ ಮರೆಸಿಕೊಂಡಿದ್ದ ವಿಜಯ್ ಬಂಧನ - ಸಂದೀಪ್​ ಪಾಟೀಲ್​

ಕಳೆದ ಒಂಭತ್ತು ತಿಂಗಳಿಂದ ತಲೆ ಮರೆಸಿಕೊಂಡಿದ್ದ ವಿಜಯ್ ಬಂಧನ - ಸಂದೀಪ್​ ಪಾಟೀಲ್​
X

ಬೆಂಗಳೂರು: ಕಳೆದ ವರ್ಷ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಪಿಎಂಸಿಯಲ್ಲಿ 50 ಕೋಟಿ ವಂಚನೆ ಬಗ್ಗೆ ದೂರು ದಾಖಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಎಪಿಎಂಸಿಯಲ್ಲಿ ನಕಲಿ ಎಫ್​ಡಿ ಇಟ್ಟು 50 ಕೋಟಿ ವಂಚನೆಯಾಗಿತ್ತು. ನಂತರ ಪ್ರಕರಣ ಸಿಸಿಬಿ ವರ್ಗಾವಣೆಯಾಗಿತ್ತು. ಇದರ ಭಾಗವಾಗಿ ಸಿಸಿಬಿ ಈಗಾಗಲೇ ಪ್ರಕರಣದಲ್ಲಿ 15 ಜನರನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದೆ ಎಂದರು.

ಇನ್ನು ಈಗ ಪ್ರಮುಖ ಆರೋಪಿ ವಿಜಯ್ ಆಕಾಶ್ ಹಾಗೂ ಆತನ ಸಹಚರರ ಬಂಧನ ಮಾಡಲಾಗಿದೆ. ವಿಜಯ್ ಆಕಾಶ್ ಮೇಲೆ ಆರ್ಥಿಕ ಅಪರಾಧಗಳ ಹಲವು ಪ್ರಕರಣಗಳಿವೆ. ಸಿಬಿಐ ಕೂಡ ಈತನ ವಿರುದ್ದ ತನಿಖೆಮಾಡುತ್ತಿದೆ. ಕಳೆದ ಒಂಭತ್ತು ತಿಂಗಳಿಂದ ತಲೆ ಮರೆಸಿಕೊಂಡಿದ್ದ ವಿಜಯ್. ಈಗ ಬಂಧನ ಮಾಡಿ 10 ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ವಿಜಯ್ ಆಕಾಶ್​ ಒಂಭತ್ತು ತಿಂಗಳಿಂದ ತಲೆಮರೆಸಿಕೊಂಡಿದ್ದ ಎಂದು ಸಂದೀಪ್ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES