Top

49 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದ ಖದೀಮರು

ಮನೆಗೆ ನುಗ್ಗಿದ ಕೂಡಲೆ ದೀಪಕ್ ಮೊಬೈಲ್ ಗೆ ಬಂತು ಅಲರ್ಟ್ ಮೆಸೆಜ್

49 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದ ಖದೀಮರು
X

ಬೆಂಗಳೂರು: ಆತ ತಿರುಪತಿಗೆ ಮುಡಿ ಕೊಟ್ಟು ಹರಕೆ ತೀರಿಸಲು ಹೋಗಿದ್ದ .ಆದ್ರೆ ಇತ್ತ ಅವನ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದರು. ದುರಂತ ಅಂದ್ರೆ ಆತನ ಮನೆ ಕಳ್ಳತನವನ್ನೆ ಅವನೇ ಕಣ್ಣಾರೆ ನೋಡಿದ್ದರು.

ಒಬ್ಬರ ಮೇಲೆ ನಂಬಿಕೆ ಇಟ್ಟು ಮನೆ ಕಾಯಲು ಹೇಳಿ ಹೋಗಿದ್ದ ಪರಿಣಾಮ ಇಡೀ ಮನೆಯೇ ಖಾಲಿ ಖಾಲಿ. ಜೊತೆಲಿದ್ದುಕೊಂಡೇ ಹರಾಮಿ ಕೆಲಸ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ಸಂಜಯ್ ಎಂಬಾತನೇ ಈ ಕಳ್ಳತನದ ರೂವಾರಿ. ಹೊಸ ವರ್ಷವೆಂದು ಸಾಫ್ಟ್ ವೇರ್ ಇಂಜೀನಿಯರ್ ದೀಪಕ್ ಮುಡಿ ಕೊಡಲೆಂದು ತಿರುಪತಿಗೆ ಹೋಗಿದ್ದ. ಮನೆಯನ್ನ ಚೆನ್ನಾಗಿ ನೋಡ್ಕೋ ಕಳ್ಳರಿದ್ದಾರೆ ಎಂದು ಕಳ್ಳನ ಬಳಿಯೇ ಹೇಳಿ ಹೋಗಿದ್ದ ದೀಪಕ್​ಗೆ ನಿಜಕ್ಕೂ ಶಾಕ್ ಕಾದಿತ್ತು. ಈ ಘಟನೆ ಕೆ.ಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹಬೂಬ್ ನಗರದಲ್ಲಿ ನಡೆದಿದೆ.

ಈ ಕಳ್ಳತನ ನೋಡುದ್ರೆ ಬಹಳ ದಿನಗಳಿಂದಲೂ ಸೆಕ್ಯೂರಿಟಿ ಗಾರ್ಡ್ ಸಂಜಯ್ ಮನೆ ದೋಚಬೇಕೆಂದು ಸ್ಕೆಚ್ ಹಾಕಿದ್ದ ಎಂಬ ಅನುಮಾನಗಳು ಮೂಡುತ್ತಿದೆ .ಸದ್ಯ ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಂ ಇದ್ದ ಕಾರಣ ಮನೆಯಿಂದ ಹೊರ ಹೋಗುತ್ತಿಲ್ಲ ಹೀಗಾಗಿ ಸಂಜಯ್​ನ ಪ್ಲಾನ್ ಫೇಲ್ ಆಗಿತ್ತು. ಆದರೆ, ದೀಪಕ್ ತಿರುಪತಿಗೆ ಹೋಗೋದಾಗಿ ಹೇಳಿದಾಗಿ ಕೆಲವೇ ಗಂಟೆಗಳಲ್ಲಿ ಕದಿಯಲು ಪ್ಲಾನ್ ಮಾಡಿಕೊಂಡಿದ್ದ.

ಇನ್ನು ಮನೆಯಲ್ಲಿರುವ ಸಿಸಿಟಿವಿಗಳ ಬಗ್ಗೆ ಅರಿವಿಲ್ಲದೆ ಸೆಕ್ಯೂರಿಟಿ ಗಾರ್ಡ್, ತನ್ನ ಸಹಚರರ ಜೊತೆ ಮನೆಗೆ ಬೆಳಗಿನ ಜಾವ 2 ಗಂಟೆಗೆ ಲಗ್ಗೆ ಇಟ್ಟಿದ್ದ. ಇತ್ತ. ಮನೆಗೆ ಎಂಟ್ರಿಯಾಗುತ್ತಿದ್ದಂತೆ ದೀಪಕ್​ಗೆ ಅಲರ್ಟ್ ಮೆಸೆಜ್ ಬಂದಿದೆ. ತಕ್ಷಣ ಸಿಸಿಟವಿ ಆ್ಯಪ್ ಓಪನ್ ಮಾಡಿ ನೋಡಿದಾಗ ಸಂಜಯ್ ಮತ್ತು ಸಂಗಡಿಗರು ಮನೆಗೆ ನುಗ್ಗಿರುವ ವಿಚಾರ ಗೊತ್ತಾಗಿದೆ. ದುರಂತ ಅಂದ್ರೆ ತನ್ನ ಮನೆಯ ಕಳ್ಳತನವನ್ನ ದೀಪಕ್ ಲೈವ್ ಆಗಿಯೇ ಮೊಬೈಲ್​ನಲ್ಲಿ ನೋಡುತ್ತಿದ್ದ. ತಕ್ಷಣ ವಿಜಯನಗರದಲ್ಲಿರುವ ತನ್ನ ತಂದೆಗೆ ಕರೆ ಮಾಡಿದ್ದ ಎರಡು ಬಾರಿ ರಿಸೀವ್ ಮಾಡಲಿಲ್ಲ, ಮೂರನೇ ಬಾರಿ ಕಾಲ್ ರಿಸೀವ್ ಮಾಡಿದ ತಂದೆಗೆ ವಿಷಯ ತಿಳಿಸಿದ್ದ. ವಿಜಯನಗರದಿಂದ ಕೆ.ಜಿ ಹಳ್ಳಿಗೆ ಬರುವಷ್ಟರಲ್ಲಿ ಸೆಕ್ಯೂರಿಟಿ ಗಾರ್ಡ್ ಸಂಜಯ್ ಮತ್ತು ಆತನ ಸಂಗಡಿಗರು ಇಡೀ ಮನೆಯನ್ನ ದೋಚಿದರು. ಇನ್ನು ಮನೆಯಿಲ್ಲ 700 ಗ್ರಾಂ ಚಿನ್ನ, ವಿದೇಶಿ ಕರೆನ್ಸಿ, ಮೂರು ಲಕ್ಷ ನಗದು ಸೇರಿ ಒಟ್ಟು 49 ಲಕ್ಷ ರೂಪಾಯಿಗಳನ್ನ ಕದ್ದು ಪರಾರಿಯಾಗಿದರು.

ಇನ್ನು ಸಿಸಿಟಿವಿಗಳನ್ನ ವಶಕ್ಕೆ ಪಡೆದ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಸಂಜಯ್ ಆಂಡ್ ಗ್ಯಾಂಗ್ ಗಾಗಿ ಹುಡುಕಾಟ ನಡೆಸಿದ್ದಾರೆ. ಈ ಪ್ರಕರಣ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Next Story

RELATED STORIES