Top

ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ

ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತಿವಿ.

ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ
X

ಬೆಂಗಳೂರು: ಕೋವಿಡ್ 19 ಪ್ರೋಟೋಕಾಲ್ ಜಾರಿಯಲ್ಲಿದೆ. ಯಾವ ಪ್ರತಿಭಟನೆ ಮಾಡುವಂತಿಲ್ಲ, ಪ್ರತಿಭಟನೆ ನಡೆಸಿದ್ರೆ ಬಂಧಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಅವರು ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ​ಎಲ್ಲ ಬಂದೋಬಸ್ತ್​ಗೂ ತಯಾರಾಗಿದ್ವಿ. ಯಾರಾದ್ರೂ ಚೇಷ್ಟೆ ಮಾಡಿದ್ರೆ ಅವರನ್ನ ಯಾವುದೇ ಕಾರಣಕ್ಕೂ ಬಿಡಲ್ಲ, ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ ನಲ್ಲಿ ಭದ್ರತೆ ಕೊಡುತ್ತೇವೆ ಎಂದಿದ್ದಾರೆ.

ಇನ್ನು ಡ್ಯೂಟಿಗೆ ಬರೋದು ಬಿಡೋದು ಅವರ ಡಿಪಾರ್ಟ್ಮೆಂಟ್​ಗೆ ಸಂಬಂಧಿಸಿದ್ದು ರಸ್ತೆಗಿಳಿದು ಕಲ್ಲು ತೂರಾಟ ರಸ್ತೆ ತಡೆ ಮಾಡಿದ್ರೆ ಅದಕ್ಕೆ ತಕ್ಕ ಶಾಸ್ತಿ ಮಾಡ್ತಿವಿ. 21ನೇ ತಾರೀಕಿನ ವರೆಗೆ ಕೋವಿಡ್ ಪ್ರೋಟೋಕಾಲ್ ಇದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತಿವಿ ಎಂದು ಕಮಲ್​ ಪಂತ್ ಅವರು ತಿಳಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಿಗೆ ಸಿಡಿ ಯುವತಿ ಪತ್ರ ರವಾನೆ ಹಿನ್ನೆಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂತ್ ಅವರು, ಯುವತಿಯ ಪತ್ರ ನಿನ್ನೆ ನಮ್ಮ ಕಚೇರಿಗೆ ಬಂದಿದೆ ಅದರ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ಮಾಡುತ್ತೇವೆ. ನಮ್ಮ ಎಸ್​ಐಟಿ ಹಿರಿಯ ಅದಿಕಾರಿಗಳ ಜೊತೆ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಎಸ್​ಐಟಿ ಉತ್ತಮ ತನಿಖೆ ಮಾಡುತ್ತಿದೆ. ಸೌಮೆಂದು ಮುಖರ್ಜಿ ಉತ್ತಮ ಹಾಗೂ ದಕ್ಷ ಅಧಿಕಾರಿಯಿದ್ದಾರೆ. ಅವರ ಬಗ್ಗೆ ಆರೋಪ ಮಾಡುವುದು ಸರಿ ಅಲ್ಲ, ಈ ವಿಚಾರ ನ್ಯಾಯಾಲಯಕ್ಕೂ ಗೊತ್ತಾಗಿದೆ. ನ್ಯಾಯಾಲಯಕ್ಕೆ ನಾವು ಮಾಹಿತಿ ಕೊಡುತ್ತೇವೆ ಎಂದು ಕಮಲ್​ ಪಂತ್ ಅವರು ಮಾತನಾಡಿದ್ದಾರೆ.

Next Story

RELATED STORIES