Top

ಚಿಕ್ಕ ವಯಸ್ಸಿನಲ್ಲಿಯೇ ಕದಿಯಲು ಶುರು ಮಾಡಿದವನ ಮೇಲಿದೆ 45 ಕೇಸುಗಳು

ಕದಿಯುವಾಗ ಎಂಟ್ರಿ ಕೊಟ್ರೆ ಪಿಸ್ತೂಲ್​ನಿಂದ ಬೆದರಿಕೆ

ಚಿಕ್ಕ ವಯಸ್ಸಿನಲ್ಲಿಯೇ ಕದಿಯಲು ಶುರು ಮಾಡಿದವನ ಮೇಲಿದೆ 45 ಕೇಸುಗಳು
X

ಬೆಂಗಳೂರು: ಮನೆಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದವನ ಕಥೆಬಿದು. ಮನೆಕಳವು ಪ್ರಕರಣಗಳು ಜಾಸ್ತಿ ಆಗುತ್ತಿರುವ ಕಾರಣ ಮನೆಕಳ್ಳರ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು ಓರ್ವ ಖರ್ತನಾಕ್ ಅಂತರ್ ರಾಜ್ಯ ಕಳ್ಳನ ಹೆಡಮುರಿ ಕಟ್ಟಿದ್ದಾರೆ.

ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಅಂಡ್ ಟೀಂನಿಂದ ಖತರ್ನಾಕ್ ಕಳ್ಳ ಅಂದರ್ ಆಗಿದ್ದಾನೆ. ಉತ್ತರ ಭಾರತ ಮೂಲದ ಈ ಖದೀಮ, ನಗರಕ್ಕೆ ಬರುತ್ತಿದ್ದುದ್ದೇ ಕದೊಯೋದಕ್ಕೆ. ನೋಯ್ಡಾ ಮೂಲದ ಖುರ್ಷಿದ್ ನನ್ನ ಬಂಧಿಸಿದ ಟೀಂ ಸುಮಾರು 1 ಕೆ.ಜಿ. 280 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೀವನ್ ಭೀಮಾನಗರ, ಹನುಮಂತ ನಗರ, ಮೈಕೋ ಲೇ ಔಟ್, ನಂದಿನಿ ಲೇಔಟ್, ಜ್ಞಾನಭಾರತಿ, ಕೆಂಗೇರಿ ಸೇರಿದಂತೆ ಸುಮಾರು 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಖುರ್ಷಿದ್ ಬಂದು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆಗೆ ಹೋಗಿದ್ದಾಗ ಸಿಸಿಬಿ ಅಧಿಕಾರಿಗಳು ತಮ್ಮ ಕಾಂಟಾಕ್ಟ್ ಕೊಟ್ಟು ಬಂದಿದರು. ಕರ್ನಾಟಕದಲ್ಲಿ ಕದ್ದು ಇಲ್ಲಿಗೆ ಬಂದರೆ ಇನ್ಪಾರ್ಮೆಷನ್ ಕೊಡಿ ಎಂದು ಮನವಿ ಮಾಡಿದರು.

ಅದೇ ರೀತಿ ಅಲ್ಲಿದ್ದವರು ನೀಡಿದ ಮಾಹಿತಿ ಮೇರಗೆ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿಬಿದ್ದಿದ್ದು ಈ ಖುರ್ಷಿದ್. ಅಂದ್ಹಾಗೇ ಈತ ಬೆಂಗಳೂರಿಗೆ ಎಂಟ್ರಿಯಾದ್ರೆ ಸಾಕು ಮಿನಿಮಮ್ 1 ಕೆ.ಜಿಗಿಂತಲೂ ಹೆಚ್ಚಿನ ಚಿನ್ನ ಕದಿತಿದ್ದ ಎನ್ನಲಾಗಿದೆ.

ಇನ್ನು ಉತ್ತರಪ್ರದೇಶ ಮೂಲದ ಗಾಜಿಯಾಬಾದ್ ನ ನಿವಾಸಿಯಾಗಿರುವ ಈತ ಚಿಕ್ಕ ವಯಸ್ಸಿನಿಂದಲೂ ಮನೆ ಕಳ್ಳತನ ಮಾಡೋದು ಶುರು ಮಾಡಿಕೊಂಡಿದ್ದ. ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರಿಂದಲೂ ಬಂಧನವಾಗಿ ಆರ್ಮ್ಸ್ ಆಕ್ಟ್ನಲ್ಲಿ ಜೈಲಿಗೂ ಹೋಗಿ ಬಂದಿದ್ದ. ಆದರೆ, ಉತ್ತರಪ್ರದೇಶದಲ್ಲಿ ಪೊಲೀಸರು ಕಣ್ಣಿಟ್ಟಿದ್ದಾರೆ ಅಂತೇಳಿ, ಕರ್ನಾಟಕಕ್ಕೆ ಬಂದು ಕಳ್ಳತನ ಮಾಡಲು ಶುರು ಮಾಡಿದ್ದ. ಅದ್ರಂತೆ ರಾಜ್ಯದಲ್ಲಿ ಸುಮಾರು 45 ಕಡೆಗಳಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಷ್ಟೆಅಲ್ಲದೆ ಈತನಿಂದ ಒಂದು ಪಿಸ್ತೂಲು ಮತ್ತು ಐದು ಗುಂಡುಗಳನ್ನ ವಶಕ್ಕೆ ಪಡೆಯಲಾಗಿದೆ. ತನ್ನನ್ನ ಬಂಧಿಸಲು ಬಂದವರಿಗೆ ಪಿಸ್ತೂಲು ತೋರಿಸಿ ಬೆದರಿಸುತ್ತಿದ್ದನಂತೆ.

ಇನ್ನು ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು ಆರೋಪಿಯಿಂದ ಇನ್ನುಳಿದ ಆರೋಪಿಗಳ ಮಾಹಿತಿ ಹಾಗೂ ಬಚ್ಚಿಟ್ಟಿರುವ ಚಿನ್ನದ ಮಾಹಿತಿ ಹೊರ ಬಿಳುವ ಸಾಧ್ಯತೆ ಇದೆ.

Next Story

RELATED STORIES