Top

ಉಪ್ಪಾರಪೇಟೆ ಪೊಲೀಸರ ಕಾರ್ಯಚರಣೆ ಮೂರು ಕುಖ್ಯಾತ ಕಳ್ಳರ ಬಂಧನ

ಅಪ್ಜಲ್ ಪಾಷ, ಅಫ್ರಿದ್ ಖಾನ್, ಪ್ರವೀಣ್ ಕುಮಾರ್ ಬಂಧಿತ ಆರೋಪಿಗಳು

ಉಪ್ಪಾರಪೇಟೆ ಪೊಲೀಸರ ಕಾರ್ಯಚರಣೆ ಮೂರು ಕುಖ್ಯಾತ ಕಳ್ಳರ ಬಂಧನ
X

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳಿ ಮೊಬೈಲ್ ಕಳ್ಳತನ ಮತ್ತು ಚಿನ್ನ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರ ಬಂಧಿಸಿದ್ದಾರೆ. ಅಪ್ಜಲ್ ಪಾಷ, ಅಫ್ರಿದ್ ಖಾನ್, ಪ್ರವೀಣ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಉಪ್ಪಾರಪೇಟೆ ಪೊಲೀಸರ ಕಾರ್ಯಚರಣೆ ನಡೆಸಿ ಬಂಧಿತ ಆರೋಪಿಗಳಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ, 1 ಲಕ್ಷ 15 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದು, ವಿವಿಧ ಕಂಪೆನಿಯ 43 ಮೊಬೈಲ್​ಗಳನ್ನ ವಶಕ್ಕೆ ಪಡೆದಿದ್ದಾರೆ.

ಈ ಮೂವರು ಆರೋಪಿಗಳು ಏಳು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಸೆಪ್ಟಂಬರ್ 13ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಪ್ಪಾರಪೇಟೆ ಪೊಲೀಸರು ಆರೋಪಿಗಳ ವಿರುದ್ದ ತನಿಖೆ ಮುಂದುವರಿಸಿದ್ದಾರೆ.

Next Story

RELATED STORIES