Top

ವಿರೇನ್ ಖನ್ನಾ ಮನೆಯಲ್ಲಿ ಕರ್ನಾಟಕ ಪೊಲೀಸ್ ಯೂನಿಫಾರ್ಮ್​ ಸಿಕ್ಕಿದೆ - ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​

  • ಈಗಾಗಲೇ ಆರು ಜನರಿಗೆ ಕಷ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ.
  • ಸಾಕಷ್ಟು ತನಿಖೆ ಮಾಡುವ ಬಾಕಿ ಇದೆ.

ವಿರೇನ್ ಖನ್ನಾ ಮನೆಯಲ್ಲಿ ಕರ್ನಾಟಕ ಪೊಲೀಸ್ ಯೂನಿಫಾರ್ಮ್​ ಸಿಕ್ಕಿದೆ - ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​
X

ಬೆಂಗಳೂರು: ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಅನ್ವಯ ತನಿಖೆ ನಡೆಯುತ್ತಿದೆ. ಈಗಾಗಲೇ ಆರು ಜನರಿಗೆ ಕಷ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಜಂಟಿ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ.

ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಚ್ ವಾರೆಂಟ್ ಪಡೆದು ಸಂಜನಾ ಮನೆಗೆ ಬೆಳಗ್ಗೆ ದಾಳಿ ಮಾಡಿದ್ದೇವೆ. ಅನೇಕ ವಸ್ತುಗಳು ಸಿಕ್ಕಿದೆ ಅದರ ಬಗ್ಗೆ ತನಿಖೆ ನಡೆಯಬೇಕಿದೆ ಎಂದರು.

ವಿರೇನ್ ಖನ್ನಾ ಮನೆಯಲ್ಲಿ ಕರ್ನಾಟಕ ಪೊಲೀಸ್ ಯೂನಿಫಾರ್ಮ್​ ಕೂಡ ಸಿಕ್ಕಿದೆ. ಅದು ಯಾತಕ್ಕಾಗಿ ಇಟ್ಟುಕೊಂಡಿದ್ದ ಎಂದು ಗೊತ್ತಾಗಬೇಕಿದೆ. ಸಾಕಷ್ಟು ತನಿಖೆ ಮಾಡುವ ಬಾಕಿ ಇದೆ. ಮತ್ತಷ್ಟು ಜನರ ಬಂಧನವಾಗಬೇಕಿದೆ ಎಂದು ಸಂದೀಪ್​ ಪಾಟೀಲ್ ಅವರು ತಿಳಿಸಿದರು.

ತನಿಖೆಯ ವೇಳೆ ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಡ್ರೆಸ್ ಸಿಕ್ಕಿದ್ದು, ಸ್ಯಾಂಡಲ್​ವುಡ್​ ಡ್ರಗ್ಸ್ ದಂಧೆ ಕಿಂಗ್​ಪಿನ್ ವಿರೇನ್ ಖನ್ನಾಗೆ ಎಸಿಪಿಯೊಬ್ಬರೊಟ್ಟಿಗೆ ನಿಕಟ ನಂಟು ಹೊಂದಿದ್ದಾರೆ. ಆ ಎಸಿಪಿಯೇ ವಿರೇನ್ ಖನ್ನಾಗೆ ಬೆಂಗಳೂರಲ್ಲಿ ಎಲ್ಲ ವ್ಯವಸ್ಥೆ ಮಾಡ್ತಾ ಇದ್ದದ್ದು, ಖನ್ನಾ ಬೆಂಗಳೂರಿನ "ದಿ ಪಾರ್ಕ್" ಹೋಟೆಲ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದ. ವಿರೇನ್ ಖನ್ನಾ ಬರುವ ಮಾಹಿತಿ ಕೊಟ್ಟಿದ್ದರೆ ಸಾಕಿತ್ತು ಎಸಿಪಿ ಎಲ್ಲ ವ್ಯವಸ್ಥೆ ಮಾಡಿಸುತ್ತಿದ್ದರು. ಅಲ್ಲದೆ ಎಸಿಪಿ ಕೂಡ ಅವರು ಮಾಡುತ್ತಿದ್ದ ಪಾರ್ಟಿಗಳಿಗೆ ಆಗಾಗ ಹೋಗಿ ಬರುತ್ತಿದ್ದರು.

Next Story

RELATED STORIES