Top

ತನಿಖೆ ಜಾಡು ಹಿಡಿದು ಎಷ್ಟೇ ದೊಡ್ಡವರು ಇರಲಿ ವಿಚಾರಣೆ ಮಾಡೋದು ಶತ ಸಿದ್ಧ - ಸಚಿವ ಬಸವರಾಜ ಬೊಮ್ಮಾಯಿ

ನಾನು ನಮ್ಮ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಕಾನೂನು ಇನ್ಮಷ್ಟು ಬಿಗಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ತನಿಖೆ ಜಾಡು ಹಿಡಿದು ಎಷ್ಟೇ ದೊಡ್ಡವರು ಇರಲಿ ವಿಚಾರಣೆ ಮಾಡೋದು ಶತ ಸಿದ್ಧ - ಸಚಿವ ಬಸವರಾಜ ಬೊಮ್ಮಾಯಿ
X

ಬೆಂಗಳೂರು: ಸಿಸಿಬಿಯವರು ಬಹಳ ಪ್ರೊಫೆಷನಲ್ ಆಗಿ, ಕ್ರಮ ಬದ್ಧವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆ ಜಾಡು ಹಿಡಿದು ಎಷ್ಟೇ ದೊಡ್ಡವರಿರಲಿ ವಿಚಾರಣೆ ಮಾಡೋದು ಶತ ಸಿದ್ಧ ಎಂದು ಗೃಹಮಂತ್ರಿ ಬಸವರಾಜ​ ಬೊಮ್ಮಾಯಿ ಅವರು ಗುರುವಾರ ಹೇಳಿದರು.

ಡ್ರಗ್ಸ್​ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಕಾರ್ಯಾಚರಣೆ, ವಿಚಾರಣೆ, ಸ್ಕೃಟಿನಿ ಅಪ್ ದಿ ಕೋರ್ಟ್ ಆಗುತ್ತದೆ. ಕಾನೂನಿನ ಅನ್ವಯ ಕಾರ್ಯಾಚರಣೆ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿ ಸಾಕ್ಷಿಗಳ ಆಧಾರಗಳ ಮೇಲೆ ಕ್ರಮ ಬದ್ಧವಾಗಿ ತನಿಖೆ ನಡೆಯುತ್ತಿದೆ ಎಂದರು.

ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಡಿ ಎಂದು ತಜ್ಞರ ಅಭಿಪ್ರಾಯ ಆಗಿದೆ. ನಾನು ನಮ್ಮ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಕಾನೂನು ಇನ್ಮಷ್ಟು ಬಿಗಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಸದ್ಯ ಈ ಬಗ್ಗೆ ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಕಾನೂನು ಶಾಲೆ ಮುಖ್ಯಸ್ಥರ ಜೊತೆ ಮಾತಾಡಿದ್ದೇನೆ. ನ್ಯಾಷನಲ್ ಲಾ ಸ್ಕೂಲ್ ಫ್ರೊಫೆಸರ್ ಗಳ ಜೊತೆ ಚರ್ಚೆ ಮಾಡಿ ಕಾನೂನು ಬಿಗಿ ಗೊಳಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದಾರೆ.

Next Story

RELATED STORIES