Top

ದೊಣ್ಣೆ ಬಿರಿಯಾನಿ ಹೋಟೆಲ್​ನಲ್ಲಿ​ ಎರಡು ಗುಂಪುಗಳ ನಡುವೆ ಮಾರಾಮಾರಿ

ಹೋಟೆಲ್​ನಲ್ಲಿದ್ದ ಬಾಟಲ್​ಗಳಿಂದಲೇ ಎರಡು ಯುವಕರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ದೊಣ್ಣೆ ಬಿರಿಯಾನಿ ಹೋಟೆಲ್​ನಲ್ಲಿ​ ಎರಡು ಗುಂಪುಗಳ ನಡುವೆ ಮಾರಾಮಾರಿ
X

ಬೆಂಗಳೂರು: ನ್ಯೂ​ ಇಯರ್​ಗೂ ಮುಂಚೆನೇ ಮಾಳಗಾಲದ ದೊಣ್ಣೆ ಬಿರಿಯಾನಿ ಹೋಟೆಲ್​ವೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ನಿನ್ನೆ (ಬುಧವಾರ) ರಾತ್ರಿ ಹೋಟೆಲ್​ಗೆ ಎರಡು ಯುವಕರ ಗುಂಪು ಊಟ ಮಾಡಲು ಬಂದಿದ್ದಾರೆ. ಈ ವೇಳೆ ವೈಟರ್​ ವಿಚಾರಕ್ಕೆ 2 ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಘಟನೆ ವಿಕೋಪಕ್ಕೆ ತಿರುಗಿ ಕೈಕೈಮಿಲಾಸಿದ್ದಾರೆ.


ಬಳಿಕ ಹೋಟೆಲ್​ನಲ್ಲಿದ್ದ ಬಾಟಲ್​ಗಳಿಂದಲೇ ಎರಡು ಯುವಕರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲಿದ್ದ ಕುರ್ಚಿ, ಟೇಬಲ್​ನಲ್ಲೂ ಒಬ್ಬರಿಗೊಬ್ಬರ ಮೇಲೆ ಎಸೆದಾಡಿದ್ದಾರೆ. ಅದು ಸಾಲದು ಅಂತ ಹೋಟೆಲ್​ ಮುಂಭಾಗದ ರಸ್ತೆಗೆ ಬಂದು ಬಟ್ಟೆ ಬಿಚ್ಚಿ ಹೊಡೆದಾಡಿಕೊಂಡಿದ್ದಾರೆ. ಎರಡು ತಂಡಗಳ ಘರ್ಷನೆ ಹೋಟೆಲ್​ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಘಟನೆಯ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Next Story

RELATED STORIES