Top

ಓಡಿ ಹೋಗಿ ಮದ್ವೆ ಆಗಲು 64 ಲಕ್ಷ ಕದ್ದಿದ್ದ ಆರೋಪಿ ಈಗ ಪೊಲೀಸರ ಅತಿಥಿ

ಕದ್ದ ಹಣದಲ್ಲಿ 45 ಲಕ್ಷ ವಕೀಲನಿಗೆ ನೀಡಿದ್ದ ಆರೋಪಿ

ಓಡಿ ಹೋಗಿ ಮದ್ವೆ ಆಗಲು 64  ಲಕ್ಷ ಕದ್ದಿದ್ದ ಆರೋಪಿ ಈಗ ಪೊಲೀಸರ ಅತಿಥಿ
X

ಬೆಂಗಳೂರು: ಆತ ಪತ್ನಿಗೆ ಮೋಸ ಮಾಡಿ ಅತ್ತೆ ಮಗಳ ಜೊತೆ ಕಾಲ್ಕಿತ್ತಿದ್ದ. ಅತ್ತೆ ಮಗಳಿಗಾಗಿ ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಹಣ ಎಗರಿಸಿದ್ದ. ಕೇಸು ದಾಖಲಿಸಿದ್ದ ಪೊಲೀಸರು ಆರೋಪಿಯನ್ನ ಹರಡೆಮುರಿ ಕಟ್ಟಿದ್ದಾರೆ.

ಪ್ರೀತಿಗಾಗಿ ಸ್ವಂತ ಹೆಂಡತಿ ಮಕ್ಕಳನ್ನು ಬಿಟ್ಟು ಎಟಿಎಂ ಯಂತ್ರಕ್ಕೆ ತುಂಬುವ 64 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದ್ದ ಚಾಲಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಗಂಡನನ್ನು ಬಿಟ್ಟಿದ್ದ ಅತ್ತೆ ಮಗಳಿಗೆ ಬಾಳು ಕೊಡಲು ಜೀವ ತೊರೆದು ಎಟಿಎಂ ಹಣವನ್ನು ಎಗರಿಸಿದ್ದ ಯೋಗೀಶ್. ಅಂದುಕೊಂಡಂತೆ ಹಣ ಎಗರಿಸಿ ಲವರ್ ಜತೆ ಎಸ್ಕೇಪ್ ಆಗಿದ್ದ ಸೆಕ್ಯೂರ್ ವ್ಯಾಲ್ಯೂ ಕಂಪನಿ ಚಾಲಕ ಯೋಗೀಶ್ ಮೈಸೂರಿನಲ್ಲಿ ಲವರ್ ಜತೆ ಸಿಕ್ಕಿ ಬಿದ್ದಿದ್ದಾನೆ.

ಲವರ್ ಜತೆ ಮೈಸೂರಿನಲ್ಲಿ ಸ್ನೇಹಿತರ ಆಶ್ರಯ ಪಡೆಯಲು ಹೋಗಿದ್ದಾನೆ. ಆದರೆ, ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಯೋಗೀಶ್​ನನ್ನು ಸುಬ್ರಮಣ್ಯನಗರ ಠಾಣೆ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಸೆಕ್ಯೂರ್ ವಾಲ್ಯೂ ಕಂಪನಿಯಲ್ಲಿ ಚಾಲಕನಾಗಿದ್ದ ಯೋಗೀಶ್ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದ. ನೆಮ್ಮದಿಯ ಜೀವನದಲ್ಲಿ ಇಬ್ಬರು ಮಕ್ಕಳೊಂದಿಗೆ ಯೋಗೀಶ್ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದ. ಕಳ್ಳತನ ಮಾಡಿದ್ದ ಹಣದಲ್ಲಿ 50 ಸಾವಿರ ಹೆಂಡರಿಗೆ ಕೊಟ್ಟು ಎರಡು ಮೂರು ದಿನ ಹೊರಗೆ ಹೋಗುವುದಾಗಿ ಹೇಳಿದ್ದ.

ಇತ್ತ ಯೋಗೀಶ್​ನ ಅತ್ತೆ ಮಗಳು ಮದುವೆಯಾಗಿ ಒಂದು ಮಗ ಕೂಡ ಇದೆ. ಮುಂಬಯಿನಲ್ಲಿರುವ ಗಂಡನ ಜತೆ ಅನೋನ್ಯವಾಗಿರಲಿಲ್ಲ. ಇಬ್ಬರ ನಡುವಿನ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಚಾಲಕ ವೃತ್ತಿಯಿಂದ ಬರುವ ದುಡ್ಡಿನಲ್ಲಿ ಇರುವ ಹೆಂಡತಿಯನ್ನು ಸಾಕುವುದೇ ಕಷ್ಟವಾಗಿತ್ತು. ಇನ್ನು ಇಬ್ಬರ ಮಕ್ಕಳ ಪೋಷಣೆ ಸಂಸಾರ ಕಷ್ಟವಾಗಿತ್ತು. ಹೀಗಿರುವಾಗಲೇ ತನ್ನ ಅತ್ತೆ ಮಗಳ ಜತೆ ಸಂಸಾರ ಮಾಡಲು ಯೋಜಿಸಿದ. ಇಬ್ಬರೂ ಪರಸ್ಪರ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಅದಕ್ಕೆ ದುಡ್ಡು ಬೇಕಿತ್ತು. ಆಗ ಯೋಗೀಶ್ ತಲೆಯಲ್ಲಿ ಹುಟ್ಟಿಕೊಂಡಿದ್ದು ಎಟಿಎಂ ಕ್ಯಾಷ್ ಹಾಗಯೇ ಪೆ.3 ಹಣವನ್ನು ದೋಚಿ ಇದೀಗ ಸಿಕ್ಕಿಬಿದ್ದಿದ್ದಾನೆ.

ಇನ್ನು ಇದೇ ಪ್ರಕರಣದಲ್ಲಿ ಶ್ರೀಧರ್ ಎಂಬ ವಕೀಲನಿಗೂ ಪೊಲೀಸರಿಗೂ ಬಲೆ ಬೀಸಿದ್ದು , 64 ಲಕ್ಷ ಕದ್ದು ತನ್ನ ಸ್ನೇಹಿತನೆ ಆಗಿದ್ದ ವಕೀಲ ಶ್ರೀಧರನಿಗೆ ನೀಡಿದ್ದನಂತೆ. ಸದ್ಯ ಸುಬ್ರಮಣ್ಯ ನಗರ ಪೊಲೀಸ್ರು ಆರೋಪಿ ಯೋಗೀಶ್ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಅಡ್ವೋಕೇಟ್ ಶ್ರೀಧರ್ ಗಾಗಿ ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ.

Next Story

RELATED STORIES