Top

ಸಿಸಿಬಿಯಲ್ಲಿ ನಾಲ್ಕು ಗಂಟೆಗಳ ಕಾಲ ಸ್ವೀಟಿ ವಿಚಾರಣೆ

ನಕಲಿ ಸ್ವಾಮಿಯನ್ನ ಕಂಡು ಶಾಕ್ ಆದಳು ನಾಟ್ಯ ರಾಣಿ

ಸಿಸಿಬಿಯಲ್ಲಿ ನಾಲ್ಕು ಗಂಟೆಗಳ ಕಾಲ ಸ್ವೀಟಿ ವಿಚಾರಣೆ
X

ಬೆಂಗಳೂರು: ವಂಚಕ ಸ್ವಾಮಿ ಜಯರಾಜ್ ನಂಟು ನಟಿ ರಾಧಿಕಾ ಅವರನ್ನು ಸಂಕಷ್ಟಕ್ಕೆ ದೂಡಿದೆ. ಸತತ 4 ಗಂಟೆಗಳ ವಿಚಾರಣೆ ಮುಗಿದಿದೆ. ಆದರೆ, ಮತ್ತೆ ವಿಚಾರಣೆ ಎದುರಾದರೂ ಅಚ್ಚರಿ ಇಲ್ಲ.

ನಕಲಿ ಆರ್​ಎಸ್​ಎಸ್​ ನಾಯಕ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ಇಂದು ನಟಿ ರಾಧಿಕ ಕುಮಾರಸ್ವಾಮಿ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ನಿನ್ನೆ ಸಿಆರ್​ಪಿಸಿ 91 ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿತ್ತು.

ಈ ಸಂಬಂಧ ಇಂದು ಡಾಲರ್ಸ್ ಕಾಲೋನಿಯ ಮನೆಯಿಂದ ಸುಮಾರು 10.30ಕ್ಕೆ ಹೊರಟು ಹನ್ನೊಂದು ಗಂಟೆ ಸುಮಾರಿಗೆ ಸಿಸಿಬಿ ಕಚೇರಿ ತಲುಪಿದರು. ಈ ವೇಳೆ ಸ್ವೀಟಿ ಸಹೋದರ ರವಿರಾಜ್ ಕೂಡ ಜೊತೆಗೆ ಇದ್ದರು. ರಾಧಿಕಾರನ್ನ ಸುಮಾರು ನಾಲ್ಕು ಗಂಟೆ ವಿಚಾರಣೆ ಮಾಡಿದ ಸಿಸಿಬಿ ಎಸಿಪಿ ನಾಗರಾಜ್ ಖುದ್ದು ರಾಧಿಕ ಹೇಳಿಕೆ ದಾಖಲು ಮಾಡಿದರು. ಅಲ್ಲದೆ, ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿಯನ್ನು ವಿಚಾರಣೆಗೆ ಕರೆತಂದ ಸಿಸಿಬಿ ಅಧಿಕಾರಿಗಳು ಸ್ವೀಟಿಗೆ ಶಾಕ್ ನೀಡಿದರು.

ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು ಯಾವುದೇ ಪ್ರಶ್ನೆಗಳಿಗೆ ಸ್ವೀಟಿ ಸಮರ್ಪಕ ಉತ್ತರ ನೀಡಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಅಲ್ಲದೆ, ಅವರೇ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿಯಂತೆ ಹಣದ ವಹಿವಾಟು ಸಂಬಂಧ ಯಾವುದೇ ದಾಖಲೆಗಳನ್ನು ನೀಡಿಲ್ಲ ಎನ್ನುತ್ತಿವೆ ಸಿಸಿಬಿ ಮೂಲಗಳು.

ರಾಧಿಕ ಕುಮಾರಸ್ವಾಮಿ ಹಾಗೂ ಯುವರಾಜ್ ಅಲಿಯಾಸ್ ಸ್ವಾಮಿ ನಡುವೆ ಸುಮಾರು ಎರಡೂವರೆ ಕೋಟಿ ಹಣದ ವ್ಯವಹಾರ ನಡೆದಿದೆ ಎನ್ನಲಾಗ್ತಾ ಇದೆ. ಸದ್ಯ ಸ್ವೀಟಿಯ. ಸಂಪೂರ್ಣ ಹೇಳಿಕೆ ದಾಖಲು ಮಾಡಿರುವ ಸಿಸಿಬಿ ಅದರ ಮೇಲೆ ಹೆಚ್ಚಿನ ತನಿಖೆ ಮಾಡಲು ಮುಂದಾಗಿದೆ. ಹೀಗಾಗಿ ಇದು ಟ್ರೈಲರ್ ಅಷ್ಟೆ ಪಿಕ್ಚರ್ ಇನ್ನೂ ಬಾಕಿ ಇದ್ದು ಇನ್ನೂಸಾಕಷ್ಟು ಮಂದಿಯ ಹೆಸರು ಹೊರಗೆ ಬರುವ ಸಾಧ್ಯತೆ ಇದೆ. ಇನ್ನೂ ವಿಚಾರಣೆ ಬಳಿಕ ಮಾತಮಾಡಿದ ರಾಧಿಕ ಕುಮಾರಸ್ವಾಮಿ ಸಿಸಿಬಿಯ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೆನೆ. ಮತ್ತೆ ವಿಚಾರಣೆಗೆ ಕರೆದ್ರೆ ಬರುವುದಾಗಿ ತಿಳಿಸಿದ್ದಾರೆ.

Next Story

RELATED STORIES