ಯುವತಿಯ ಪೋಷಕರ ವಿಚಾರಣೆ ನಡೆಸಿದ ಎಸ್ಐಟಿ
ಎಸ್ಐಟಿಯಿಂದ ಯುವತಿಗೆ ಐದನೇ ಬಾರಿ ನೋಟಿಸ್
ಬೆಳಗಾವಿ: ಕಿಂಗ್ಪಿನ್ ಎನ್ನಲಾದ ವ್ಯಕ್ತಿಗಳು ಇನ್ನೂ ನಿಗೂಢವಾಗೆ ಇದ್ದಾರೆ. ಒಂದು ಸಣ್ಣ ಕ್ಲೂ ಕೂಡ ಇರದ ಎಸ್ಐಟಿಯ ಮುಂದಿನ ನಡೆ ಏನು ಎಂಬುದು ಗೊತ್ತಾಗ್ತಿಲ್ಲ.ಆದರೆ, ಉಳಿದವರ ತನಿಖೆ ಮಾತ್ರ ಜೋರಾಗಿಯೇ ನಡೆಯುತ್ತಿದೆ.
ಒಟ್ಟು 50-60 ಜನರ ದೊಡ್ಡ ತಂಡ ಎಂಟು ಜನ ಸಮರ್ಥ ಅಧಿಕಾರಿಗಳು. ಆದರೆ, ರಿಸಲ್ಟ್ ಮಾತ್ರ ಝೀರೋ ಎಂಬಂತಾಗಿದೆ ಸಿಡಿ ಪ್ರಕರಣ. ಇಬ್ಬರು ವ್ಯಕ್ತಿಗಳು ಒಬ್ಬ ಯುವತಿಯನ್ನ ಇಲ್ಲಿಯವರೆಗೂ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗಿಲ್ಲ ಎಂದರೆ ಅದು ದೊಡ್ಡ ಸೋಲೇ ಸರಿ. ಆದರೂ ಎಸ್ಐಟಿ ಅಧಿಕಾರಿಗಳು ಪಟ್ಟು ಬಿಡದೆ ಹೊರ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ.
ಸಿಡಿ ಕೇಸಿಗೆ ಬಹುಮುಖ್ಯವಾಗಿ ಬೇಕಿರೋದು ಯುವತಿ. ಹೀಗಾಗಿ ಯುವತಿಯ ಹೇಳಿಕೆ ಅತ್ಯವಶ್ಯಕವಾಗಿದ್ದು , ಆರ್ಟಿ ನಗರದ ಆಕೆಯ ಮನೆಗೆ ಇಂದಿನ ನೊಟೀಸ್ ಸೇರಿ ಒಟ್ಟು ಐದು ನೊಟೀಸ್ಗಳನ್ನ ಜಾರಿ ಮಾಡಲಾಗಿದೆ ಅದೇ ರೀತಿ ವಾಟ್ಸಪ್, ಈ ಮೇಲ್ಗೂ ನೊಟೀಸ್ ಸರ್ವ್ ಮಾಡಲಾಗಿದೆ. ಆ ನೊಟೀಸ್ ಆಕೆಗೆ ತಲುಪಿರುವ ಬಗ್ಗೆ ಸೈಬರ್ ಕ್ರೈಂನಿಂದ ಮಾಹಿತಿ ಕೂಡ ಇದೆ ಆದರೆ ಯುವತಿ ಮಾತ್ರ ಯಾವುದೇ ನೊಟೀಸ್ಗೂ ಕ್ಯಾರೆ ಎನ್ನದೆ ಸುಮ್ಮನಾಗಿದ್ದಾಳೆ.
ಇದೇ ವೇಳೆಯಲ್ಲಿ ಬೆಳಗಾವಿಗೆ ತೆರಳಿರುವ ಎಸ್ಐಟಿ ಅಧಿಕಾರಿಗಳು, ಯುವತಿಯ ಪೋಷಕರನ್ನ ತನಿಖೆ ಮಾಡಿದ್ದಾರೆ. ಆಕೆಯ ಹಿನ್ನೆಲೆ ಬಗ್ಗೆ ಕೇಳಿರುವ ಎಸ್ಐಟಿ, ಆಕೆ ಕರೆ ಮಾಡಿದ್ದು ಯಾವಾಗ ಎಂಬೆಲ್ಲ ಪ್ರಶ್ನೆಗಳನ್ನ ಕೇಳಿದ್ದಾರೆ. ಈ ಸಂಧರ್ಭದಲ್ಲಿ ಯುವತಿ ಪೋಷಕರಿಗೆ ನಾಲ್ಕು ಬಾರಿ ಕರೆ ಮಾಡಿದ್ಲಂತೆ. ಗೋವಾದಲ್ಲಿ ಚೆನ್ನೈನಲ್ಲಿ ಇರುವಾಗ ಕರೆ ಮಾಡಿ ನಾನು ಸೇಫಾಗಿದಿನಿ ಎಂದಿದ್ದಳು.ನಂತರದ ದಿನಗಳಲ್ಲಿ ತನಗೆ ಇಲ್ಲಿ ಏನಾಗ್ತಿದೆ ಎಂದ ಗೊತ್ತಾಗ್ತಿಲ್ಲ ನಾನು ತುಂಬಾ ಡಿಪ್ರೆಷನ್ನಲ್ಲಿದಿನಿ ಎಂದಿದ್ದಾಳಂತೆ. ಹೀಗಾಗಿ ಭಯ ಬಿದ್ದ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿರೋದಾಗಿ ಹೇಳಿಕೊಂಡಿದ್ದಾರೆ. ಅಷ್ಟಲ್ಲದೆ ತನ್ನ ಮಗಳನ್ನ ಕಿಡ್ನ್ಯಾಪ್ ಮಾಡಿದ್ದಾರೆ ದಯವಿಟ್ಟು ಕಾಪಾಡಿ ಎಂದು ಎಸ್ಐಟಿ ಅಧಿಕಾರಿಗಳ ಬಳಿ ಅವಲತ್ತುಕೊಂಡಿದ್ದಾರೆ.
ಇನ್ನು ಎಸ್ಐಟಿ ಅಧಿಕಾರಿಗಳು ಸಾಕ್ಷಿ ಕಲೆ ಹಾಕುವುದರಲ್ಲೆ ಮಗ್ನರಾಗಿದ್ದು, ಪ್ರಮುಖ ಶಂಕಿತ ಆರೋಪಿಗಳನ್ನ ಬಂಧಿಸುವಲ್ಲಿ ಹಿನ್ನೆಡೆ ಕಂಡಿದ್ದಾರೆ. ಆದರೆ ಎಸೈಟಿ ನಿರಂತವಾಗಿ ಮೂವರು ವ್ಯಕ್ತಿಗಳ ಹುಡುಕಾಟ ಮುಂದುವರೆಸಿದೆ