Top

ಸರಣಿ ಬಾಂಬ್​ ಸ್ಪೋಟದ ಪ್ರಮುಖ ಆರೋಪಿ ಶೋಯೆಬ್​ ಬಂಧನ

ಶೋಯೆಬ್​ ಎಂಬಾತನು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಈತ ನಿನ್ನೆ ಕೇರಳಕ್ಕೆ ಬರುವ ಮಾಹಿತಿಯನ್ನು ತಿಳಿದು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಸರಣಿ ಬಾಂಬ್​ ಸ್ಪೋಟದ ಪ್ರಮುಖ ಆರೋಪಿ ಶೋಯೆಬ್​ ಬಂಧನ
X

ಬೆಂಗಳೂರು: ಜುಲೈ 25, 2008ರಲ್ಲಿ ಬೆಂಗಳೂರು ಸರಣಿ ಬಾಂಬ್​ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೇಸ್​ನ ಪ್ರಮುಖ ಆರೋಪಿ ಶೋಯೆಬ್​ನನ್ನು(31) ಕೇಂದ್ರ ತನಿಖಾ ಸಂಸ್ಥೆ ಜೊತೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸರಣಿ ಬಾಂಬ್​ ಸ್ಫೋಟದಲ್ಲಿ ಒಟ್ಟು 31 ಮಂದಿ ಕೈವಾಡವಿದೆ ಎಂದು ತಿಳಿದುಬಂದಿತ್ತು. ಸದ್ಯ ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ 22 ಮಂದಿ ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ.

ಈ ಕೇಸ್​ನಲ್ಲಿ ಮುಖ್ಯ ಪಾತ್ರವಹಿಸಿದ್ದ ಶೋಯೆಬ್​ ಎಂಬಾತನು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಈತ ನಿನ್ನೆ ಕೇರಳಕ್ಕೆ ಬರುವ ಮಾಹಿತಿಯನ್ನು ತಿಳಿದು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಜುಲೈ 2008ರಲ್ಲಿ ನಡೆದ ಈ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಳು. ಹಲವರು ಗಂಭೀರ ಗಾಯವಾಗಿತ್ತು.

ನಾಯಂಡಹಳ್ಳಿ ಜಂಕ್ಷನ್ ಹತ್ತಿರ 1:20ಕ್ಕೆ ಮಧ್ಯಾಹ್ನ ಬ್ಲಾಸ್ಟ್ ಮಾಡಿದರು. ಒಂಭತ್ತನೆದು ಮಾಗಡಿ ಚೆಕ್ ಪೋಸ್ಟ್‌ಹತ್ತಿರ 2:35 ಕ್ಕೆ ಬ್ಲಾಸ್ಟ್. ಮರುದಿನ, ದಿನ ಪೋರಂ ಮಾಲ್ ಹತ್ತಿರ ಒಂದ್ ಬಾಂಬ್ ಡಿಪ್ಯೂಸ್ ಮಾಡಿದರು. ಹಲವು ಜನರ ಬಂಧನ ಅಗಿದೆ. ಕೆಲವರಿಗೆ ಶಿಕ್ಷೆಯು ಅಗಿದೆ. ಶಂಕರ್ ಬಿದರಿ ಅಂದಿನ. ಸಿಟಿ ಕಮೀಷನರ್. ಸಿಮಿ ಸಂಘಟನೆ ಬ್ಯಾನ್ ಆಗೋಕು ಮುಂಚೆ ಗುರಪ್ಪನಪಾಳ್ಯದಲ್ಲಿ ಅದರ ಅಫೀಸ್ ಇತ್ತು. ಬ್ಯಾನ್ ಆದ ಮೇಲೂ ಅಲ್ಲೆ ಪಕ್ಕದಲ್ಲಿ ಮನೆ ಬಾಡಿಗೆ ತಗೊಂಡು ಬ್ಲಾಸ್ಟ್ ಪ್ಲಾನ್ ಮಾಡಿದರು.

Next Story

RELATED STORIES