Top

ಈ ತಿಂಗಳೇ ಶಶಿಕಲಾಗೆ ಬಿಡುಗಡೆ ಭಾಗ್ಯ..?

ಇನ್ನೇನು ಕೆಲ ದಿನಗಳಷ್ಟೆ ಜೈಲು ವಾಸ.

ಈ ತಿಂಗಳೇ ಶಶಿಕಲಾಗೆ ಬಿಡುಗಡೆ ಭಾಗ್ಯ..?
X

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಈಗ ಆಸ್ಪತ್ರೆ ಪಾಲಾಗಿದ್ದು, ಇನ್ನೇನು ಕೆಲ ದಿನಗಳಷ್ಟೆ ಜೈಲು ವಾಸ. ಸುಧೀರ್ಘ ಸೆರೆಮನೆ ಕಂಡಿದ್ದಾಕೆ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಸಿರಾಟದ ಸಮಸ್ಯೆ ಕಂಟ್ರೋಲ್​ಗೆ ಬಾರದ ಹಿನ್ನೆಲೆ ಶಶಿಕಲಾರನ್ನ ಪರಪ್ಪನ ಅಗ್ರಹಾರದಿಂದ ನಿನ್ನೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಮೇಲ್ದರ್ಜೇಯ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಶಶಿಕಲಾ ಅವರನ್ನ ಬೌರಿಂಗ್​ನ ಐಸಿಯೂನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಉಸಿರಾಟದ ಸಮಸ್ಯೆಯೇ ಪ್ರಮುಖವಾದ ಕಾರಣ ಆಕ್ಸಿಝನ್ ಪೂರೈಕೆ ಮಾಡುವ ಮುಖಾಂತರ ನಿನ್ನೆ ಇಡೀ ರಾತ್ರಿ ನಿಗಾ ವಹಿಸಲಾಗಿತ್ತು.

66 ಕೋಟಿ ಅಕ್ರಮ ಆಸ್ತಿ ಸಂಪಾದನೆ ಅಡಿ ಶಶಿಕಲಾ ಮತ್ತು ಅವರ ಆಪ್ತರಾದ ಇಳವರಸಿ ಸುಧಾಕರ್ ಸೇರಿ ಮೂವರು ಆರೋಪಿಗಳು ಎಂದು ಪರಿಗಣಿಸಿ 2017ರಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜೈಲಿಗೆ ಕಳಸಲಾಗಿತ್ತು. ಇದೇ ತಿಂಗಳು 27ರಂದು ಆಕೆ ಬಿಡುಗಡೆಯಾಗುತ್ತಾರೆ ಎಂದು ಕೇಳಿ ಬಂದಿತ್ತು. ಆ ದಿನಾಂಕದ ಪ್ರಕಾರ ಇನ್ನು ಆರು ದಿನ ಇರುವಷ್ಟ್ರಲ್ಲಿ ಶಶಿಕಲಾ ಆಸ್ಪತ್ರೆ ಸೇರಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆ ಇದ್ರೂ ಸರಿಯಾದ ಸೆಕ್ಯೂರಿಟಿ ಕೊಡಲು ಸಾಧ್ಯವಾಗದ ಹಿನ್ನೆಲೆ ಮತ್ತು ಬೌರಿಂಗ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ ಜೈಲು ಅಧಿಕಾರಿಗಳು ಶಶಿಕಲಾ ಅವರನ್ನ ಶಿಫ್ಟ್ ಮಾಡಲು ಬೌರಿಂಗ್ ಆಡಳಿತ ಮಂಡಳಿಗೆ ಪತ್ರ ಬರೆದ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನು ಇದೇ ಸಂಧರ್ಭದಲ್ಲಿ ಮಾತನಾಡದ ಬೌರಿಂಗ್ ಆಸ್ಪತ್ರೆಯ ವೈದ್ಯ, ಶಶಿಕಲಾ ಅವರಿನ್ನ ಕೋವಿಡ್ ಟೆಸ್ಟ್ ಒಳಪಡಿಸಲಾಗಿದ್ದು ಆ ವರದಿ ಕೂಡ ನೆಗಟಿವ್ ಬಂದಿದೆ ಸದ್ಯ ಸಿಟಿ ಸ್ಕ್ಯಾನ್​ಗಾಗೊ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿರೋದಾಗಿ ಹೇಳಿದ್ದಾರೆ.

ಇನ್ನು ಮೂರ್ನಾಲ್ಕು ದಿನಗಳಲ್ಲಿ ಶಶಿಕಲಾ ಅವರು ಡಿಸ್ಚಾರ್ಜ್ ಆಗಲಿದ್ದು ಪರಪ್ಪನ ಅಗ್ರಹಾರ ಸೇರಲಿದ್ದಾರೆ. ನಂತರದ ದಿನಗಳಲ್ಲಿ ಅವರ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ.


Next Story

RELATED STORIES