Top

ಡ್ರಗ್ಸ್​ ಪ್ರಕರಣ: ಮತ್ತೆ 5 ದಿನ ಸಿಸಿಬಿ ವಶದಲ್ಲಿ ನಟಿ ರಾಗಿಣಿ!

  • ಮತ್ತೆ ಐದು ದಿನಗಳ ವರೆಗೆ ಸಿಸಿಬಿ ಕಸ್ಟಡಿಯಲ್ಲಿ ನಟಿ ರಾಗಿಣಿ.
  • 1ನೇ ಎಸಿಎಂಎಂ ಕೋರ್ಟ್​ನಿಂದ ಆದೇಶ.
  • 10 ದಿನಗಳ ಕಾಲಾವಕಾಶ ಕೋರಿದ್ದ ಸಿಸಿಬಿ ಅಧಿಕಾರಿಗಳು.

ಡ್ರಗ್ಸ್​ ಪ್ರಕರಣ: ಮತ್ತೆ 5 ದಿನ ಸಿಸಿಬಿ ವಶದಲ್ಲಿ ನಟಿ ರಾಗಿಣಿ!
X

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ಸಂಬಂಧ 1ನೇ ಎಸಿಎಂಎಂ ಕೋರ್ಟ್​ ನಟಿ ರಾಗಿಣಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿ ಇರುವಂತೆ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ 3 ದಿನದ ಕಸ್ಟಡಿ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಸಿಸಿಬಿ ಅಧಿಕಾರಿಗಳು 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜಗದೀಶ್ ಅವರ ಮುಂದೆ ಹಾಜರುಪಡಿಸಿದರು.

ಈ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಬಳಿ ಹತ್ತು ದಿನಗಳ ಕಾಲಾವಧಿಯ ವರೆಗೆ ಸಿಸಿಬಿ ಕಸ್ಟಡಿ ವಿಸ್ತರಿಸುವಂತೆ ಕೋರ್ಟ್​​ಗೆ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು 5 ದಿನಕ್ಕೆ ಮಾತ್ರ ಆದೇಶಿಸಿದ್ದಾರೆ.

ಡ್ರಗ್ಸ್ ಸೇವನೆ ಮತ್ತು ಪೆಡ್ಲರ್​ಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ನಟಿ ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಾಗಿಣಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Next Story

RELATED STORIES