Top

ಟೆಕ್ನಿಕಲ್, ಬಯಾಲಾಜಿಕಲ್, ಲೈವ್ ಎವಿಡೆನ್ಸ್ ಕಲೆ ಹಾಕಿದ ಎಸ್​ಐಟಿ ತಂಡ

ವಶಕ್ಕೆ ಪಡೆದು ಪಂಚರ ಸಮಕ್ಷಮದಲ್ಲಿ ಪ್ಯಾಕ್ ಮಾಡಿ ಅದನ್ನು ಎಫ್​ಎಸ್​ಎಲ್​ಗೆ ಕಳುಹಿಸೊದಕ್ಕೆ ಎಸ್​ಐಟಿ ಸಿದ್ಧ

ಟೆಕ್ನಿಕಲ್, ಬಯಾಲಾಜಿಕಲ್, ಲೈವ್ ಎವಿಡೆನ್ಸ್ ಕಲೆ ಹಾಕಿದ ಎಸ್​ಐಟಿ ತಂಡ
X

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಇನ್ನು ತಾರ್ಕಿಕ ಅಂತ್ಯ ಇನ್ನು ಸಿಕ್ಕಿಲ್ಲ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಡಿ ಯುವತಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರಾಗಿದರು. ಇಂದು ಯುವತಿಯಿಂದ ಏನೆಲ್ಲಾ ಅಂಶ ಎಸ್​ಐಟಿ ಪಡೆದುಕೊಂಡಿದೆ ಗೊತ್ತಾ(?)

ನಿನ್ನೆಯಷ್ಟೇ ಎಸ್​ಐಟಿ ಅಧಿಕಾರಿಗಳು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು ಅಷ್ಟೇ ಅಲ್ಲದೆ ವೈದ್ಯಕೀಯ ಪರೀಕ್ಷೆಯ ನಂತರ ಯುವತಿಯನ್ನು ಆಡುಗೋಡಿ ಟೆಕ್ನಿಕಲ್ ಸೆಂಟರ್​ಗೆ ಯುವತಿಯನ್ನು ಕರೆದೊಯ್ದ ಅಧಿಕಾರಿಗಳು ಸಾಕಷ್ಟು ವಿಚಾರಣೆಗೆ ಒಳಪಡಿಸಿದರು. ನಂತರ ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದ ಎಸ್​ಐಟಿ ಅಧಿಕಾರಿಗಳು ಇಂದು ಯುವತಿಯನ್ನು ಕರೆತಂದು ತನಿಖಾಧಿಕಾರಿ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ಆರ್​ಟಿ ನಗರದಲ್ಲಿ ಯುವತಿ ವಾಸವಿದ್ದ ಪಿಜಿಯಲ್ಲಿ ಸ್ಥಳ ಮಹಜರು ನಡೆಸಿದರು. ಪಿಜಿಯಲ್ಲಿ ಸತತ ಮೂರು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು ಘಟನೆ ನಡೆದ ದಿನ ಯುವತಿ ಧರಿಸಿದ್ದ ಬಟ್ಟೆ, ಹಾಗೂ ಒಳ ಉಡುಪುಗಳನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮದಲ್ಲಿ ಪ್ಯಾಕ್ ಮಾಡಿ ಅದನ್ನು ಎಫ್​ಎಸ್​ಎಲ್​ಗೆ ಕಳುಹಿಸೊದಕ್ಕೆ ಎಸ್​ಐಟಿ ಸಿದ್ಧವಾಗಿದೆ.

ಕೇವಲ ಆರ್​ಟಿ ನಗರದ ಪಿಜಿ ಮಾತ್ರವಲ್ಲ ಯುವತಿಯ ಜೊತೆ ಸಾಹುಕಾರ ಲೈಂಗಿಕ ಕ್ರೀಯೆ ನಡೆಸಿದ್ದಾರೆ ಎಂದು ಯುವತಿ ಹೇಳಿದ್ದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿಯೂ ಸಹ ಎಸ್ ಐ ಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ರು. ಇಲ್ಲಿ ಯುವತಿಗೆ ಉದ್ಯೋಗದ ಭರವಸೆ ನೀಡಿ 5 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು ಎಂದು ಯುವತಿ ಆರೊಪಿಸಿದ್ದಾಳೆ. ಈ ನಿಟ್ಟಿನಲ್ಲಿ ಯುವತಿಯನ್ನು ಖುದ್ದಾಗಿ ಕರೆದು ಯುವತಿಯಿಂದ ಅಪಾರ್ಟ್ಮೆಂಟ್ ನಲ್ಲಿ ಸ್ಥಳದಲ್ಲಿ ಸಾಕ್ಷಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.

ಇಲ್ಲಿ ಟೆಕ್ನಿಕಲ್, ಡಿಜಿಟಲ್, ಬಯೊಲಾಜಿಕಲ್, ಹಾಗೂ ಲೈವ್ ಎವಿಡೆನ್ಸ್ ಅನ್ನು ಪರೀಕ್ಷಿಸುತ್ತಿದ್ದಾರೆ. ಈಗಾಗಲೇ ಪಿಜಿಯಲ್ಲಿ ಲೈವ್ ಎವಿಡೆನ್ಸ್ ಹಾಗೂ ಟೆಕ್ನಿಕಲ್ ಎವಿಡೆನ್ಸ್ ಅನ್ನು ಸಹ ಪಡೆದ ಎಸ್​ಐಟಿ ಎಲ್ಲವನ್ನೂ ಎಫ್​ಎಸ್​ಎಲ್​ಗೆ ರವಾನಿಸುತ್ತದೆ. ಇನ್ನು ಯುವತಿಯ ಕೇಂದ್ರಿಕೃತವಾಗಿ ಇಲ್ಲಿ ತನಿಖೆ ಆಗುತ್ತಿದೆ. ಆರೋಪಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಸಹ ಆರೋಪಿಗಳ ಪರವಾಗಿದ್ದಾರೆ. ಹೀಗಿದ್ದರೇ ಹೆಣ್ಣು ಮಕ್ಕಳ ಪಾಡೇನು(?) ಕೂಡಲೇ ಸರ್ಕಾರ ಮತ್ತು ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಬೇಕು ಎಂದು ಯುವತಿ ಪರ ವಕೀಲ ಕೆ ಎನ್ ಜಗಧೀಶ್ ಆಗ್ರಹಿಸಿದರು.

ಸದ್ಯ ಯುವತಿಯಿಂದ ಎಸ್​ಐಟಿ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಹೇಳಿಕೆಯನ್ನು ಪಡೆದುಕೊಂಡಿದೆ. ನಿನ್ನೆ ವೈದ್ಯಕೀಯ ಪರೀಕ್ಷೆಗೂ ಒಳ ಪಡಿಸಿದೆ. ಇಂದು ಸ್ಥಳ ಮಹಜರ್ ಅನ್ನು ಸಹ ನಡೆಸಿದೆ. ಇದೀಗ ರಮೇಶ್ ಜಾರಕಿಹೊಳಿಗೆ ನಾಳೆ ವಿಚಾರಣೆಗೆ ಹಾಜರಾಗಲು ಎಸ್​ಐಟಿ ನೊಟೀಸ್ ನೀಡಿದೆ. ಸದ್ಯ ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ನಾಳೆ ವಿಚಾರಣೆಗೆ ಹಾಜರಾಗ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

Next Story

RELATED STORIES