Top

ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ

ಮನೆಗೆ ನುಗ್ಗಿದವರು ಮನ ಬಂದತೆ ಕೊಚ್ಚಿದ್ದರು

ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ
X

ಆತ ಆ ಏರಿಯಾದ ಯುವಕರಿಗೆಲ್ಲಾ ಅಚ್ಚು ಮೆಚ್ಚಿನ ಗೆಳೆಯ. ಮಾಡೊಕೆ ಕೆಲಸ ಇಲ್ಲ ಅಂದ್ರು, ಹುಡುಗರ ಜೊತೆ ಸೇರಿ ಓಡಾಡ್ಕೊಂಡು ಎಣ್ಣೆ ಪಾರ್ಟಿ ಮಾಡ್ಕೊಂಡು ಆರಾಮಾಗಿದ್ದ. ಆದರೆ, ಇತ್ತಿಚಿಗೆ ಅವೆಲ್ಲ ಬಿಟ್ಟು ಸೈಲೆಂಟ್ ಆಗಲು ನಿರ್ಧರಿಸಿದ್ದ. ಹೀಗಂತ ಎಲ್ಲಾ ಬಿಟ್ಟವನು ಇಂದು ಬೆಳಿಗ್ಗೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಅದು ದುಷ್ಕರ್ಮಿಗಳ ಸ್ಕೆಚ್​ಗೆ ಕೊಲೆಯಾಗಿದ್ದಾನೆ.

ನಗರದಲ್ಲಿ ಭೀಕರವಾಗಿ ಹತ್ಯೆಯಾಗಿದೆ. ಮುಖ ಮೂತಿ ನೋಡದೆ ಮಚ್ಚೇಟು ನೀಡಿ ಎಸ್ಕೇಪ್ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ದಡಿಯಾ ಮಂಜ ಎಂಬಾತನೆ ಕೊಲೆಯಾದ ವ್ಯಕ್ತಿ. ಇಟ್ಟಮಡುವಿನ ಮುಖ್ಯರಸ್ತೆಯ ದೊಡ್ಡ ಬೇಕರಿಯ ಏರಿಯಾ ಬಳಿ ವಾಸವಿದ್ದ. ಕಳೆದ ಏಳೆಂಟು ವರ್ಷದಿಂದ ಅದೇ ಏರಿಯಾದಲ್ಲಿದ್ದುಕೊಂಡು ಚಿರಪರಿಚಿತನಾಗಿದ್ದ ಆತ ಇಂದು ಬೆಳ್ಳಂಬೆಳಿಗ್ಗೆ ಕೊಲೆಯಾಗಿ ಹೊಗಿದ್ದಾನೆ. ಅದು ಹೇಗೆ ಅನ್ನೊದು ಸದ್ಯ ಇಡಿ ಏರಿಯಾಗಿ ಶುರುವಾಗಿರೋ ಅನುಮಾನ. ಮಾಡೊಕೆ ಕೆಲಸ ಇಲ್ಲದ ದಡಿಯಾ ಮಂಜ, ಏರಿಯಾದಲ್ಲಿ ಓಡಾಡಿಕೊಂಡಿದ್ದ.

ಏರಿಯಾದ ಹುಡುಗರ ಜೊತೆ ಇರುತಿದ್ದ ಈತ ಯಾವಾಗಲು ಎಣ್ಣೆ ಪಾರ್ಟಿ ಮಾಡಿಕೊಂಡು, ಸುತ್ತಾಡಿಕೊಂಡಿದ್ದ. ಆದರೆ ಇತ್ತೀಚಿಗೆ ಎಲ್ಲವನ್ನು ಬಿಟ್ಟವನು. ತಾನಾಯ್ತು ತನ್ನ ಪಾಡಾಯ್ತು ಅಂತ ಇರೋಕೆ ನಿರ್ಧರಿಸಿದ್ದ. ಅದರಂತೆ, ನೆನ್ನೆ ಕೂಗಳತೆ ದೂರದಲ್ಲೇ ಇದ್ದ ಆತನ ಅಣ್ಣನ ಮನೆಯಲ್ಲಿ ಊಟ ಮಾಡಿಕೊಂಡು ತಾನಿದ್ದ ಇದೇ ರೂಂಗೆ ಬಂದಿದ್ದ ಬಳಿಕ ಮಲಗಿದವನ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅದೊಂದು ದುಷ್ಕರ್ಮಿಗಳ ಗ್ಯಾಂಗ್ ಅಟ್ಯಾಕ್ ಮಾಡಿದೆ. ಅಸಲಿಗೆ ರಾತ್ರಿ ಡೊರ್ ಲಾಕ್ ಮಾಡಿಕೊಂಡು ಮಲಗಿದ್ದ ಮಂಜನ ರೂಂ ಬಳಿ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಬಾಗಿಲ ಬೀಗ ಮುರಿದು ಎಂಟ್ರಿ ಕೊಟ್ಟಿದ್ದಾರೆ ಬಳಿಕ ಮಲಗಿದ್ದ ಮಂಜನ ಮೇಲೆ ಚೂಪಾದ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತನ ತಲೆ ಹಾಗೂ ಹೊಟ್ಟೆಯ ಬಾಗದಲ್ಲಿ ತೀವ್ರವಾದ ಗಾಯಗಳಾಗಿದ್ದು, ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

ಇನ್ನು ಮೃತ ದಡಿಯಾ ಮಂಜ ಈ ಹಿಂದೆ ಯಾವುದೆ ಅಪರಾಧ ಪ್ರಕರಣ ಹೊಂದಿಲ್ಲದಿದ್ದರೂ, ಆತನ ಸಹೊದರನ ಮೇಲೆ ಕೆಲ ಗಲಾಟೆಗಳಿದ್ದವು ಎನ್ನಲಾಗಿದೆ. ಮೇಲ್ನೋಟಕ್ಕೆ ಹತ್ಯೆಯ ನಿಖರ ಕಾರಣ ತಿಳಿಯದಿದ್ರು, ಪರಿಚಯಸ್ಥರೇ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಕೆ ಅಚ್ಚುಕಟ್ಟು ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

Next Story

RELATED STORIES