Top

ರೋಲ್ಡ್ ಗೋಲ್ಡ್ ನ ಒರಿಜಿನಲ್ ಅಂತ ಹೆಂಡತಿಗೆ ನಂಬಿಸಿದ್ದ ಗಂಡ

ಕಟ್ಟಿಕೊಂಡವನು ಸಲೀಸಾಗಿ ಹೆಂಡತಿಯನ್ನೇ ಯಾಮಾರಿಸಿದ್ದ..!

ರೋಲ್ಡ್ ಗೋಲ್ಡ್ ನ ಒರಿಜಿನಲ್ ಅಂತ ಹೆಂಡತಿಗೆ ನಂಬಿಸಿದ್ದ ಗಂಡ
X

ಬೆಂಗಳೂರು: ಆತನಿಗೆ ಲಾಕ್​ಡೌನ್ ಆದ ಬಳಿಕ ಕೈಯಲ್ಲಿ ಕೆಲಸ ಇರಲಿಲ್ಲ. ಬದಲಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದ. ಇತ್ತ ದಿನ ಬೆಳಗಾದ್ರೆ ಸಾಲಗಾರರ ಕಾಟಕ್ಕೆ ಬೇಸತ್ತು ಸರಗಳ್ಳನಾದ. ಆದ್ರೆ ಮಾಡಿದ ಮೊದಲ ಪ್ರಯತ್ನದಲ್ಲೇ ಸರ ಏನೋ ಕದ್ದ ಆದರೆ ಖದ್ದಿದ್ದು ಗೋಲ್ಡ್ ಸರ ಅಲ್ಲ ಬದಲಾಗಿ ರೋಲ್ಡ್ ಗೋಲ್ಡ್.

ಇವರುಗಳ ಹೆಸರು ಪ್ರಶಾಂತ್ ಅಂಡ್ ಜಯಕುಮಾರ್. ಬಿಟಿಎಂ ನಿವಾಸಿಯಾದ ಪ್ರಶಾಂತ್ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಜೀವನ ಮಾಡುತ್ತಿದ್ದ. ಆದರೆ, ಲಾಕ್​ಡೌನ್ ಬಳಿಕ ಯಾವ್​ ಕೆಲಸ ಇಲ್ಲದಿದ್ದಾಗ ಸಿಕ್ಕ ಸಿಕ್ಕವರ ಬಳಿ ಕೈ ಸಾಲ ಮಾಡಿಕೊಂಡಿದ್ದ. ಇತ್ತ ಸಾಲ ಕೊಟ್ಟವರು ಯಾವಾಗ ಮನೆ ಬಳಿ ಬರೋಕೆ ಶುರು ಮಾಡಿದ್ರೆ ಅವರ ಕಾಟ ತಾಳಲಾರದೆ ತನ್ಮ ಸ್ನೇಹಿತ ಜಯಕುಮಾರ್ ಜೊತೆ ಸೇರಿ ಸರಗಳ್ಳತನ ಮಾಡಲು ಫ್ಲಾನ್ ಮಾಡಿದ. ಅದರಂತೆ ಬಿಟಿಎಂ ಲೇ ಔಟ್ ನಲ್ಲಿ ಸುನಿತಾ ಎಂಬಾಕೆಯ ಮೈಮೇಲಿದ್ದ ಸರ ದೋಚಿ ಎಸ್ಕೇಪ್ ಆಗಿದ್ದ. ಆದರೆ, ಮಾರಾಟ ಮಾಡಲು ಹೋದಾಗ ಚೆಕ್ ಮಾಡಿದ ಮಾರ್ಮಾಡಿ ಇದು ರೋಲ್ಡ್ ಗೋಲ್ಡ್ ಅಂದಿದ್ದಾನೆ.

ಇತ್ತ ಯಾವಾಗ ಮಾರ್ವಾಡಿ ರೋಲ್ಡ್ ಗೋಲ್ಡ್ ಅಂತ ಹೇಳಿದ್ನೋ ಆಗ್ಲೆ ಪ್ರಶಾಂತ್ ಜೊತೆ ಮಾತನಾಡುತ್ತಲೇ ಪೊಲೀಸರಿಗೆ ವಿಷ್ಯ ತಿಳಿಸಿದ್ದ. ಇತ್ತ ಪೊಲೀಸರು ಸ್ಪಾಟ್ ಬರೋ ಅಷ್ಟರಲ್ಲಿ ಚೈನ್ ಸಮೇತ ಪ್ರಶಾಂತ್ ಹಾಗೂ ಜಯಕುಮಾರ್ ಎಸ್ಕೇಪ್ ಆಗಿದರು. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಮೈಕೋಲೇ ಔಟ್ ಪೊಲೀಸರು ಇಬ್ಬರು ಬಂಧನ ಸಹ ಮಾಡಿದರು. ವಿಚಿತ್ರ ಅಂದ್ರೆ ಸರಕಳೆದುಕೊಂಡಾಕೆ ಸ್ಟೇಷನ್ ಗೆ ಬಂದಾಗ ಇದು ರೋಲ್ಡ್ ಗೋಲ್ಡ್ ಅಂದಿದ್ದೇ ಆಕೆಯೇ ಒಂದು ಕ್ಷಣ ಗಾಬರಿಯಾಗಿದ್ದಾಳೆ. ಯಾಕಂದ್ರೆ ಎರಡು ವರ್ಷಗಳ ಹಿಂದೆ ತೀರಿಕೊಂಡ ಆಕೆಯ ಗಂಡ ನನ್ನ ಗಿಫ್ಟ್ ಅಂತ ಚೈನನ್ನು ಕೊಟ್ಟಿದ್ದು, ನನ್ನ ಗಂಡ ನನಗೆ ಮೋಸ ಮಾಡಿದ ಅಂತ ಪೊಲೀಸರ ಮುಂದೆ ಅಳಲನ್ನು ತೋಡಿಕೊಂಡಿದ್ದಾಳೆ.

ಒಟ್ಟಾರೆಯಾಗಿ ಮಾಡಿದ ಸಾಲ ತೀರಿಸೋಕೆ ಅಂತ ಸರಗಳ್ಳತನ ಮಾಡಲು ಹೋದ ಸ್ನೇಹಿತರು ಈಗ ಜೈಲು ಪಾಲಾಗಿದ್ದಾರೆ. ಇತ್ತ ಗಂಡನ ಗಿಫ್ಟ್ ಅಂತ ಖುಷಿಯಲ್ಲಿದ್ದ ಸುನಿತಾಗೆ ಅದು ರೋಲ್ಡ್ ಗೋಲ್ಡ್ ಅಂತ ಗೊತ್ತಾಗಿದ್ದೇ ಆಕಾಶವೇ ಕಳಚಿ ಬಿದ್ದಂತಾಗಿದೆ. ಈ ಪ್ರಕರಣ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES