Top

ರಮೇಶ್​ ಜಾರಕಿಹೊಳಿ ಸಿಡಿ ಷಡ್ಯಂತ್ರ; ಎಸ್​ಐಟಿ ತನಿಖೆಗೆ ಕೊಟ್ಟಿದ್ದೇವೆ - ಬಸವರಾಜ ಬೊಮ್ಮಾಯಿ

ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತೆ, ಎಲ್ಲಾ ಆಯಾಮ ತನಿಖೆಯಲ್ಲಿ ಗೊತ್ತಾಗುತ್ತದೆ

ರಮೇಶ್​ ಜಾರಕಿಹೊಳಿ ಸಿಡಿ ಷಡ್ಯಂತ್ರ; ಎಸ್​ಐಟಿ ತನಿಖೆಗೆ ಕೊಟ್ಟಿದ್ದೇವೆ - ಬಸವರಾಜ ಬೊಮ್ಮಾಯಿ
X

ಬೆಂಗಳೂರು: ರಮೇಶ್ ಜಾರಕಿಹೊಳಿಯವರು ಸಿಡಿ ಹಿಂದೆ ಷಡ್ಯಂತ್ರ ಇದೆ ಎಂದು ಪತ್ರ ಬರೆದಿದರು. ಹೀಗಾಗಿ ಎಸ್​ಐಟಿ ತನಿಗೆಗೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿಂದು ಮಾತನಾಡಿದ ಅವರು, ಇಷ್ಟು ದಿನದಲ್ಲೆ ತನಿಖೆ ಮುಗಿಸಿ ಎಂದು ಸಮಯ ನಿಗದಿ ಮಾಡಲು ಆಗೊಲ್ಲ. ಪೊಲೀಸರಿಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದೇವೆ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ಕೊಡಿ ಎಂದು ಹೇಳಿದ್ದೇವೆ ಎಂದರು.

ಇನ್ನು ಎಸ್​ಐಟಿಯವರು ಸಂಪೂರ್ಣ ತನಿಖೆ ನಡೆಸ್ತಾರೆ. ಕಬ್ಬನ್​ಪಾರ್ಕ್​ನಲ್ಲಿ ದೂರು ನೀಡಿದ್ದು, ವಾಪಸ್ ಪಡೆದಿದ್ದು ಎಲ್ಲವನ್ನೂ ಈ ತಂಡ ನೋಡುತ್ತೆ. ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯುತ್ತೆ, ತನಿಖೆಯಲ್ಲಿ ಏನು ಬೆಳವಣಿಗೆ ನೋಡಿ ಅವಶ್ಯಕತೆ ಎನಿಸಿದ್ರೆ ಎಫ್​ಐಆರ್​ ದಾಖಲಾಗುತ್ತೆ ಎಂದು ಹೇಳಿದ್ದಾರೆ.

ಇದು ನಕಲಿ ಸಿಡಿ ಆದ ಮೇಲೆ ತನಿಖೆ ಏಕೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಕಲಿ ಸಿಡಿ ಮಾಡಿದವರು ಯಾರು, ಅದರ ಹಿನ್ನೆಲೆ ಯಾರು, ಎಲ್ಲೆಲ್ಲಿ ಆಗಿದೆ ಎಲ್ಲಾ ತನಿಖೆ ಆಗಬೇಕಲ್ಲ ಎಂದಿದ್ದಾರೆ.

ಶರ್ಟ್, ಪ್ಯಾಂಟ್ ಬಿಚ್ಚೋಕೆ ಕಾಂಗ್ರೆಸ್​ನವರು ಕಾರಣಾನಾ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತೆ, ಎಲ್ಲಾ ಆಯಾಮ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

Next Story

RELATED STORIES