Top

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​​ಐಟಿ ತಂಡದಲ್ಲಿದ್ದಾರೆ ದಕ್ಷ ಅಧಿಕಾರಿಗಳು

ಎಸ್​ಐಟಿ ಶಂಕಿತರನ್ನ ಕರೆಸಿ ವಿಚಾರಣೆ ನಡೆಸಬಹುದೇ ಹೊರತು ಯಾರನ್ನ ಬಂಧಿಸುವ ಪವರ್ ಸದ್ಯಕ್ಕೆ ಇರುವುದಿಲ್ಲ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​​ಐಟಿ ತಂಡದಲ್ಲಿದ್ದಾರೆ ದಕ್ಷ ಅಧಿಕಾರಿಗಳು
X

ಬೆಂಗಳೂರು: ಸಿಡಿ ಷಡ್ಯಂತ್ರ ಬಯಲಿಗೆಳೆಯಲು ವೇದಿಕೆ ಸಿದ್ಧವಾಗಿದೆ. ಸಾಕಷ್ಟು ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ ಎಸ್​ಐಟಿ ಕಾರ್ಯ ನಿರ್ವಹಿಸಲು ಆದೇಶ ನೀಡಿದ್ದು ಗೊತ್ತೆ ಇದೆ. ಅದರ ಓಲವಾಗಿ ಸಮರ್ಥ ತಂಡ ಈಗ ಸಿದ್ಧವಾಗಿದೆ.

ಅಂದುಕೊಂಡಂತೆ ಎಸ್​ಐಟಿ ಸಿದ್ಧವಾಗಿದೆ. ಸಿಡಿ ಹೊರ ಬಂದ ಬಳಿಕ ಇದು ಫೇಕ್ ಸಿಡಿ, ತನ್ನ ವಿರುದ್ಧ ಷಡ್ಯಂತರ ನಡೆದಿದೆ ಎಂದು ಅವಲತ್ತುಕೊಂಡಿದ್ದ ರಮೇಶ್ ಜಾರಕಿಹೋಳಿಯ ಮನವಿಯಂತೆ ಈಗ ಪೊಲೀಸ್ ಇಲಾಖೆ ಸಮರ್ಥವಾದಂತಹ ತಂಡವನ್ನ ಕಟ್ಟಿದೆ. ಹೆಚ್ಚುವರಿ ಪೊಲೀಸ್ ಆತುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಿದ್ಧಗೊಂಡ ಈ ತಂಡದಲ್ಲಿ ಈ ಹಿಂದೆ ಹಲವು ಕ್ಲಿಷ್ಟ ಪ್ರಕರಣವನ್ನ ಬಯಲಿಗೆಳೆದ ಅಧಿಕಾರಿಗಳಿದ್ದಾರೆ.

ಇಂದು ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಆಯುಕ್ತರ ಬಳಿ ಚರ್ಚೆ ನಡೆಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿಯವರು ಎಸ್​ಐಟಿ ಮೆಂಬರ್ಸ್​ಗಳನ್ನ ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಡಿಸಿಪಿ ಕ್ರೈಂ 1 ರವಿಕುಮಾರ್, ಎಸಿಪಿ ಧರ್ಮೇಂದ್ರ, ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಮಾರುತಿ ಮತ್ತು ಸೈಬರ್ ಸೆಲ್ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಅವರು ಈ ತಂಡದಲ್ಲಿರಲಿದ್ದಾರೆ. ಈ ಹಿಂದೆ ಅನ್ ಅಫೀಷಿಯಲ್ ಆಗಿ ಸಿಡಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ ತಂಡವೇ ಈ ಎಸ್​ಐಟಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಇನ್ನು ಅನುಚೇತ್ ಈ ಹಿಂದೆ ಗೌರಿ ಕೇಸನ್ನ ಸಮರ್ಥವಾಗಿ ನಿಭಾಯಿಸಿ ಆರೋಪಿಗಳನ್ನ ಜೈಲಿಗಟ್ಟಿದ್ದರು. ಹೀಗಾಗಿ ಎಸ್​ಐಟಿ ತಂಡದಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಅದೇ ರೀತಿ ಸ್ಯಾಂಡಲ್​ವುಡ್ ಡ್ರಗ್ ಕೇಸ್ ಆಗಿರಬಹುದು ಡಿಜೆ ಹಳ್ಳಿ ಪ್ರಕರಣಗಳನ್ನ ಕೂಡ ತನಿಖೆ ನಡೆಸಿರುವ ಅಧಿಕಾರಿಗಳು ಈ ತಂಡದಲ್ಲಿದ್ದಾರೆ.

ಹೀಗಾಗಿ ಆದಷ್ಟು ಬೇಗ ಎಸ್​ಐಟಿ, ಸಿಡಿ ಹಿಂದಿನ ವ್ಯಕ್ತಿಗಳ ಬಗ್ಗೆ ವರದಿ ನೀಡಲಿದ್ದಾರೆ. ಇನ್ನು ಈ ಕೇಸಿನಲ್ಲಿ ಸಿಡಿ ಪ್ರಮುಖ ಪಾತ್ರವಹಿಸಿದ್ದು ಅದನ್ನ ಎಫ್​ಎಸ್​ಎಲ್​ಗೆ ಕಳಸಿ ವರದಿ ತರಿಸಿಕೊಂಡು ಎವಿಡೆನ್ಸ್ ಮಾಡಲಿದ್ದಾರೆ. ಹಂತಹಂತವಾಗಿ ಇನ್ವೆಷ್ಟಿಗೇಷನ್ ನಡೆಯಲಿದ್ದು ತನಿಖಾ ಭಾಗವಾಗಿ ನೋಟಿಸ್​ ನೀಡಿ ಮಾಹಿತಿ ಕಲೆ ಹಾಕಿಲಿದ್ದಾರೆ. ಇಂದಿನಿಂದಲೇ ಶುರುವಾಗಿರುವ ಎಸ್​ಐಟಿ ತನಿಖೆ ಕೆಲವೊಂದು ಕಾನೂನಾತ್ಮಕ ತೊಡಕುಗಳ ಬಗ್ಗೆ ಲೀಗಲ್ ಸೆಲ್​ನಿಂದ ಮಾಹಿತಿ ಪಡೆದಿದೆ.

ಇನ್ನು ಎಸ್​ಐಟಿ ಶಂಕಿತರನ್ನ ಕರೆಸಿ ವಿಚಾರಣೆ ನಡೆಸಬಹುದೇ ಹೊರತು ಯಾರನ್ನ ಬಂಧಿಸುವ ಪವರ್ ಸದ್ಯಕ್ಕೆ ಇರುವುದಿಲ್ಲ. ಸರ್ಕಾರ ವರದಿಯನ್ನಷ್ಟೇ ಕೇಳಿರುವ ಹಿನ್ನೆಲೆ ಸಿಡಿ ಹಿಂದಿನ ಕೈಗಳ ಬಗ್ಗೆ ಮಾತ್ರ ಮಾಹಿತಿ ನೀಡಬಹುದು.

ಎಸ್​​ಐಟಿ ಫಾರ್ಮ್ ಆದ ಬಳಿಕೆ ಸಿಡಿ ಹಿಂದಿನ ಅನಾಮಿಕ ವ್ಯಕ್ತಿಗಳಿಗೆ ಈಗಾಗಲೇ ನಡುಕ ಶುರುವಾಗಿದ್ದು ಯಾವಾಗ ವಿಚಾರಣೆ ಕರೆಸುತ್ತಾರೋ ಎಂದು ದಿಗಿಲು ಬಿದ್ದಿರುವುದಂತೂ ಸತ್ಯ. ಇನ್ನು ವರದಿ ಆಧರಿಸಿ ಮುಂದಿನ ದಿನಗಳಲ್ಲಿ ದೂರು ದಾಖಲಾದರೆ ಸಿಡಿ ಹಿಂದಿನ ವ್ಯಕ್ತಿಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತಂಡ ತನ್ನ ಕಾರ್ಯಾಚರಣೆ ಚುರುಕುಗೊಳಿಸಿದ್ದು, ತಂಡ ರಚನೆಯಾದ ಎರಡೇ ಗಂಟೆಯಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Next Story

RELATED STORIES