Top

ಪ್ರಶಾಂತ್​ ಸಂಬರಗಿ ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ - ಮಾಜಿ ಸಚಿವ ಜಮೀರ್​ ಅಹ್ಮದ್​

ಮಾನನಷ್ಟ ಮೊಕದ್ದಮ್ಮೆ ನಾನು ಹಾಕಿದ್ದೇನೆ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ.

ಪ್ರಶಾಂತ್​ ಸಂಬರಗಿ ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ - ಮಾಜಿ ಸಚಿವ ಜಮೀರ್​ ಅಹ್ಮದ್​
X

ಬೆಂಗಳೂರು: ಕೊರೊನಾದಿಂದಾಗಿ ನಾನು ಏನೂ ಮಾತನಾಡಲಿಲ್ಲ, ನೀವು ಮಾಧ್ಯಮಗಳಲ್ಲಿ ಏನ್ ತೋರಿಸ್ತೀರ. ಕೋವಿಡ್​ನಿಂದ ಸತ್ತವರ ಬಗ್ಗೆ ನಾನು ಎಷ್ಟು ಕೆಲಸ ಮಾಡುತ್ತಿದ್ದೇನೆ ಅದನ್ನ ನೀವೇನಾದ್ರೂ ತೋರಿಸಿದ್ದೀರ ಎಂದು ಮಾಜಿ ಸಚಿವ ಜಮೀರ್​ ಅಹಮದ್​ ಖಾನ್ ಅವರು ಹೇಳಿದ್ದಾರೆ.

ಡ್ರಂಗ್ಸ್​ ದಂಧೆಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮಾಧ್ಯಮಗಳಿಗೆ ಏನು ಮಾತನಾಡಲ್ಲ. ಮಾನನಷ್ಟ ಮೊಕದ್ದಮ್ಮೆ ನಾನು ಹಾಕಿದ್ದೇನೆ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ನಮ್ಮ ರಾಜ್ಯದ ಪೊಲೀಸರು ನಂಬರ್ ಒನ್ ಎಂದಿದ್ದಾರೆ.

ಇನ್ನು ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ. ಸಿದ್ದರಾಮಯ್ಯ ಅವರು ಏನು ಹೇಳಿದರು. ಕಳ್ಳ ನನ್ನ ಜೊತೆ ನಿಂತು ಫೋಟೋತೆಗೆಸಿಕೊಂಡ್ರೆ ಕಳ್ಳ ಅನ್ನೋಕೆ ಆಗುತ್ತಾ ಅಂದಿದ್ದಾರೆ ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ತಾರೆ ಅದಕ್ಕೆ ನಾನು ಇನ್ವಾಲ್ ಆಗಿದ್ದೇನಾ(?) ಎಂದು ಅವರು ಹೇಳಿದರು.

ಸದ್ಯ ಫಾಸಿಲ್​ಗೆ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಸಿಲ್​ಗೂ ನನಗೂ ಯಾವುದೇ ಸಂಬಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ. ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರ್ತಾರೆ. ಅವನೂ ಬಂದಿರಬಹುದು. ರಾಜ್ಯದಿಂದ ಸಾವಿರಾರು ಜನ ಬರ್ತಾರೆ. ತಪ್ಪು ಮಾಡಿದ್ದರೆ ಯಾರೇ ಆಗಲಿ ಶಿಕ್ಷೆ ಕೊಡಲಿ. ಪೊಲೀಸರು ನಮ್ಮ ರಾಜ್ಯದಲ್ಲಿ ಸ್ಟ್ರಾಂಗ್​ ಆಗಿದ್ದಾರೆ. ಅವರು ತನಿಖೆ ಮಾಡುತ್ತಾರೆ ಮಾಡಲಿ ಎಂದು ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES