ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಎಂಎಲ್ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ
ವಿಧಾನಸಭೆಯಿಂದ ಆಯ್ಕೆಯಾಗಿದ್ದರೆ ಸಮಸ್ಯೆ ಇರಲಿಲ್ಲ, ಈಗ ನಾಮನಿರ್ದೇಶಿತ ಸದಸ್ಯನಾಗಿರೋದು ಸಮಸ್ಯೆ

X
Admin 228 Jan 2021 9:57 AM GMT
ಬೆಂಗಳೂರು: ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತೇನೆ, ಮುಂದೆ ವಕೀಲರ ಬಳಿ ಚರ್ಚಿಸುವೆ ನಂತರ ಏನು ಮಾಡಬೇಕೆಂದು ಯೋಚಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್. ವಿಶ್ವನಾಥ್ ವಿರುದ್ಧ ಸುಪ್ರೀಂ ತೀರ್ಪು ಹಿನ್ನೆಲೆ ವಿಧಾನಸೌಧದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಿಂದ ಆಯ್ಕೆಯಾಗಿದ್ದರೆ ಸಮಸ್ಯೆ ಇರಲಿಲ್ಲ, ಈಗ ನಾಮನಿರ್ದೇಶಿತ ಸದಸ್ಯನಾಗಿರೋದು ಸಮಸ್ಯೆ ಎಂದರು.
ಕೋರ್ ಕಮಿಟಿಸಭೆಯಲ್ಲಿ ಮೊದಲು ಚರ್ಚೆಯಾಗಿತ್ತು. ವಿಧಾನಸಭೆಯಿಂದ ಆಯ್ಕೆ ಬಗ್ಗೆ ಚರ್ಚೆಯಾಗಿತ್ತು. ಕೊನೆ ಘಳಿಗೆಯಲ್ಲಿ ಅದು ಬದಲಾಯಿತು. ದೆಹಲಿ ಮಟ್ಟದಲ್ಲಿ ಬದಲಾಯಿತು ಎಂದರು. ಕೊನೆ ಕ್ಷಣದಲ್ಲಿ ಏನಾಯ್ತು ಗೊತ್ತಿಲ್ಲ. ಇಲ್ಲಿ ಯಾರೂ ಏಕಾಂಗಿಗಳಲ್ಲ, ವಕೀಲರ ಜೊತೆ ಚರ್ಚಿಸಿ ಮುಂದುವರಿಯುತ್ತೇನೆ ಎಂದು ಎಂಎಲ್ಸಿ ಹೆಚ್ ವಿಶ್ವನಾಥ್ ಅವರು ಮಾತನಾಡಿದ್ದಾರೆ.
Next Story