Top

ಧಮ್ಕಿ ಬರ್ತಿದೆ ಎಂದು ವಿಡಿಯೋ ಮಾಡಿದ ಕಲ್ಲಹಳ್ಳಿ

ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಬಳಿ ಹಾಜರಾಗಿ ತಾವು ದೂರು ವಾಪಾಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ.

ಧಮ್ಕಿ ಬರ್ತಿದೆ ಎಂದು ವಿಡಿಯೋ ಮಾಡಿದ ಕಲ್ಲಹಳ್ಳಿ
X

ಬೆಂಗಳೂರು: ಸಿಡಿ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಬೇಸತ್ತು ದೂರು ವಾಪಾಸ್ ಪಡೆಯಲು ಹರಸಾಹಸ ಮಾಡುತ್ತಿದ್ದರೆ ಅತ್ತ ಪೊಲೀಸರು ಪ್ರಕರಣವನ್ನ ಯಾವ ರೀತಿ ಹ್ಯಾಂಡಲ್ ಮಾಡ್ಬೇಕು ಎಂದು ಲೀಗಲ್ ಸೆಲ್ ಮೊರೆ ಹೋಗಿದ್ದಾರೆ ಅಷ್ಟಕ್ಕೂ ಎಫ್​ಐಆರ್​ ಆಗದ ಈ ದೂರು ಗಂಭೀರತೆ ಪಡೆದುಕೊಳ್ಳಲು ಕಾರಣವಿದೆ.

ದೂರು ವಾಪಾಸ್ ಪಡೀತಿನಿ ಎಂದು ಮೊದಲು ತನ್ನ ವಕೀಲರನ್ನ ಕಳಿಸಿದ್ದ ದಿನೇಶ್ ಕಲ್ಲಳ್ಳಿ ನೆನ್ನೆ ಮತ್ತೆ ಪೊಲೀಸ್ ಠಾಣೆಗೆ ಹಾಜರಾಗಿದರು. ಖುದ್ದು ಹಾಜಾರಾಗಿ ಸ್ಪಷ್ಟನೆ ನೀಡಿ ಎಂದಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಬಳಿ ಹಾಜರಾಗಿ ತಾವು ದೂರು ವಾಪಾಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ.ಆದರೆ, ಸ್ಪಷ್ಟ ಕಾರಣ ನೀಡಿ ಎಂದು ವಾಪಾಸ್ ಕಳಿಸಿ ಮತ್ತೊಮ್ಮೆ ಬನ್ನಿ ಎಂದಿರುವ ಪೊಲೀಸರು ಲೀಗಲ್ ಸೆಲ್ ಮೊರೆ ಹೋಗಿದ್ದಾರೆ.

ಮಾನವೀಯತೆ ದೃಷ್ಟಿಯಿಂದ ಪೊಲೀಸ್ ಠಾಣೆಗೆ ದಾಖಲಾಗುವ ಕೆಲ ಕೇಸುಗಳನ್ನ ಪೊಲೀಸರು ಕಾಂಪ್ರೂ ಮಾಡುವ ಮುಖಾಂತರ ಕ್ಲೋಸ್ ಮಾಡ್ತಾರೆ. ಆದರೆ, ಇದು ಹಾಗಲ್ಲ. ವಿಡಿಯೋ ನೈಜತೆಯಿಂದ ಕೂಡಿದ್ಯೋ ಅಥವ ನಕಲಿಯೋ ಅದನ್ನ ಬದಿಗಿಟ್ಟರೆ ಒಂದಿಡಿ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆ, ಯುವತಿಯ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ಪ್ರಕರಣ ಹಾಗೂ ಮಾಜಿ ಸಚಿವರನ್ನ ಚುನಾಯಿಸಿದ ಆ ಕ್ಷೇತ್ರದ ಜನರ ಮನಸ್ಸಿಗೆ ನೋವುಂಟು ಮಾಡಿದ ಕೇಸ್ ಆದ್ದರಿಂದ ಪೊಲೀಸರು ಕೂಡ ದಿನೇಶ್ ಆರೋಪ ಮಾಡಿ ಕೊಟ್ಟ ಬರೀ ದೂರನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.

ಹೀಗಾಗಿ ಇದು ಮೇಲ್ನೋಟಕ್ಕೆ ಉದ್ದೇಶಿತ ಕೃತ್ಯದಂತೆ ಕಂಡು ಬಂದ ಹಿನ್ನಲೆ ದಿನೇಶ್ ಕಲ್ಲಳ್ಳಿಯಿಂದ ಪೊಲೀಸರು ಸರಿಯಾದಂತಹ ಸ್ಪಷ್ಟನೆ ಬೇಕಿದೆ. ಆ ಸ್ಪಷ್ಟನೆ ಠಾಣಾಧಿಕಾರಿಗಳಿಗೆ ಮನವರಿಕೆ ಆಗಬೇಕಿದೆ. ಹೀಗಾಗಿ ಮುಂದೆ ಏನ್ ಮಾಡ್ಬೇಕು ಎಂದು ಪೊಲೀಸರು ಕೂಡ ಲೀಗಲ್ ಸೆಲ್ ಮೊರೆ ಹೋಗಿದ್ದಾರೆ. ಇನ್ನು ದಿನೇಶ್ ದೂರು ನೀಡಿದ ಬಳಿಕ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದೆ. ಅದರ ಬಗ್ಗೆ ವಿಡಿಯೋ ಮಾಡಿರುವ ಕಲ್ಲಳ್ಳಿ ಈ ರೀತಿ ದೂರು ಕೊಟ್ಟ ದಿನದಿಂದಲೂ ಧಮ್ಕಿಗಳು ಬರ್ತಿದೆ ಎಂದು ಹೇಳಿದ್ದಾರೆ.

ಇನ್ನು ಸಹಜವಾಗಿಯೇ ರಮೇಶ್ ಜಾರಕಿಹೋಳಿಯ ಅಭಿಮಾನಿಗಳು ಈ ರೀತಿಯ ಕರೆಗಳು ಮಾಡುತ್ತಿರಬಹುದು. ದಿನೇಶ್ ದೂರ ವಾಪಾಸ್ ಪಡೆಯಲು ಇದು ಒಂದು ಕಾರಣ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಸದ್ಯ ಯಾವುದೇ ತಾರ್ಕಿಕ ಅಂತ್ಯ ಕಾಣದೆ ನಿಧಾನಗತಿಯಲ್ಲಿ ಸಾಗಿದೆ.

Next Story

RELATED STORIES