Top

ಇಂದು ನಗರದ ಅತಿ ದೊಡ್ಡ ಡ್ರಗ್ ಡೀಲರ್​ನ ಅರೆಸ್ಟ್​​ ಮಾಡುವ ಸಾಧ್ಯತೆ ಇದೆ

ಇಂದು ನಗರದ ಅತಿ ದೊಡ್ಡ ಡ್ರಗ್ ಡೀಲರ್​ನ ಅರೆಸ್ಟ್​​ ಮಾಡುವ ಸಾಧ್ಯತೆ ಇದೆ
X

ಬೆಂಗಳೂರು: ಸ್ಯಾಂಡಲ್‌ವುಡ್​​​ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದ ವಿಚಾರದಲ್ಲಿ ಇಂದು ಸಂಜೆಯೊಳಗೆ ಸಿಸಿಬಿ ಅಧಿಕಾರಿಗಳಿಂದ ನಗರದ ಅತಿ ದೊಡ್ಡ ಡ್ರಗ್ ಡೀಲರ್​ನ ಅರೆಸ್ಟ್​​ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆತ ಇಡೀ ಸಿಲಿಕಾನ್​ ಸಿಟಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಹತ್ತು ವರ್ಷಗಳ ಹಿಂದೆ ಈತ ಒಮ್ಮೆ ಅರೆಸ್ಟ್​ ಆಗಿದ್ದ ಎಂದು ಹೇಳಲಾಗಿದೆ. ಅದುವಲ್ಲದೇ, ಸ್ಯಾಂಡಲ್‌ವುಡ್ ನಟ-ನಟಿಯರಿಗೆ, ಉದ್ಯಮಿಗಳಿಗೆ ಹಾಗೂ ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್​ ಸೇವನೆಗೆ ಪ್ರೇರೇಪಿಸುತ್ತಿದ್ದ ಎಂದು ತಿಳಿದುಬಂದಿದೆ.

ಮಾಜಿ ಭೂಗತ ಪಾತಕಿಯೊಬ್ಬನ ಆಪ್ತನಾಗಿರುವ ಈ ಕುಖ್ಯಾತ ಡ್ರಗ್ ಪೆಡ್ಲರ್​ಗಾಗಿ ಕಳೆದ 20 ದಿನಗಳಿಂದ ಸಿಸಿಬಿ ಪೊಲೀಸ್​ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.

Next Story

RELATED STORIES