Top

ಸ್ನೇಹಿತನ ಮನೆಯಲ್ಲಿಯೇ ನಡೀತು ಹೈಟೆಕ್ ಕಳ್ಳತನ

ಡಾಗ್ ಸ್ಕ್ವಾಡ್ ಗೂ ಸುಳಿವು ಸಿಗದ ರೀತಿಯಲ್ಲಿ ನಡೀತು ಥೆಫ್ಟ್ ..!

ಸ್ನೇಹಿತನ ಮನೆಯಲ್ಲಿಯೇ ನಡೀತು ಹೈಟೆಕ್ ಕಳ್ಳತನ
X

ಅದೊಂದು ಚಿತ್ರ ಹಲವು ಕ್ರಿಮಿನಲ್ ಗಳಿಗೆ ಮಾದರಿ ಎನಿಸಿಕೊಂಡಿದೆ. ಅಂತಹ ಚಿತ್ರದ ಬೆನ್ನು ಬಿದ್ದಿದ್ದ ಆರೋಪಿ ಅದ್ಯಾವ ಪರಿ ಪ್ಲಾನಿಂಗ್ ಮಾಡಿದ್ದಾನೆಂದರೆ, ಪೊಲೀಸರೇ ಕೆಲವೊಮ್ಮೆ ಕನ್ಪ್ಯೂಸ್ ಆಗಿದರು. ಮೊದಲ ಬಾಲಿಗೆ ಸಿಕ್ಸರ್ ಹೊಡೆದವನು ಕೊನೆಗೂ ಖಾಕಿ ಬಲೆಗೆ ಬಿದಿದ್ದಾನೆ.

ಯಾವ ಕ್ಲೂವನ್ನೂ ಬಿಟ್ಟಿರಲಿಲ್ಲ ಆತ. ಪೊಲೀಸ್ ಎನ್ಕೌರಿ ಬಗ್ಗೆ ತಿಳಿದುಕೊಳ್ಳಲು ದೃಶ್ಯಂ ಮೂವಿಯನ್ನ ಹತ್ತಾರು ಬಾರಿ ನೋಡಿ ಪಕ್ಕಾ ಪ್ಲಾನಿಂಗ್ ಮಾಡಿದ್ದ. ಸುಳಿವೇ ಇಲ್ಲದ ಪುಲಿಕೇಶಿನಗರ ಮನೆಗಳ್ಳತನ ಕೇಸಿನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ಲಾನಿಂಗ್ ಹಾಕಿದ್ದು ಪ್ರಮುಖ ಆರೋಪಿ ನಾಝಿಂ ಶರೀಫ್ ಆದರೆ ಕಳ್ಳತನ ಮಾಡಿದ್ದು ಮೊಹಮ್ಮದ್ ಶಫಿಯುಲ್ಲ.

ಪ್ರಮುಖ ಆರೋಪಿ ನಾಝಿಂ ಶೇಕ್ ಎಂಬಾತನೆ ಈ ಕಳ್ಳತನದ ಸೂತ್ರಧಾರ. ಅಂದಹಾಗೆ ಇವರ್ಯಾರೂ ಪ್ರೊಫೆಷನಲ್ ಅಫೆಂಡರ್​ಗಳಲ್ಲ ಈ ಹಿಂದೆ ಬಂದಿದ್ದ ದೃಶ್ಯಂ ಚಿತ್ರದ ಸ್ಪೂರ್ತಿ ಪಡೆದು ಇಬ್ಬರೂ ಕುಳಿತು ಪ್ಲಾನ್ ಮಾಡಿದ್ದಾರೆ. ಮೊದಲಿಗೆ ಟಾರ್ಗೆಟ್ ಮಾಡಿರೋ ಮನೆಯ ನಕಲಿ ಕೀ ಮಾಡಿಸಿ ನಾಝಿಂ, ಮೊಹಮ್ಮದ್ ಶಫಿಯುಲ್ಲಾಗೆ ಸೇರಿದ್ದ. ದೂರುದಾರನ ಸಹೋದರ ಆಸ್ಪತ್ರೆ ಸೇರಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಒಳ್ಳೆ ಟೈಂ ಎಂದುಕೊಂಡಿದ್ದ ಖದೀಮರು. ಮನೆಕಳ್ಳತನಕ್ಕೆ ಸ್ಕೆಚ್ ಹಾಕಿದರು. ಟಾರ್ಗೆಟ್ ಮಾಡಿರುವ ಮನೆಗೆ ಬರುವ ಮುಂಚೆ ಕೈಗೆ ಗ್ಲೌಸ್, ಜಾಕೆಟ್, ಮುಖ ಕವರ್ ಆಗುವಂತೆ ಬಟ್ಟೆ ಕಟ್ಟಿಕೊಂಡು ತಯಾರಾಗಿದ್ದ. ಲೊಕೇಷನ್ ತಲುಪೋಕೆ ಮುಂಚೆ ಸುಮಾರು ನಾಲ್ಕು ಆಟೋಗಳನ್ನ ಶಫಿಯುಲ್ಲ ಚೇಂಜ್ ಮಾಡಿದ್ದ. ಪ್ರತಿಯೊಂದು ಆಟೋ ಹತ್ತಿದಾಗಲೂ ಆಟೋದಲ್ಲಿಯೇ ಬಟ್ಟೆಗಳನ್ನ ಚೇಂಜ್ ಮಾಡುತ್ತಿದ್ದ. ಅಷ್ಟೆಅಲ್ಲ ಶೂಗಳನ್ನೂ ಕೂಡ ಬದಲಿಸಿ ಸುಳಿವೇ ಸಿಗದ ರೀತಿಯಲ್ಲಿ ನೋಡಿಕೊಂಡಿದ್ದ. ಕಳ್ಳತನ ಮಾಡುವ ಮನೆಗೆ ಬರುವ ಮುಂಚೆ ಹತ್ತಾರು ಕಡೆ ಆಟೋದಲ್ಲಿ ಸುತ್ತಾಡಿ ನಂತರ ಮನೆ ಹತ್ತಿರ ಬರುತ್ತಿದ್ದಂತೆ ಸುಮಾರು ಒಂದು ಕಿಲೋಮೀಟರದ ದೂರದಲ್ಲಿ ಆಟೋವನನ್ ನಿಲ್ಲಿಸಿ ಕಳ್ಳತನ ಮಾಡಬೇಕಾಗಿರುವ ಮನೆ ಬಳಿ ಬಂದಿದ್ದ. ನಂತರ ನಾಝೀಂ ಶರೀಫ್ ಕೊಟ್ಟ ನಕಲಿ ಕೀಯಿಂದ ಡೋರ್ ಓಪನ್ ಮಾಡಿ ಒಳಗೆ ಹೋಗಿ ಕಬೋರ್ಡ್ ನಲ್ಲಿರುವ 50 ಲಕ್ಷ ಮೌಲ್ಯದ ಚಿನ್ನಾಭರಣವನ್ನ ದೋಚಿ ತನ್ನ ಬ್ಯಾಗ್ ನಲ್ಲಿ ತಂದಿದ್ದ ಖಾರದ ಪುಡಿಯನ್ನ ಇಡೀಮನೆಗೆ ಸುರಿದು ಹೊರ ಬಂದಿದ್ದ. ನಂತರ ಮನೆಯ ಬಾಗಿಲು ಮೀಟಿ ಕಳ್ಳತನವಾಗಿದೆ ಎಂದು ತೋರಿಸಲು ಮೊದಲೇ ತಂದಿದ್ದ ರಾಡ್ ನಿಂದ ಬಾಗಿಲನ್ನು ಒಡೆದು ಅಲ್ಲಿದ್ದ ದೂರುದಾರನದೇ ಆದ ಹೋಂಡಾ ಆಕ್ಟೀವಾದಲ್ಲಿ ಪರಾರಿಯಾಗಿದ್ದ.

ಇಷ್ಟೆಲ್ಲ ಪ್ಲಾನಿಂಗ್ ಮಾಡಿದ್ದವನನ್ನ ಬಂಧಿಸಲು ಪೊಲೀಸರಿಗೆ ಸಾಕುಬೇಕಾಯ್ತು. ಒಂದು ಫಿಂಗರ್ ಪ್ರಿಂಟ್ ಇಲ್ಲ. ಡಾಗ್ ಸ್ಕ್ವಾಡ್​ಗೆ ವಾಸನೇಯೇ ಸಿಗದ ರೀತಿಯಲ್ಲಿ ಖಾರದಪುಡಿ ಸುರಿದಿದ್ದ. ಇಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದ ಖಾಕಿ ಪಡೆ ಸಿಸಿಟಿವಿ ಮೊರೆ ಹೋಗಿದೆ. ಒಟ್ಟು 270 ಸಿಸಿಟಿವಿ ಫೂಟೇಜ್​ಗಳನ್ನ ಕಲೆಹಾಕಿದ ಪೊಲೀಸರು ಪ್ರತಿಯೊಬ್ಬ ಆಟೋವನ್ನು ಪತ್ತೆ ಹಚ್ಚಿದಾಗಲೂ ಅವರು ಎಂಡ್ ಪ್ಲೇಸ್​ನ ಲೊಕೇಷನ್ ತೊರಿಸುತಿದರು. ಫೈನಲಿ ಆರೋಪಿಯ ಗಾತ್ರ ನಡೆಯುವ ಶೈಲಿಗಳನ್ನ ಗಮನಿಸಿ ಕೆಲವೊಂದು ಟೆಕ್ನಿಕಲಿ ಎವಿಡೆನ್ಸ್​ನಿಂದ ಆರೋಪಿಯನ್ನ ಬಂಧಿಸಲಾಗಿದೆ.

ಇನ್ನು ಪ್ರಮುಖ ಆರೋಪಿ ನಾಜೀಂ ಶರೀಫ್ ದೂರುದಾನ ಸ್ನೇಹಿತನೇ ಆಗಿದ್ದು ಅನುಮಾನ ಬರಬಾರದೆಂದು ಸ್ನೇಹಿತನ ಜೊತೆಯಲ್ಲಿಯೇ ಇದ್ದ ಎಂದು ತಿಳಿದು ಬಂದಿದೆ.

ಇನ್ನು ಕಳ್ಳತನವಾದ ಬಳಿಕ ಯಾವುದೇ ಕಾರಣಕ್ಕೂ ಕರೆ ಮಾಡದಂತೆ ಮೊಹಮ್ಮದ್ ಶಫಿಯುಲ್ಲಾಗೆ ,ಪ್ರಮುಖ ಆರೋಪಿ ನಾಝಿಂ ಶೇಕ್ ಸೂಚನೆ ನೀಡಿದ್ದನಂತೆ. ಸದ್ಯ ಆರೋಪಿಗಳನ್ನ ಪುಲಿಕೇಶಿನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Next Story

RELATED STORIES