Top

ಮೂರು ತಿಂಗಳ ಹಿಂದೆ ಬಂದು 12 ಕೆ.ಜಿ ಚಿನ್ನ ದೋಚಿದ್ದ ಆರೋಪಿ ಅಂದರ್​

ಕರೆದು ಕೆಲಸ ಕೊಟ್ಟಿದ್ದಕ್ಕೆ ಮಾಲೀಕನಿಗೆ ಉಂಡೆನಾಮ ಹಾಕಿದ್ದ

ಮೂರು ತಿಂಗಳ ಹಿಂದೆ ಬಂದು 12  ಕೆ.ಜಿ ಚಿನ್ನ ದೋಚಿದ್ದ ಆರೋಪಿ ಅಂದರ್​
X

ಬೆಂಗಳೂರು: ಶ್ರೀಮಂತನಾಗಬೇಕು, ಐಷಾರಾಮಿ ಜೀವನ ಮಾಡ್ಬೇಕು ಎಂದು ಆತ ಅಂತಹ ಕೃತ್ಯ ಎಸಗಿದ್ದ. ಒನ್ ಮ್ಯಾನ್ ಅಫೆಂಡರ್ ಆಗಿರೋ ಈ ಖದೀಮನ ಬಂಧಿಸಿದಾಗ ನಿಜಕ್ಕೂ ಪೊಲೀಸರಿಗೆ ಶಾಕ್ ಕಾದಿತ್ತು.

ಈ ಆರೋಪಿಗೆ ಕೇವಲ 19 ವರ್ಷ ಹೆಸರು ಸ್ವಪ್ನೀಲ್ ಘಾಡ್​ಗೆ. ಪೊಲೀಸರು ಬಂಧಿಸದೇ ಹೋಗಿದ್ದರೆ ಅಷ್ಟೂ ದಿನ ಭಿಕಾರಿಯಾಗಿ ಓಡಾಡುತ್ತಿದ್ದವನು ಕೋಟ್ಯಾಧಿಪತಿಯಾಗುತ್ತಿದ್ದ. ಕೆಲಸ ಅರಸಿ ನಗರಕ್ಕೆ ಬಂದಿದ್ದ ಸ್ವಪ್ನೀಲ್ ಯಾರೂ ಮಾಡದಷ್ಟು ದೋಚಿ ಬಿಟ್ಟಿದ್ದ. ಹೌದು ಸ್ವಪ್ನೀಲ್ ದೋಚಿದ್ದು ಬರೋಬ್ಬರಿ 12 ಕೆ.ಜಿ.

ಸೆಕೆಂಡ್ ಪಿಯೂಸಿ ಓದಿರುವ ಈ ಸ್ವಪ್ನಿಲ್ ಈ ಹಿಂದೆ ಹೈದರಾಬಾದ್​ನಲ್ಲಿ ಚಿನ್ನ ಕರಗಿಸಿ ಗಟ್ಟಿ ಮಾಡೋ ಕೆಲಸ ಮಾಡುತ್ತಿದ್ದ. ಕೊರೊನಾ ಕಾರಣದಿಂದ ಕಳೆದ ವರ್ಷ ನವೆಂಬರ್​ನಲ್ಲಿ ಹೈದರಾಬಾದ್​ನಿಂದ ತನ್ನ ಸ್ವಂತ ಊರು ಸೊಲ್ಲಾಪುರಕ್ಕೆ ಹೋಗಿದ್ದ. ಮನೆಯಲ್ಲಿ ಬಡತನ ಕಿತ್ತು ತಿನ್ನುತಿತ್ತು.

ಕೆಲಸಕ್ಕಾಗಿ ಅಲೆಯುತ್ತಿದ್ದವನಿಗೆ 3 ತಿಂಗಳ ಹಿಂದೆ ಆತನ ಸ್ನೇಹಿತ ದಿಗಂಬರ ಎಂಬಾತ ತನ್ನ ಪರಿಚಯದ ಅಂಗಡಿಯಲ್ಲಿ ಚಿನ್ನದ ಗಟ್ಟಿ ಮಾಡೋ ಕೆಲಸ ಕೊಡಿಸಿದ್ದ. ಚಿಕ್ಕ ಪೇಟೆ ಬಳಿಬಿರುವ ಸಿದ್ದೇಶ್ವರ ಹರಿಭಾ ಎಂಬಾತನ ಸಂಸ್ಕಾರ್ ರಿಫೈನರಿ ಎಂಟರ್ ಪ್ರೈಸಸ್​ನಲ್ಲಿ ಕೆಲಸಕ್ಕೆ ಸೇರಿದ್ದ ಮೊದಲು ಒಂದಷ್ಟು ದಿನ ನೆಟ್ಟಗೆ ಕೆಲಸ ಮಾಡಿದವನು ನಂತರ ಅತಿಯಾಸೆಗೆ ಬಿದ್ದ. ಪ್ರತಿ ದಿನ ಚಿನ್ನದ ಗಟ್ಟಿ ಮಾಡುತ್ತಿದ್ದವನಿಗೆ ಅವೆಲ್ಲಾವನ್ನೂ ಕದ್ದು ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದ. ಅಲ್ಲಿದ್ದ ಕೆಲಸಗಾರ ಜೊತೆ ಸೇರಿ ಮಾಲೀಕನ ಅನತಿಯ ಮೆರೆಗೆ ಈತನೆ 12 ಕೆ.ಜಿ ಗ್ರಾಂ ಚಿನ್ನವನ್ನ ಕರಗಿಸಿ ಮಾಲೀಕನ ಸಂಬಂಧಿಕರ ಮನೆಯಲ್ಲಿ ಇಟ್ಟು ಬಂದಿದ್ದ. ಮಾರನೆ ದಿನ ಯಾರ ಸಮ್ಮತಿಯೂ ಇಲ್ಲದೆ ಮಾಲೀಕನ ಸಂಬಂಧಿಕರ ಮನೆಗೆ ಹೋಗಿ ಯಾಜಮಾನರು ಬಂದಿದ್ದಾರೆ ಗಟ್ಟಿಗಳನ್ನ ಕೊಡೋದಕ್ಕೆ ಹೇಳಿದ್ದಾರೆ ಎಂದು ಹೇಳಿ ಚಿನ್ನದ ಗಟ್ಟಿಗಳನ್ನ ಚಿನ್ನದಂಗಡಿಗೆ ತಂದು ಅಲ್ಲಿಂದ ಎಸ್ಕೇಪ್ ಆಗಿದ್ದ.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡ ರಚಿಸಿ ಕೇವಲ 10 ಗಂಟೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಈ ಪ್ರಕರಣ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮುಂದಿನ ದಿನಗಳಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ.

Next Story

RELATED STORIES