ಉಸಿರಾಡಲು ಸಮಯ ಕೊಡಿ ನಾನು ಒಂದಷ್ಟು ವಿಚಾರ ಹೇಳಿಕೊಳ್ಳುತ್ತೇನೆ - ನಟಿ ರಾಗಿಣಿ ದ್ವಿವೇದಿ
ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ನೊಂದಿದ್ದೇವೆ

X
Admin 230 Jan 2021 9:56 AM GMT
ಬೆಂಗಳೂರು: ಕೋರ್ಟ್ ಪ್ರಕ್ರಿಯೆ ಇತ್ತು ಬಂದೆ. ತನಿಖೆಗೆ ಸಹಕರಿಸುತ್ತೇನೆ ಎಂದು ನಟಿ ರಾಗಿಣಿ ದ್ವಿವೇದಿ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ ವಿಚಾರಣೆಗೆ ಹಾಜರಾಗಿದ್ದೇನೆ. ಉಸಿರಾಡಲು ಸಮಯ ಕೊಡಿ. ನಾನು ಒಂದಷ್ಟು ವಿಚಾರ ಹೇಳಿಕೊಳ್ಳುತ್ತೇನೆ ಎಂದರು.
ಇನ್ನು ನನಗೆ ವ್ಯವಸ್ಥೆ ಮೇಲೆನಂಬಿಕೆ ಇದೆ. ಬೇರೆಯವರ ಬಗ್ಗೆ ನಾನು ಈಗ ಮಾತಾಡಲ್ಲ, ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ನೊಂದಿದ್ದೇವೆ. ನಾನು ತಪ್ಪು ಮಾಡಿದ್ದೇನೆ ಎಂದು ವಿವರಣೆ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಸದ್ಯ ನಾನು ಕನ್ನಡ ಚಿತ್ರೋದ್ಯಮಕ್ಕೆ ಬಂದು 15 ವರ್ಷ ಆಗಿದೆ. ನಾನು ಏನೂ ಅನ್ನೋದು ಗೊತ್ತು. ಈ ಪ್ರಕರಣದಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ನಾನು ಬಲಿ ಪಶು ಆಗಿದ್ದೇನೆ ಎಂದು ನಟಿ ರಾಗಿಣಿ ದ್ವಿವೇದಿ ಎಂದಿದ್ದಾರೆ.
Next Story