Top

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ: ಮುಖ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಇಂದು ಮುಜಾಮಿಲ್ ಪಾಷಾ, ಕೆ ಜಿ ಹಳ್ಳಿ ಕಾರ್ಪೋರೇಟರ್ ಪತಿ ಖಲಿಂ ಪಾಷಾನನ್ನ ಪರಪ್ಪನ ಅಗ್ರಹಾರಕ್ಕೆ ಜೈಲಿಗೆ ಶಿಫ್ಟ್.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ: ಮುಖ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​
X

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದಿದೆ. ಒಂದಿಬ್ಬರು ಪ್ರಮುಖರು ಜೈಲು ಸೇರಿದರೆ, ಶಂಕಿತ ಉಗ್ರನ ವಿಚಾರಣೆ ಮುಂದುವರೆದಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಇಂದು ಮುಜಾಮಿಲ್ ಪಾಷಾ ಮತ್ತು ಕೆ ಜಿ ಹಳ್ಳಿ ಕಾರ್ಪೋರೇಟರ್ ಪತಿ ಖಲಿಂ ಪಾಷಾನನ್ನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ವಿಚಾರಣೆ ಅಂತ್ಯಗೊಂಡ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರ ಮೊಬೈಲ್​ಗಳನ್ನು ಈಗಾಗಲೇ ಎಫ್​ಎಸ್​ಎಲ್​ಗೆ ಕಳುಹಿಸಿ ಕೊಡಲಾಗಿದೆ ಅದರಲ್ಲಿ ಡಾಟಾ ರಿಟ್ರೀವ್ ಆದ ಬಳಿಕ ಮತ್ತೆ ಸಿಸಿಬಿ ಕಷ್ಟಡಿಗೆ ಪಡೆದು ವಿಚಾರಣೆ ನಡೆಸಲಿದೆ.

ತಾನೇನು ತಪ್ಪೆ ಮಾಡಿಲ್ಲ ದೂರು ನೀಡಲಷ್ಟೆ ಬಂದಿರೋದು .ಹೀಗಂತ ಬಂಧಿತರಾಗಿರುವ ಎಸ್ ಡಿ ಪಿ ಐ ನ ಮುಜಾಮಿಲ್ ಸಿಸಿಬಿ ಅಧಿಕಾರಿಗಳ ಮುಂದೆ ಅವಲತ್ತುಕೊಂಡಿದ್ದಾನೆ. ಆದರೆ, ಅಂದಿನ ದಿನ ಗಲಭೆಕೋರರಿಗೆ ಪ್ರಚೋದನೆ ನೀಡಿದ ಪ್ರಮುಖರಲ್ಲಿ ಮುಜಾಮಿಲ್ ಕೂಡ ಒಬ್ಬ ಎಂಬುದಕ್ಕೆ ಸಿಸಿಬಿ ಸಾಕಷ್ಟು ಸಾಕ್ಷಿಗಳನ್ನ ಕಲೆ ಹಾಕಿದೆ.

ಇನ್ನು ಇದೇ ಸಂಧರ್ಭದಲ್ಲಿ ಶಂಕಿತ ಉಗ್ರ ಸಮಿಯುದ್ದಿನ್ ವಿಚಾರಣೆ ಕೂಡ ತ್ವರಿತಗತಿಯಲ್ಲಿ ಮುಂದುವರೆದಿದೆ .ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಅದರಲ್ಲಿ ನಗರದ ಹಿರಿಯ ಪೊಲೀಸರ ನಂಬರ್ ಗಳು ಕೂಡ ದೊರೆತಿದ್ದು, ಎನ್ ಜಿ ಒ ನೆಪದಲ್ಲಿ ಪೊಲೀಸ್ ಆಯುಕ್ತರ ಕಚೇರಿಗೂ ಭೇಟಿ ನೀಡಿದ್ದ. ಇನ್ನು ಇಂದು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಹಿನ್ನಲೆ ಡಿಸಿ ಶಿವಮೂರ್ತಿಯವರು ಡಿ.ಜೆ ಹಳ್ಳಿ-ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನ್ಯಾಷನಲ್ ಹ್ಯೂಮನ್ ರೈಟ್ಸ್ ಮಾರ್ಗಸೂಚಿ ಹಿನ್ನಲೆ ತನಿಖೆ ನಡೆಸುತ್ತಿರುವ ಡಿಸಿ.ಮುಂದಿನ ಸೆಪ್ಟೆಂಬರ್ 2 ರಂದು ತನಿಖೆ ಪ್ರಾರಂಭಿಸೋದಾಗಿ ಹೇಳಿದ್ದಾರೆ

ಸದ್ಯ ಮತ್ತಷ್ಟು ಆರೋಪಿಗಳು ಗಲಭೆ ಪ್ರಕರಣದಲ್ಲಿ ಬಂಧಿತರಾಗಲಿದ್ದು , ಪ್ರಮುಖ ಆರೋಪಿಗಳ ಹೇಳಿಕೆಯ ಮೆರೆಗೆ ಮುಂದಿನ ಕಾರ್ಯಾಚರಣೆ ನಡೆಲಿದೆ.

Next Story

RELATED STORIES