Top

ಕೋಲಾರದಲ್ಲಿ ಅಡಗಿದ್ದರು ಡಿಜೆ ಹಳ್ಳಿ ಗಲಭೆಕೋರರು

ಮತ್ತೆ ಮತ್ತೆ ಆರೋಪಿಗಳು ಬಂಧನವಾಗುತಿದ್ದು ಕೋಲಾರದಲ್ಲಿ ಅಡಗಿದ್ದ 8 ಜನರನ್ನ ಪೊಲೀಸರು ಖೆಡ್ಡಾಗೆ ಕೆಡವಿಕೊಂಡಿದ್ದಾರೆ.

ಕೋಲಾರದಲ್ಲಿ ಅಡಗಿದ್ದರು ಡಿಜೆ ಹಳ್ಳಿ ಗಲಭೆಕೋರರು
X

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣ ತನಿಖೆ ಮುಂದುವರೆದಿದೆ. ಹಾಗೇ ತನಿಖೆಗೆ ಲೀಗಲ್ ಆಗಿ ಅಡ್ಡಿಗಳೂ ಹೆಚ್ಚಾಗಿದೆ. ಎಲ್ಲಾ ಪ್ರಯತ್ನಗಳ ಬಳಿಕ ಹ್ಯೂಮಾನಿಟಿಯ ಮೊರೆ ಹೋಗಿರುವ ಆರೋಪಿಯ ಕುಟುಂಬಸ್ಥರು ಕಾನೂನು ಮುಖಾಂತರ ಸಮಾಜ ರಕ್ಷಕರಿಗೆ ಕಂಟಕವಾಗಿದ್ದಾರೆ.

ಒಬ್ಬ ತಪ್ಪಿತಸ್ಥನನ್ನ ಬಂಧಿಸಬೇಕಾದರೆ ಅದಕ್ಕೆ ಸಾಕಷ್ಟು ಸಾಕ್ಷಿಗಳು ಬೇಕು. ಹಾಗೇ ಅಂತಹ ಸಾಕ್ಷಿಗಳನ್ನ ಆಧರಿಸಿಯೇ ನೂರಾರು ಆರೋಪಿಗಳನ್ನ ಬಂಧಿಸಿದ್ದಾರೆ ಸದ್ಯ ಕಾನೂನು ಮುಖಾಂತರ ಬಂಧಿಸೋ ಪ್ರಕ್ರಿಯೆಯನ್ನ ನಡೆಸುತ್ತಿರುವ ಪೊಲೀಸರಿಗೆ ಈಗ ಕಾನೂನೇ ಅಡ್ಡಿಯಾಗುತ್ತಿದೆ ಆರೋಪಿಗಳ ಕುಟುಂಬಸ್ಥರು ಶತಾಯಗತಾಯ ತಮ್ಮವರನ್ನ ಬಿಡಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದಾರೆ.

ಗಲಭೆ ಪ್ರಕರಣದಲ್ಲಿ ತಮ್ಮವರನ್ನು ಬಂಧಿತರಾಗಿದ್ದಾರೆ ಎಂದು ಗೊತ್ತಿದ್ದರೂ ತಮ್ಮಣ್ಣ ಕಾಣ್ತಿಲ್ಲ, ತಮ್ಮ ಪತಿ ಕಾಣ್ತಿಲ್ಲ ಎಂದು ಪೊಲೀಸರ ವಿರುದ್ಧವೇ ಹೇಬಿಯಸ್ ಕಾರ್ಪಸ್ ಕೇಸು ದಾಖಲಿಸಿದ್ದಾರೆ ಮತ್ತೊಂದು ಕಡೆ ತಮ್ಮವರಿಗೆ ಪೊಲೀಸರು ಅಸಾಲ್ಟ್ ಮಾಡುತ್ತ್ತಿದ್ದಾರೆ. ಕುಟುಂಬಸ್ಥರಿಗೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮೊರೆ ಹೋಗಿದ್ದಾರೆ. ಎಪ್​ಐಆರ್​ ಸಂಖ್ಯೆ ಎಷ್ಟು ಏರುತಿದ್ಯೋ ಅಷ್ಟು ದೂರುಗಳು ಹ್ಯೂಮನ್ ರೈಟ್ಸ್ ಕಮೀಷನ್​ನಲ್ಲಿ ದಾಖಲಾಗಿದೆ. ಹೀಗಾಗಿ ಇನ್ಸ್​ಪೆಕ್ಟರ್ ದರ್ಜೆಯ ಅಧಿಕಾರಿಗಳನ್ನ ನ್ಯಾಯಾಲಯ ಮತ್ತು ಹ್ಯೂಮನ್ ರೈಟ್ಸ್ ಮವರಿಗೆ ಉತ್ತರ ನೀಡಲೆಂದೇ ನಿಯೋಜಿಸಲಾಗಿದೆ.

ಇನ್ನು ಇದೇ ಸಂಧರ್ಭದಲ್ಲಿ ಮತ್ತೆ ಮತ್ತೆ ಆರೋಪಿಗಳು ಬಂಧನವಾಗುತಿದ್ದು ಕೋಲಾರದಲ್ಲಿ ಅಡಗಿದ್ದ 8 ಜನರನ್ನ ಪೊಲೀಸರು ಖೆಡ್ಡಾಗೆ ಕೆಡವಿಕೊಂಡಿದ್ದಾರೆ. ಇತ್ತ ಸಂಪತ್ ರಾಜ್ ಆಪ್ತನ ವಿಚಾರಣೆ ನಡೆಯುತ್ತಿದ್ದು ಆತನ ಮೊಬೈಲ್​ನಲ್ಲಿ 500ಕ್ಕೂ ಹೆಚ್ಚು ಯುವತಿಯರ ಫೋಟೋಗಳು ಪತ್ತೆಯಾಗಿದೆ ಅದರಲ್ಲಿ ಬಹುತೇಕ ಅಶ್ಲೀಲ ಫೊಟೋಗಳೆ .ಇನ್ನು ಗಲಭೆ ಸಂಧರ್ಭದಲ್ಲಿ ಫೋಟೋ-ವಿಡಿಯೋಗಳೂ ಕೂಡ ಅರುಣ್​ನ ಮೊಬೈಲ್​ನಲ್ಲಿ ಸಿಕ್ಕಿದೆ .

ಇನ್ನು ಗಲಭೆಗೆ ಸಂಬಂಧಿಸಿದಂತ ಅನೇಕ ಮಾಹಿತಿಗಳು ಸಿಕ್ಕಿದ್ದು ಅದರ ಆಧಾರದ ಮೆರೆಗೆ ಪ್ರಮುಖರ ವಿಚಾರಣೆ ನಡೆಯಲಿದೆ. ಸದ್ಯ ಪ್ರತಿದಿನ ಬಂಧಿತರ ಸಂಖ್ಯೆ ಹೆಚ್ಚಾಗುತಿದ್ದು ವಿಚಾರಣೆ ತೀವ್ರಗತಿಯಲ್ಲಿ ಮುಂದುವರೆದಿದೆ.

Next Story

RELATED STORIES