Top

ಆಟೋದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಕಾರ್ತಿಕ್ ಜೊತೆ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದು, ಒಡಿಸ್ಸಾದಿಂದ ಗಂಜಾವನ್ನು ನಗರಕ್ಕೆ ರೈಲಿನಲ್ಲಿ ತರುತ್ತಿದ್ದರು.

ಆಟೋದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ
X

ಬೆಂಗಳೂರು: ಆಟೋದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಶ್ರೀರಾಮ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 40 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಕಾರ್ತಿಕ್ ಅಲಿಯಾಸ್​ ಕಬಾಲಿ, ವಿಕ್ಕಿ, ಎಂ.ಪ್ರೇಮ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಕಾರ್ತಿಕ್ ಅಲಿಯಾಸ್​ ಕಬಾಲಿ ಮೇಲೆ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿದ್ದವು. ಆತ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಗಾಂಜಾ ಪೆಡ್ಲಿಂಗ್​ನಲ್ಲಿ ತೊಡಗಿಕೊಂಡಿದ್ದ.

ಇನ್ನು ಪ್ರೇಮ್​ ಕುಮಾರ್​ ಎಂಬಾತ ಅಮೆಝಾನ್ ಕಂಪೆನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಈತ ಸಹ ಕಾರ್ತಿಕ್ ಜೊತೆ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದು, ಒಡಿಸ್ಸಾದಿಂದ ಗಂಜಾವನ್ನು ನಗರಕ್ಕೆ ರೈಲಿನಲ್ಲಿ ತರುತ್ತಿದ್ದರು ಎಂದು ತಿಳಿದುಬಂದಿದೆ.

ಶ್ರೀರಾಮ್ ಪುರ, ರಾಜಾಜಿ ನಗರ, ಸುಬ್ರಮಣ್ಯ ನಗರ, ಶೇಷಾದ್ರಿಪುರಂ ಸೇರಿ ನಗರದ ಹಲವೆಡೆ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಭಾಗದಲ್ಲಿ ವಿಧ್ಯಾರ್ಥಿಗಳಿಗೆ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸದ್ಯ ಇವರ ವಿರುದ್ಧ ಶ್ರೀರಾಮ್​ಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES