ಆರೋಪಿಗಳ ಪತ್ತೆ ಸದಾ ಚಾಲೆಂಜಿಂಗ್ ಆಗಿಯೇ ಇರುತ್ತದೆ - ಕಮಲ್ ಪಂತ್
ಸದಾಶಿವನಗರದ ರಮೇಶ್ ಜಾರಕಿಹೊಳಿ ಕೇಸ್ ಮತ್ತು ಯುವತಿಯ ಕಿಡ್ನಾಪ್ ಕೇಸ್ಗಳು ತನಿಖೆಯನ್ನು ಎಸ್ಐಟಿ ತಂಡ ಮಾಡುತ್ತಿದೆ.

ಬೆಂಗಳೂರು: ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದು, ಎಸ್ಐಟಿಗೆ ಬೆಳಗಾವಿ ಕೇಸ್ ಕೂಡ ಟ್ರಾನ್ಸ್ಫರ್ ಆಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಶನಿವಾರ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಕೇಸಲ್ಲಿ ಸವಾಲ್ಗಳು ಇದ್ದೆ ಇರುತ್ತೆ. ತನಿಖೆ ಬಗ್ಗೆ ಪೇಪರ್ ವರ್ಕ್ ನಡೀತಾ ಇರುತ್ತೆ. ಇನ್ವೆಷ್ಟಿಗೇಷನ್ ಸಾಕ್ಷಿಗಳ ಆಧಾರದ ಮೇಲೆ ನಡೆಯುತ್ತೆ. ಕೋರ್ಟ್ನಲ್ಲಿ ನಾವು ಹೇಳಬೇಕಾಗುತ್ತೆ. ಮ್ಯಾಜಿಸ್ಟ್ರೇಟ್ಗೆ ಕನ್ವಿನ್ಸ್ ಮಾಡುವಂತಹ ಸಾಕ್ಷಿಗಳು ಬೇಕು ಎಂದು ಹೇಳಿದರು.
ಸಂತ್ರಸ್ತ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪ್ಲೇಸ್ ಆಫ್ ಇನ್ಸಿಡೆಂಟ್ ಆಧಾರದಲ್ಲಿ ಆರ್ ಟಿನಗರಕ್ಕೆ ಪ್ರಕರಣ ವರ್ಗವಾಗಿತ್ತು.ಆರ್.ಟಿ ನಗರದಿಂದ ಎಸ್ಐಟಿಗೆ ಕೇಸ್ ವರ್ಗಾವಣೆಯಾಗಿದೆ. ಸದಾಶಿವನಗರದ ರಮೇಶ್ ಜಾರಕಿಹೊಳಿ ಕೇಸ್ ಮತ್ತು ಯುವತಿಯ ಕಿಡ್ನಾಪ್ ಕೇಸ್ಗಳು ತನಿಖೆಯನ್ನು ಎಸ್ಐಟಿ ತಂಡ ಮಾಡುತ್ತಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಕಾನೂನಿನ ಪ್ರಕಾರವಾಗಿ ತನಿಖೆಯನ್ನು ಸೌಮೇಂದು ಮುಖರ್ಜಿ ಮಾಡುತ್ತಿದ್ದಾರೆ. ಆರೋಪಿಗಳ ಪತ್ತೆ ಸದಾ ಚಾಲೆಂಜಿಂಗ್ ಆಗಿಯೇ ಇರುತ್ತದೆ. ಕಾನೂನಿನಲ್ಲೇ ನ್ಯಾಯಾಧೀಶರ ಮುಂದೆ ಹೇಳಿಕೆ ಮಾಡಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾತನಾಡಿದ್ದಾರೆ.