Top

ತಂದೆ ಮೇಲಿನ ದ್ವೇಷಕ್ಕೆ ಮಗನ ಕೊಲೆ

ಸುಲಭ್ ಶೌಚಾಲಯದಲ್ಲಿ ವಾಶ್ ರೂಂಗೆ ಹೋದಾಗ ಹತ್ಯೆ ಮಾಡಲಾಗಿದೆ

ತಂದೆ ಮೇಲಿನ ದ್ವೇಷಕ್ಕೆ ಮಗನ ಕೊಲೆ
X

ಬೆಂಗಳೂರು: ನಿನ್ನೆ ಸಂಜೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆಯಾಗಿದ್ದು, ಸುಲಭ್ ಶೌಚಾಲಯದಲ್ಲಿ ವಾಶ್ ರೂಂಗೆ ಹೋದಾಗ ಹತ್ಯೆ ಮಾಡಲಾಗಿದೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರು ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊಲೆಯಾದ ಯುವಕ ಆಕಾಶ್ ಎಂದು ತಿಳಿದುಬಂದಿದೆ. ಮೃತ ಯುವಕನ ತಂದೆ ಮೇಲಿನ ದ್ವೇಷಕ್ಕೆ ಮಗನನ್ನ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಮೃತ ಯುವಕನ ತಂದೆ ವೇಲು, ತನ್ನ ಸ್ನೇಹಿತ ರಾಜವೇಲು ಜೊತೆ ಕೆಲ ದಿನಗಳ ಹಿಂದೆ ವಿಲ್ಸನ್ ಗಾರ್ಡನ್ ಬಳಿ ಇರೋ ಬಾರ್​ಗೆ ಹೋಗಿದರು. ಈ ವೇಳೆ ಮದ್ಯ ಸೇವಿಸಿ ಬರುವಾಗ ಮಾರ್ಗ ಮಧ್ಯೆ ರಾಜವೇಲು ಮೃತಪಟ್ಟಿದರು. ಈ ಕೇಸ್ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಯಡಿಆರ್ (ಅನುಮಾಸ್ಪಾದ ಸಾವು)​ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

ಇನ್ನು ರಾಜು ವೇಲು ನನ್ನ ಮೃತ ಯುವಕನ ತಂದೆ ಕೊಲೆ ವೇಲು ಮಾಡಿದ್ದಾನೆಂದು ರಾಜುವೇಲು ಕಡೆಯವ್ರು ಹುಡುಕಾಟ ನಡೆಸಿದರು. ಈ ವೇಳೆ ವೇಲು ಅವರಿಗೆ ಸಿಕ್ಕಿರಲ್ಲಿಲ್ಲ, ನಿನ್ನೆ ರಾತ್ರಿ ವೇಲು ಪುತ್ರ ಆಕಾಶ್, ರಾಜು ವೇಲು ಕಡೆಯವರಿಗೆ ಸಿಕ್ಕಿದ್ದಾನೆ. ಈ ವೇಳೆ ಆತನನ್ನ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.

Next Story

RELATED STORIES