Top

ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ನೋಟಿಸ್​

ರಷ್ಯಾದಲ್ಲಿ ಅಪ್ಲೋಡ್ ಆಯ್ತಂತೆ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ

ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ನೋಟಿಸ್​
X

ಬೆಂಗಳೂರು: ಸಿಡಿ ಪ್ರಕರಣ ಪೊಲೀಸ್ ಇಲಾಖೆಯಲ್ಲೂ ಸದ್ದು ಮಾಡಿದೆ. ಸಾಕಷ್ಟು ಗೋಜಲು ಗೋಜಲಾಗಿರುವ ಪ್ರಕರಣಕ್ಕೆ ಈಗ ಸಾಕ್ಷಿ ಅಂತ ಸಿಕ್ಕಿರುವುದು ಬರೀ ವಿಡಿಯೋಗಳು ಮಾತ್ರ ಈ ಹಿನ್ನೆಲೆ ಇದನ್ನ ಯಾವ ರೀತಿ ತನಿಖೆಯನ್ನ ನಡೆಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾಗಿ 2ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಇದರ ಸುತ್ತ ಬಾರೀ ಚರ್ಚೆಗಳು ತನಿಖೆಗಳು ಕೈಗೊಳ್ಳಲಾಗಿದೆ. ಈ ವಿಡಿಯೋ ಯಾವಾಗ ಮಾಡಿದ್ದು(?) ರಮೇಶ್ ಜಾರಕಿಹೊಳಿಗೂ ಆ ಹುಡುಗಿಗೂ ಸಂಬಂಧ ಯಾವಾಗ ಶುರುವಾಗ್ಗಿದ್ದು. ದಿನೇಶ್ ಕಲ್ಲಹಳ್ಳಿ ಕಂಪ್ಲೇಂಟ್ ಕೊಡಲು ಕಾರಣವೇನು ಅವರ ಸಂಬಂಧಿಕರು ಯಾರು ಅವರ ಸ್ನೇಹಿತ ಯಾರು ಇದೆಲ್ಲದರ ಸುತ್ತ ತನಿಖೆ ಚುರುಕುಗೊಂಡಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ಸೆಂಟ್ರಲ್ ಅನುಚೇತ್ ಈ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಕಬ್ಬನ್ ಪಾರ್ಕ್ ಪೋಲಿಸ್ ಇನ್ಸ್ಪೆಕ್ಟರ್ ಮಾರುತಿರವರಿಂದ ದಿನೇಶ್ ಕಳ್ಳಹಳ್ಳಿಗೆ ನೋಟಿಸ್ ನೀಡಲಾಗಿದೆ. ತನಿಖೆಗೆ ಬಂದ ಸಂಪೂರ್ಣ ಸಹಕಾರ ನೀಡಬೇಕು. ಸಾಕ್ಷಿ ಯಾರು. ಆ ಹುಡುಗಿ ಯಾರು ಆ ವೀಡಿಯೊ ಕ್ಲಿಪ್ ನಿಮಗೆ ಎಲ್ಲಿಂದ ಸಿಕ್ಕಿತು ಹೀಗೆ ಹಲವಾರು ರೀತಿಯಲ್ಲಿ ತನಿಖೆಗೆ ಸ್ಪಂದಿಸಬೇಕು ಸಾಕ್ಷಿ ಲೋಪವಿರುವ ಕಾರಣ ತನಿಖೆ ಸ್ಪಂದಿಸುವಂತೆ ನೋಟಿಸ್ ನೀಡಲಾಗಿದೆ.

ಮತ್ತೊಂದು ಕಡೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಎಲ್ಲಾ ಮಾರ್ಗಗಳಲ್ಲಿ ತನಿಖೆ ಆರಂಭಗೊಳಿಸಿದ್ದಾರೆ ಹೀಗಾಗಿ ಪೋಲಿಸರು ತಂತ್ರಜ್ಞಾನದ ಮೊರೆ ಹೋಗಿ ತಮ್ಮ ಗುಪ್ತ ಇಲಾಖೆಯ ಸಾಫ್ಟ್ ವೇರ್ ಮೂಲಕ ಪಾರ್ಸಿಂಗ್ ಮಾಡಿ ಪರಿಶೀಲಿಸಿದಾಗ ನಿನ್ನೆ ಮಧ್ಯಾಹ್ನ 2.20 ಸುಮಾರಿಗೆ ಈ ವೀಡಿಯೊ ರಷ್ಯಾದಲ್ಲಿ ಯೂಟ್ಯೂಬ್​ಗೆ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಈ ವಿಡಿಯೋವನ್ನು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇ ಅಪ್ಲೋಡ್ ಮಾಡಿರುವುದು ಫೇಕ್ ಅಕೌಂಟ್​ನಿಂದ ಎಂದು ತಿಳಿದುಬಂದಿದೆ.

ಇನ್ನು ದಿನೇಶ್ ಕಲ್ಲಳ್ಳಿ ವಿರುದ್ಧವೂ ದೂರು ದಾಖಲಾಗಿದ್ದು, ಬ್ಲಾಕ್ ಮೇಲ್ ಗಾಗಿ ವಿಡಿಯೋ ಮಾಡಲಾಗಿದರ ಎಂದು ಕನ್ನಡ ಪರ ಸಂಘಟನೆ ದೂರು ನೀಡಿದೆ.

ಸದ್ಯ ಈ ಪ್ರಕರಣ ಸಂಬಂಧ ಇಲ್ಲಿಯವರೆಗೇ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ .ಇನ್ನು ಪ್ರಕರಣವನ್ನ ಸಿಸಿಬಿಗೆ ವಹಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎನ್ನಲಾಗಿದೆ.

Next Story

RELATED STORIES