Top

ಬ್ಯಾಂಕ್ ಎಟಿಎಂ ಹಲ್ಲೆ ಪ್ರಕರಣ: ಅಪರಾಧಿಗೆ ಶಿಕ್ಷೆ ವಿಧಿಸಿದ ಕೋರ್ಟ್​

  • ನಾಲ್ಕು ವರ್ಷ ಕಾಲ ತಲೆ ಮರೆಸಿಕೊಂಡು ಸಿಕ್ಕಿ ಬಿದ್ದ ಅಪರಾಧಿಗೆ ಕೊನೆಗೂ ಕೋರ್ಟ್ ಶಿಕ್ಷೆ ವಿಧಿಸಿದೆ.
  • ಅಪರಾಧಿ ಮಧುಕರ್ ರೆಡ್ಡಿಗೆ ಜೈಲು ಶಿಕ್ಷೆ, 10 ಸಾವಿರ ದಂಡ
  • ಬೆಂಗಳೂರಿನ CCH 65 ರ ನ್ಯಾ.ರಾಜಶ್ವರರಿಂದ ಆದೇಶ

ಬ್ಯಾಂಕ್ ಎಟಿಎಂ ಹಲ್ಲೆ ಪ್ರಕರಣ: ಅಪರಾಧಿಗೆ ಶಿಕ್ಷೆ ವಿಧಿಸಿದ ಕೋರ್ಟ್​
X

ಬೆಂಗಳೂರು: ಇದು ಇಡಿ ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದ ಘಟನೆ.ಇಡಿ ದೇಶವೇ ಸಿಲಿಕಾನ್​ ಸಿಟಿ ಬೆಂಗಳೂರಿನ ಕಡೆ ತಿರುಗುವಂತೆ ಮಾಡಿದ್ದ ರಕ್ತಸಿಕ್ತಾ ಘಟನೆ. ಮಾರಣಾಂತಿಕ ಹಲ್ಲೆ ಮಾಡಿ ಬರೋಬರಿ ನಾಲ್ಕು ವರ್ಷ ಕಾಲ ತಲೆ ಮರೆಸಿಕೊಂಡು ಸಿಕ್ಕಿ ಬಿದ್ದ ಅಪರಾಧಿಗೆ ಕೊನೆಗೂ ಕೋರ್ಟ್ ಶಿಕ್ಷೆ ವಿಧಿಸಿದೆ.

ಕಾರ್ಪೊರೇಷನ್ ಸರ್ಕಲ್​ನಲ್ಲಿ ಇರುವ ಎಂಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿ ಮಧುಕರ್ ರೆಡ್ಡಿಗೆ 10 ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. 2013ರ ನವೆಂಬರ್ 19ರಂದು ಬೆಳಗ್ಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆ ಆಗಮಿಸುತ್ತಿದ್ದ ಜ್ಯೋತಿ ಉದಯ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗ್ತಾರೆ. ಈ ವೇಳೆ ಒಳಗೆ ಬಂದ ಮಧುಕರ್ ಏರ್ ಗನ್ ತೋರಿಸಿ ಹಣ ಡ್ರಾ ಮಾಡಿಕೊಂಡುವಂತೆ ಬೆದರಿಕೆ ಹಾಕ್ತಾನೆ. ಆದರೆ, ಜ್ಯೋತಿ ಉದಯ್ ಇದನ್ನು ನಿರಾಕರಿಸುತ್ತಾರೆ. ಈ ವೇಳೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಮಧುಕರ್ ಆಕೆಯ ಬಳಿಯಿದ್ದ ಮೊಬೈಲ್, ಎಟಿಎಂ ಕಾರ್ಡ್ ತೆಗೆದುಕೊಂಡು ಪರಾರಿಯಾಗುತ್ತಾನೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶ, ತಮಿಳುನಾಡು ಕೇರಳ ಸೇರಿದಂತೆ ರಾಜ್ಯಾದ್ಯಂತ ಹುಡುಕುವ ಪ್ರಯತ್ನ ಮಾಡ್ತಾರೆ. ಆದರೆ, ಈ ಅಸಾಮಿ ಮಾತ್ರ ದಿನಕ್ಕೆ ಒಂದು ವೇಶ ಧರಿಸಿ ತಪ್ಪಿಸಿಕೊಂಡ ಕೇರಳಕ್ಕೆ ತೆರಳಿ ತಲೆಮರೆಸಿಕೊಳ್ಳುತ್ತಾನೆ. ಆದರೆ, ಆಂಧ್ರಪ್ರದೇಶದ ಮದನಪಲ್ಲಿ ಬಳಿ ಆಕೆ ತಾಯಿ ಆಸ್ಪತ್ರೆಗೆ ಸೇರಿದಾಗ ಕೇರಳದಿಂದ ಆಗಮಿಸಿದ ಮಧುಕರ್, ಹಣದ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾನೆ.

ಈ ವೇಳೆ ಮದನಪಲ್ಲಿಯಲ್ಲಿ ಒಂಟಿ ವೃದ್ದೆಯನ್ನು ಕೊಲೆ ಮಾಡಿ ಪ್ರಕರಣದಲ್ಲಿ ಮದನಪಲ್ಲಿ ಪೊಲೀಸರು ಬಂಧಸುತ್ತಾರೆ. ಈ ವೇಳೆ ಬೆಂಗಳೂರಿನ ಎಟಿಎಂನಲ್ಲಿ ಹಲ್ಲೆ ಮಾಡಿದ್ದನ್ನು ಆತನೆ ಮದನಪಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡುತ್ತಾನೆ. ಈ ಮಾಹಿತಿಯನ್ನು ಮದನಪಲ್ಲಿ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ ಕೂಡಲೇ ನಮ್ಮ ಪೊಲೀಸರು ವಶಕ್ಕೆ ಪಡೆದುಕೊಂಡರು. ಅಲ್ಲಿಂದ ಕರೆದಂತೆ ವಿಚಾರಣೆ ನಡೆಸಿ 2017ರಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ಕೋರ್ಟ್​ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.

ದೋಷಾರೋಪಣೆ ಪಟ್ಟಿಯ ಮೇರೆಗೆ ಸತತ ಮೂರು ವರ್ಷಗಳ ವಿಚಾರಣೆ ನಡೆಸಿದ 65ನೇ ಸಿಟಿ ಸಿವಿಲ್ ಕೋರ್ಟ್​ ನ್ಯಾಯಾಧೀಶರಾದ ರಾಜೇಶ್ವರ ಅವರು, ಇದು ಗಂಭೀರವಾದ ಪ್ರಕರಣ ಎಂದು ಅಭಿಪ್ರಾಯ ಪಟ್ಟು 10 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿದರು. ಸದ್ಯ 8 ವರ್ಷಗಳ ನಂತರ ಅಪರಾಧಿಗೆ ಶಿಕ್ಷೆಯಾಗಿದ್ದು, ಗಾಯಗೊಂಡ ನರಳಿದ್ದ ಜ್ಯೋತಿ ಉದಯ್​ಗೆ ಸಂತಸ ತಂದಿದೆ.

Next Story

RELATED STORIES