Top

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ

ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು.

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ
X

ಬೆಂಗಳೂರು: ನಾನು ಶಾಸಕನಾದ ಮೇಲೆ ಯಾವುದು ಗಲಾಟೆ ಇರಲಿಲ್ಲ, ಯಾರೋ ಬೇಕಂತಲೇ ಕಿಡಿಗೇಡಿಗಳು ಮಾಡಿರೋ ಕೆಲಸ ಅಂದುಕೊಂಡಿದ್ದೆ ಎಂದು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ತಮ್ಮ ಮನೆ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ನಮ್ಮ ಕಾರ್ಪೊರೇಟರ್​ಗಳಾಗಲಿ, ಸಾಮಾನ್ಯ ಕಾರ್ಯಕರ್ತರಾಗಲಿ ಅವರ ಜೊತೆ ಅಣ್ಣ-ತಮ್ಮಂದಿರಂತೆ ಜನರ ಕೆಲಸ ಮಾಡಿಕೊಂಡಿದ್ದೆ ಎಂದು ಹೇಳಿದರು.

ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು. ಇವತ್ತು ನಮ್ಮ ಮನೆ ಹಾಗೂ ನಮ್ಮ, ತಮ್ಮನ ಮನೆ ಮೇಲೆ ಬೆಂಕಿ ಹಚ್ಚುವ ಕೆಲಸ, ಜೊತೆಗೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪೊಲೀಸ್ ಸ್ಟೇಷನ್​ಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಯಾರು ಅಪರಾಧಿಗಳಿದ್ದಾರೆ ಅವರ ವಿರುದ್ದ ಸಿಸಿಬಿ ಪೊಲೀಸರು ಚಾರ್ಜ್​ಶಿರ್ಟ್ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಸಂಪತ್ ರಾಜ್ ಇರಲಿ, ಜಾಕಿರ್ ಇರಲಿ ಅವರೇಲ್ಲ ನಮ್ಮ ಜೊತೆ ಇದ್ದೋರು. ವಾರ್ಡ್​ನಲ್ಲಿ ಯಾವುದೇ ಕೆಲಸ ಆಗಬೇಕು ಅಂದ್ರೆ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದೆ. ಅವರು ಈತರ ಕೆಲಸ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಅಖಂಡ ಶ್ರೀನಿವಾಸ್​ ಮೂರ್ತಿ ಅವರು ಮಾತನಾಡಿದ್ದಾರೆ.

Next Story

RELATED STORIES