Top

ಮುತ್ತಪ್ಪ ರೈ ಮಗ ರಿಕ್ಕಿ ರೈ ನಿವಾಸದ ಮೇಲೆ ಸಿಸಿಬಿ ದಾಳಿ

ಇಂದು ಬೆಳಗ್ಗೆ ದಿವಂಗತ ಮುತ್ತಪ್ಪ ರೈ ಮಗ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಮಾಹಿತಿ ಕಲೆಹಾಕಲು ರಿಕ್ಕಿ ರೈಯನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಮುತ್ತಪ್ಪ ರೈ ಮಗ ರಿಕ್ಕಿ ರೈ ನಿವಾಸದ ಮೇಲೆ ಸಿಸಿಬಿ ದಾಳಿ
X

ಬೆಂಗಳೂರು: ಮಾಜಿ ಭೂಗತ ಪಾತಕಿಯ ಅಂಗಳದಲ್ಲಿ ಈಗ ಡ್ರಗ್ಸ್ ನ ಕರಿಛಾಯೆ ಮೂಡಿದೆ. ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾಗಿದ್ದ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಮನೆಗೆ ಇಂದು ಸಿಸಿಬಿ ದಾಳಿ ನಡೆಸಿತ್ತು. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಒಡೆತನದಲ್ಲಿರುವ ಸದಾಶಿವನಗರದಲ್ಲಿರುವ ಮನೆ ಮತ್ತೆ ಬಿಡದಿ ಮನೆಗೆ ದಾಳಿ ನಡೆಸಿದ ಸಿಸಿಬಿ ಮಹತ್ತರವಾದ ಸಾಕ್ಷಿಗಳನ್ನ ಕಲೆ ಹಾಕಿದೆ. ಇನ್ನು ಪೂರಕ ಸಾಕ್ಷಿಗಳನ್ವಯ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದ ಸಿಸಿಬಿ ಇಂದು ಬೆಳಗ್ಗೆ 6 ಗಂಟೆಗೆ ಎರಡೂ ಕಡೆ ದಾಳಿ ನಡೆಸಿದರು.

ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಅವರ ಮೊದಲನೇ ಪುತ್ರನಾಗಿರುವ ರಿಕ್ಕಿ ರೈಗೆ ಸಾಕಷ್ಟು ಗಣ್ಯರ ಒಡನಾಟವೂ ಇದೆ ಹಾಗೆ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕವೂ ಇದೆ ಎಂಬ ಮಾಹಿತಿ ಹಿನ್ನಲೆ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಎರಡು ಮನೆಗಳ ಮೇಲೆ ದಾಳಿಯನ್ನ ನಡೆಸಿದರು.

ಬಂಧಿತರಾಗಿರುವ ರವಿಶಂಕರ್ ವಿರೇನ್ ಖನ್ನ ಸೇರಿದಂತೆ ಹಲವರು ರಿಕ್ಕಿ ರೈನ ಸಂಪರ್ಕದಲ್ಲಿದ್ದ ಎಂದು ವಿಚಾರಣೆ ವೇಳೆ ಸಾಬೀತಾಗಿದೆ. ಅಷ್ಟೆಅಲ್ಲದೆ ಡ್ರಗ್ ಪೆಡ್ಲರ್ ಗಳಿಗೆ ರಿಕ್ಕಿ ಆಶ್ರಯವನ್ನ ನೀಡಿದ್ದಾನೆ ಎಂದು ತಿಳಿದುಬಂದಿದೆ.ಹಾಗೆ ಪರಾರಿಯಾಗಿರುವ ಆದಿತ್ಯಾ ಆಳ್ವನ ಸಂಪರ್ಕದಲ್ಲಿಯೂ ರಿಕ್ಕಿ ರೈ ಇದ್ದಾನೆ ಎಂಬ ಅನುಮಾನ ಸಿಸಿಬಿ ಅಧಿಕಾರಿಗಳಿಗಿದೆ. ಈ ಹಿನ್ನೆಲೆ ಇಂದು ದಾಳಿ ನಡೆಸಲಾಗಿದ್ದು ಮೊದಲು ರಿಕ್ಕಿಯ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ. ನಂತರ ಸದಾಶಿವನಗರ ಮನೆಯಲ್ಲಿ ಸರ್ಚಿಂಗ್ ಮುಗಿದ ಬಳಿಕ ರಿಕ್ಕಿಯನ್ನ ಬಿಡದಿಯ ಮನೆಗೆ ಕರೆದೊಯ್ದು ಅಲ್ಲಿ ಸಿಕ್ಕಿರುವ ಕೆಲ ದಾಖಲಾತಿಗಳು ಸೇರಿದಂತೆ ಹಲವು ಅಂಶಗಳ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಾಗಿದೆ.

ಇನ್ನು ಈ ಹಿಂದೆ ಸಿಸಿಬಿ ಅಧಿಕಾರಿಗಳು ಮಾಜಿ ಪ್ರಭಾವಿ ರಾಜಕಾರಣಿಯ ಸಂಬಂಧಿ ಸಂಗೀತ್ ನನ್ನ ವಿಚಾರಣೆ ಕರೆಸಿದ್ದ ಸಿಸಿಬಿ, ಸಾಕಷ್ಟು ಎನಕೌರಿಯನ್ನ ನಡೆಸಿತ್ತು ಆ ಸಂಧರ್ಭದಲ್ಲಿಯೂ ರಿಕ್ಕಿ ರೈ ನ ಹೆಸರು ಕೇಳು ಬಂದಿತ್ತು ಎನ್ನಲಾಗಿದೆ .ಸದ್ಯ ಸಂಗೀತ್ ಜೊತೆಯೂ ರಿಕ್ಕಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಬಂಧಿತರು ಮತ್ತಷ್ಟು ಗಣ್ಯರ ಹೆಸರನ್ನ ಬಾಯ್ಬಿಟ್ಟಿದ್ದು,ಮುಂದಿನ ದಿನಗಳಲ್ಲಿ ಸಿಸಿಬಿ ನೊಟೀಸ್ ನೀಡ್ತಾರೋ ಅಥವಾ ಡೈರೆಕ್ಟ್ ದಾಳಿ ನಡೆಸಿ ವಶಕ್ಕೆ ಪಡಿತಾರೋ ಕಾದು ನೋಡಬೇಕಿದೆ. ಸದ್ಯ ಈಗಾಗಲೆ ಶಂಕೆ ಇರುವ ವ್ಯಕ್ತಿಗಳ ಬಗ್ಗೆ ಸಿಸಿಬಿ ಹದ್ದಿನ ಕಣ್ಣಿಟ್ಟಿದೆ.


Next Story

RELATED STORIES